ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ ನೀಡಿದ ಮಾನ್ಸೂನ್ ಹಂಗಮಾ ಆಫರ್ ಇಂದು ಆರಂಭ

ನವದೆಹಲಿ, ಶನಿವಾರ, 21 ಜುಲೈ 2018 (07:15 IST)

ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಸ್ಕೀಮ್ ವೊಂದನ್ನು  ಆರಂಭಿಸುತ್ತಿದ್ದು, ಅದು ಇಂದಿನಿಂದ ಲಭ್ಯವಾಗಲಿದೆ.


ಈ ಜಿಯೊಫೋನ್ ಮಾನ್ಸೂನ್ ಹಂಗಮಾ ಆಫರ್ ಅಡಿಯಲ್ಲಿ, ಗ್ರಾಹಕರು ಯಾವುದೇ ಬ್ರಾಂಡ್ ನ ಹಳೆಯ ಫೀಚರ್ ಫೋನ್ ಗಳನ್ನು ರೂ. 501ಕ್ಕೆ ಬದಲಾಯಿಸಿ ಹೊಸ ಜಿಯೋಫೋನ್ ಪಡೆದುಕೊಳ್ಳುವ ಆಯ್ಕೆ ನೀಡಿದೆ. ಅಂದರೆ ಹಳೆಯ ಫೀಚರ್ ಫೋನ್ ಜೊತೆ ರೂ.501 ಪಾವತಿಸಿ ಹೊಸ ಜಿಯೋಫೋನ್2 ಖರೀದಿಸಬಹುದು.


ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದ್ದು ಇಂದಿನಿಂದ  ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಆಫರ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ರಿಲಯನ್ಸ್ ಜಿಯೊ ಈ ಯೋಜನೆಯ ನಿಯಮ ಮತ್ತು ಷರತ್ತುಗಳನ್ನು ಇಂದು ಘೋಷಿಸಲಿದೆ. ಆಗಸ್ಟ್ 15ರ ನಂತರ ಈಗಿರುವ ಮತ್ತು ಹೊಸ ಜಿಯೊಫೋನ್ ಬಳಕೆದಾರರಿಗೆ ಫೇಸ್ ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳು ಕೂಡ ಲಭ್ಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬೈಕ್ ವಲಯದಲ್ಲಿ ಮತ್ತೆ ಮಿಂಚುತ್ತಿದೆ ಹೋಂಡಾ ನವಿ

ಭಾರತದ ದ್ವೀಚಕ್ರ ಉದ್ಯಮದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತನ್ನ ನೂತನ ಮಾದರಿಯಾದ ...

news

10 ನಿಮಿಷದಲ್ಲೇ ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ

ಬೆಂಗಳೂರು : ರೇಷನ್ ಕಾರ್ಡ್ ಮಾಡುವ ಸಲುವಾಗಿ ಕಚೇರಿಗಳಿಗೆ ಅಲೆದಾಡುತ್ತಾ ಕೆಲವು ಅಧಿಕಾರಿಗಳ ಲಂಚದ ಆಸೆಗೆ ...

news

ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್; ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 4 ಫೋನ್ ಬೆಲೆಯಲ್ಲಿ ಇಳಿಕೆ

ಬೆಂಗಳೂರು : ಮೊಬೈಲ್ ಪ್ರಿಯರಿಗೊಂದು ಸಂತಸದ ಸುದ್ದಿ. ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ...

news

ಮತ್ತೆ ಬಿರುಗಾಳಿ ಎಬ್ಬಿಸಲಿದೆ ನೋಕಿಯಾ...!

ಒಂದು ಕಾಲದಲ್ಲಿ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ ನೋಕಿಯಾ ಇದೀಗ ಎಚ್‌ಎಮ್‌ಡಿ ಗ್ಲೋಬಲ್ ...

Widgets Magazine