ಜಿಯೋ ಸಿಮ್ ಆಯ್ತು.. ಇದೀಗ 500 ರೂ.ಗೆ 4 ಜಿ ಮೊಬೈಲ್ ನೀಡುತ್ತಾ ರಿಲಯನ್ಸ್?!

NewDelhi, ಬುಧವಾರ, 5 ಜುಲೈ 2017 (11:15 IST)

ನವದೆಹಲಿ: ರಿಲಯನ್ಸ್ ಜಿಯೋ ಎಂದ ತಕ್ಷಣ ಇದೀಗ ಜನರ ಕಿವಿ ನೆಟ್ಟಗಾಗುತ್ತದೆ. ಅಗ್ಗದ ದರದಲ್ಲಿ 4 ಜಿ ಇಂಟರ್ ನೆಟ್ ಒದಗಿಸಿದ ರಿಲಯನ್ಸ್ ಸಂಸ್ಥೆ ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿತ್ತು.


 
ಇದೀಗ ಮತ್ತೆ ಜಿಯೋ ಸದ್ದು ಮಾಡುತ್ತಿದೆ. ಕಡಿಮೆ ದರದಲ್ಲಿ ಇಂಟರ್ ನೆಟ್ ಒದಗಿಸಿದರೆ ಸಾಕೇ? ಎಷ್ಟೋ ಜನರಿಗೆ 4 ಜಿ ಸಪೋರ್ಟ್ ಮಾಡುವ ಮೊಬೈಲ್ ಖರೀದಿಸುವ ಹಣಕಾಸಿನ ಸಾಮರ್ಥ್ಯವಿರುವುದಿಲ್ಲ. ಹೀಗಾಗಿ 2 ಜಿ ಫೋನ್ ಇಟ್ಟುಕೊಂಡು ಪರದಾಡುವ ಗ್ರಾಹಕರ ನೆರವಿಗೆ ಜಿಯೋ ಬರಲಿದೆ.
 
ಅಂದರೆ ಕಡಿಮೆ ಖರ್ಚಿನಲ್ಲಿ 4ಜಿ  ವಾಯ್ಸ್ ಓವರ್ ಎಲ್ ಟಿಇ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡಲು ರಿಲಯನ್ಸ್ ಚಿಂತನೆ ನಡೆಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಬಹುಶಃ ಈ ತಿಂಗಳ 21 ಕ್ಕೆ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.
 
ಹಾಗಾದಲ್ಲಿ ಗ್ರಾಹಕರಿಗೆ 4 ಜಿ ಇಂಟರ್ ನೆಟ್ ಸೇವೆ ಪಡೆಯಲು ಅಗ್ಗದ ಬೆಲೆಯಲ್ಲಿ ಮೊಬೈಲ್ ಖರೀದಿ ಮಾಡಬಹುದಾಗಿದೆ. ಆಗಾಗ ಹೊರಬಿಡುವ ಭರ್ಜರಿ 4 ಜಿ ಆಫರ್ ಗಳಿಗೆ ಗ್ರಾಹಕರನ್ನು ಸೆಳೆಯುಲ ರಿಲಯನ್ಸ್ ಇಂತಹದ್ದೊಂದು ಐಡಿಯಾ ಮಾಡಿದೆ ಎನ್ನಲಾಗಿದೆ.
 
ಇದನ್ನೂ ಓದಿ... ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ಸಂಕಷ್ಟದಲ್ಲಿ ಮಲಯಾಳಂ ಸ್ಟಾರ್ ನಟ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಿಷೇಧಗೊಂಡಿರುವ ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡಲಿದೆಯೇ ಸರ್ಕಾರ...?

ಅಮಾನ್ಯಗೊಂಡಿರುವ 500 ಹಾಗೂ 1000 ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಜಮೆ ಮಾಡಲು ಇನ್ನೊಂದು ಅವಕಾಶವನ್ನು ...

news

ಜುಲೈ 12ರಂದು ಪೆಟ್ರೋಲ್ ಬಂಕ್ ಬಂದ್

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಜುಲೈ 12ರಂದು ದೇಶಾದ್ಯಂತ ...

news

ಜಿಎಸ್ ಟಿ ಇಫೆಕ್ಟ್: ಯಾವುದು ಅಗ್ಗ? ಯಾವುದು ದುಬಾರಿ?

ನವದೆಹಲಿ: ಕೊನೆಗೂ ಜಿಎಸ್ ಟಿಗೆ ಚಾಲನೆ ಸಿಕ್ಕಿದೆ. ಇದೀಗ ಯಾವುದು ಅಗ್ಗ ಯಾವುದು ದುಬಾರಿ ಎಂಬುದು ಜನ ...

news

ಒಂದು ದೇಶ, ಒಂದು ತೆರಿಗೆ ಐತಿಹಾಸಿಕ ಜಿಎಸ್ ಟಿ ಜಾರಿ

ಏಕರೂಪ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ಮಧ್ಯರಾತ್ರಿ ಚಾಲನೆ ದೊರೆತಿದೆ.

Widgets Magazine