ಆರ್ ಬಿಐ ಗವರ್ನರ್ ಗೆ ತುರ್ತು ಬುಲಾವ್ ನೀಡಿದ ಸಂಸತ್ ಸಮಿತಿ

ನವದೆಹಲಿ, ಗುರುವಾರ, 19 ಏಪ್ರಿಲ್ 2018 (07:39 IST)

ನವದೆಹಲಿ: ಇತ್ತೀಚೆಗೆ ನಡೆದ ಬ್ಯಾಂಕ್‍ ಹಗರಣಗಳ ಬಗ್ಗೆ ವಿಚಾರಣೆ ನಡೆಸಲು ತಕ್ಷಣವೇ ತಮ್ಮ ಎದುರು ಹಾಜರಾಗುವಂತೆ ಎಂ ವೀರಪ್ಪ ಮೊಯಿಲಿ ನೇತೃತ್ವದ ಸಂಸತ್ತಿನ ಆರ್ಥಿಕ ಸಮಿತಿ ಸೂಚನೆ ನೀಡಿದೆ.
 
‘ಮೇ 17 ರಂದು ತಜ್ಞರ ಸಮಿತಿ ಎದುರು ಹಾಜರಾಗಲು ಗವರ್ನರ್ ಊರ್ಜಿತ್ ಪಟೇಲ್ ಗೆ ಸೂಚಿಸಿದ್ದೇವೆ. ಅವರ ಬಳಿ ಇತ್ತೀಚೆಗಿನ ಬ್ಯಾಂಕಿಂಗ್ ಹಗರಣಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ವಿಚಾರಣೆ ನಡೆಸಲಿದ್ದೇವೆ’ ಎಂದು ತಜ್ಞರ ಸಮಿತಿ ಹೇಳಿದೆ.
 
ಉದ್ಯಮಿ ನೀರವ್ ಮೋದಿ ಪ್ರಕರಣ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರದಲ್ಲಿ ನಡೆದ ಅವ್ಯವಹಾರಗಳ ಕುರಿತು ಈ ಸಮಿತಿ ತನಿಖೆ ನಡೆಸಲಿದೆ. ಮಾಜಿ ಪ್ರಧಾನಿ ಮನಮೋಹನ್‍ ಸಿಂಗ್ ಕೂಡಾ ಈ ಸಮಿತಿಯ ಸದಸ್ಯರಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸಂಸತ್ ಸಮಿತಿ ಆರ್ ಬಿಐ ಊರ್ಜಿತ್ ಪಟೇಲ್ ವ್ಯವಹಾರ Rbi Business Urjith Patel Parliamentary Panel

ವ್ಯವಹಾರ

news

ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸುತ್ತಿದೆಯೇ? ಆರ್ ಬಿಐ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಯಾವ ಎಟಿಎಂ ಕಡೆಗೆ ಹೋದರೂ ನೋ ಕ್ಯಾಶ್ ಎಂಬ ಬೋರ್ಡ್ ಕಾಣಿಸುತ್ತಿದೆಯೇ? ...

news

ಸಾಲ ವಿತರಣೆಯಲ್ಲಿ ಅವ್ಯವಹಾರವಾಗಿಲ್ಲ

ಮುಂಬೈ: ನ್ಯೂ ಪವರ್ ರಿನೀವಬಲ್ಸ್ ನಲ್ಲಿ ಹೂಡಿಕೆ ಮಾಡಲು ಐಸಿಐಸಿಐ ಬ್ಯಾಂಕ್ ತಮಗೆ ವಿತರಿಸಿರುವ ಸಾಲದಲ್ಲಿ ...

news

ರಿಲಯನ್ಸ್ ಜಿಯೋದಿಂದ ಹೊಸ ಲ್ಯಾಪ್ ಟಾಪ್ ಬಿಡುಗಡೆ

ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಗಳ ಜನಪ್ರಿಯತೆಯ ಬಳಿಕ ಇದೀಗ ರಿಲಯನ್ಸ್ ಜಿಯೋ ಲ್ಯಾಪ್ ಟಾಪ್ ...

news

ವಿರಾಟ್ ಕೊಹ್ಲಿ ಮನೆಗೆ ಬಂತು ಮತ್ತೊಂದು ದುಬಾರಿ ಕಾರು

ಮುಂಬೈ: ಐಪಿಎಲ್ ಶುರುವಾಗುವ ಮೊದಲು ಆಡಿ ಸೀರೀಸ್ ನ 3 ಕೋಟಿ ರೂ. ಬೆಲೆಯ ಹೊಸ ಕಾರು ಖರೀದಿಸಿದ್ದ ವಿರಾಟ್ ...

Widgets Magazine