ಶಾಕಿಂಗ್! 2000 ರೂ. ನೋಟು ಪ್ರಿಂಟ್ ಸ್ಥಗಿತಗೊಳಿಸಿದ ಆರ್ ಬಿಐ!

ನವದೆಹಲಿ, ಬುಧವಾರ, 26 ಜುಲೈ 2017 (11:04 IST)

ನವದೆಹಲಿ: ನೋಟು ನಿಷೇಧದ ನಂತರ ಹೊಸದಾಗಿ ಬಿಡುಗಡೆಯಾದ 2000 ರೂ. ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ. ಅದರ ಬದಲಿಗೆ 200 ರೂ. ನೋಟುಗಳ ಮುದ್ರಣಕ್ಕೆ ತಯಾರಿ ಆರಂಭಿಸಿದೆ.


 
‘ಐದು ತಿಂಗಳಿನಿಂದ 2000 ರೂ. ನೋಟುಗಳ ಮುದ್ರಣ ನಿಲ್ಲಿಸಿತ್ತು. ಈ ವರ್ಷ ಪೂರ್ತಿ ಈ ನೋಟುಗಳ ಮುದ್ರಣ ಮಾಡುವುದು ಅನುಮಾನ’ ಎಂದು ಆರ್ ಬಿಐ ಮೂಲಗಳು ಹೇಳಿವೆ. ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ 200 ರೂ. ನೋಟುಗಳ ಮುದ್ರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಚಲಾವಣೆಗೆ ಬರಬಹುದೆಂದು ಮೂಲಗಳು ಹೇಳಿವೆ.
 
ಇದೀಗ 200 ರೂ. ನೋಟುಗಳ ಭದ್ರತೆ, ಸುರಕ್ಷತೆ, ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ. ಇದರ ನಂತರ ನೋಟುಗಳು ಚಲಾವಣೆಯಾಗಬಹುದು ಎನ್ನಲಾಗಿದೆ. 2000 ರೂ. ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ಆತಂಕಗೊಳ್ಳಬೇಕಿಲ್ಲ. 2000 ರೂ. ನೋಟು ಚಲಾವಣೆಯಲ್ಲಿರುತ್ತದೆ. ಆದರೆ ನೋಟುಗಳ ಪೂರೈಕೆ ಕೊಂಚ ಕಡಿಮೆಯಾಗಬಹುದೇನೋ ಎಂದು ಆರ್ ಬಿಐ ಸ್ಪಷ್ಟನೆ ನೀಡಿದೆ.
 
ಇದನ್ನೂ ಓದಿ..  ಎಡವಟ್ಟು ಮಾಡಿ ಯುವರಾಜ್ ಸಿಂಗ್ ರಿಂದ ನಗೆಪಾಟಲಿಗೀಡಾದ ಶಿಖರ್ ಧವನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರೆಡ್ಮಿ ನೋಟ್-4 ಸ್ಫೋಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಷಿಯಾಮಿ ಇಂಡಿಯಾ

ಬೆಂಗಳೂರಿನಲ್ಲಿ ನಡೆದಿದ್ದ ರೆಡ್ಮಿ ನೋಟ್-4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ...

news

ಮುಂದಿನ ತಿಂಗಳು ಬರಲಿದೆ ಹೊಸ ನೋಟು.. ಯಾವುದು ಗೊತ್ತಾ..?

ನೋಟು ಅಮಾನ್ಯ ಬಳಿಕ ದೇಶಾದ್ಯಂತ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸಿದ್ದು, ಈಗಲೂ ಜನ ಇದರಿಂದ ...

news

10,000 ಅಂಕಗಳ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಾಣ

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ...

news

ಎಲ್ಲಾ ಜಿಯೋ ಮಾಯೆ… ಮತ್ತೊಂದು ಕಂಪನಿಯ ಹೊಸ ಆಫರ್ ಏನು ಗೊತ್ತಾ?

ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ...

Widgets Magazine