200 ರೂ ಮುಖಬೆಲೆಯ ನೋಟು ಶೀಘ್ರ ಚಲಾವಣೆಗೆ

ಮುಂಬೈ, ಗುರುವಾರ, 29 ಜೂನ್ 2017 (17:18 IST)

Widgets Magazine

200 ಮುಖಬೆಲೆಯ ನೋಟುಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಈಗಾಗಲೆ ನೋಟು ಮುದ್ರಣಕ್ಕೆ ಆದೇಶವನ್ನು ನೀಡಲಾಗಿದೆ.
 
ಈ ಮೂಲಕ ಮುಂದಿನ ದಿನಗಳಲ್ಲಿ 100 ಮತ್ತು 500 ನೋಟುಗಳ ನಡುವೆ 200 ರೂಪಾಯಿ ನೋಟು ಕೂಡ ಚಲಾವಣೆಗೆ ಬರಲಿದೆ. ಈ ಮೂಲಕ ನಗದು ವ್ಯವಹಾರದಲ್ಲಿ ತಲೆದೋರಿರುವ ಸಮಸ್ಯೆ ನಿವಾರಣೆಯಾಗಲಿದೆ. 200 ರೂ. ನೋಟು ಬಿಡುಗಡೆಯಿಂದ ದಿನನಿತ್ಯದ ವ್ಯವಹಾರಗಳು ಇನ್ನೂ ಸುಗಮವಾಗಲಿದೆ' ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ತಜ್ಞ ಕಾಂತಿ ಘೋಷ್‌ ಹೇಳಿದ್ದಾರೆ. ಅಪನಗದೀಕರಣ ಬಳಿಕ ಕೇಂದ್ರ ಸರ್ಕಾರ 200 ರೂ. ನೋಟು ಹೊರತರುವ ತೀರ್ಮಾನ ಮಾಡಿತ್ತು. ಈ ಪ್ರಸ್ತಾವನೆಯನ್ನು ರಿಸರ್ವ್‌ ಬ್ಯಾಂಕ್‌ ಅನುಮೋದಿಸಿತ್ತು. 2000
ರೂ. ಮತ್ತು 500 ರೂ. ಹೊಸ ನೋಟುಗಳ ನಡುವಿನ ಅಂತರವನ್ನು 200ರ ನೋಟು ತುಂಬಲಿದೆ ಎಂದು ಘೋಷ್‌ ಹೇಳಿದ್ದಾರೆ.
 
ಇನ್ನು ಈ ನೋಟು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳನ್ನು ಹೊಂದಿರಲಿದೆ. ಸದ್ಯ ಇದರ ಗುಣಮಟ್ಟ ಮತ್ತು ಭದ್ರತೆಗಳ ಕುರಿತ ಪರೀಕ್ಷೆ  ಮಧ್ಯಪ್ರದೇಶದ ಹೊಸಂಗಾಬಾದ್‌ನ ಸರ್ಕಾರಿ ಮುದ್ರಣಾಲಯದಲ್ಲಿ ನಡೆಸಲಾಗುತ್ತಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಟೊಮೆಟೋ ಸಾರು ಮಾಡುವವರು ಹುಷಾರು!

ಬೆಂಗಳೂರು: ಟೊಮೆಟೊ ನಮ್ಮ ಪ್ರತಿ ನಿತ್ಯದ ಅಡುಗೆಗೆ ಬೇಕೇ ಬೇಕು. ಆದರೆ ಇನ್ನು ಕಿಲೋಗಟ್ಟಲೆ ಟೊಮೆಟೊ ...

news

ಇನ್ಮುಂದೆ ಕನ್ನಡ ಭಾಷೆಯಲ್ಲಿ ರೈಲು ಟಿಕೆಟ್ ಲಭ್ಯ

ಬೆಂಗಳೂರು: ಇನ್ಮುಂದೆ ಪ್ರಯಾಣಿಕರಿಗೆ ಕನ್ನಡ ಭಾಷೆಯಲ್ಲಿಯೇ ರೈಲು ಟಿಕೆಟ್ ಲಭ್ಯವಾಗಲಿದೆ ಎಂದು ರೈಲ್ವೆ ...

news

ವೈರಸ್..ವೈರಸ್…! ನಿಮ್ಮ ಕಂಪ್ಯೂಟರ್ ಬಗ್ಗೆ ಎಚ್ಚರ!

ನವದೆಹಲಿ: ಮತ್ತೆ ವಿಶ್ವದಾದ್ಯಂತ ಕಂಪ್ಯೂಟರ್ ಗಳಿಗೆ ಹ್ಯಾಕರ್ ಹಾವಳಿ ಶುರುವಾಗಿದೆ. ಭಾರತವೂ ಸೇರಿದಂತೆ ...

news

2018ರಿಂದ ಬದಲಾಗಲಿದೆ ಹಣಕಾಸು ವರ್ಷ

150 ವರ್ಷಗಳ ಹಳೇಯ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ 2018ರಿಂದ ಹಣಕಾಸು ...

Widgets Magazine