ರೆಪೋದರ ಕಡಿತ: ವಾಣಿಜ್ಯ ಬ್ಯಾಂಕ್`ಗಳ ಸಾಲದ ಮೇಲಿನ ಬಡ್ಡಿ ದರ ಶೀಘ್ರ ಇಳಿಕೆ..?

ನವದೆಹಲಿ, ಬುಧವಾರ, 2 ಆಗಸ್ಟ್ 2017 (16:58 IST)

ಅಂತೂ ಇಂತೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಳೆದು ತೂಗಿ ಹಲವು ವರ್ಷಗಳ ಬಳಿಕ ರೆಪೋ ದರವನ್ನ ಕಡಿತಗೊಳಿಸಿದೆ. ಶೇ. 6.25 ರಷ್ಟಿದ್ದ ರೆಪೋ ದರದಲ್ಲಿ ಶೇ.0.25ರಷ್ಟನ್ನ ಕಡಿತಗೊಳಿಸಲಾಗಿದ್ದು, ಶೇ.6ಕ್ಕೆ ಇಳಿಸಲಾಗಿದೆ.


ನವೆಂಬರ್ 2010ಕ್ಕಿಂತಲೂ ಅತ್ಯಂತ ಕಡಿಮೆ ರೆಪೋ ದರವಿದು ಎನ್ನಲಾಗುತ್ತಿದೆ.ಇದರಿಂದ ಬ್ಯಾಂಕ್`ಗಳು ಗ್ರಾಹಕರಿಗೆ ನೀಡಿರುವ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಬಹುದಾಗಿದೆ. ವಾಣಿಜ್ಯ ಬ್ಯಾಂಕ್`ಗಳು ದರ ಕಡಿತವನ್ನ ಗ್ರಾಹಹಕರಿಗೆ ತಲುಪಿಸಬೇಕು ಎಂದು ಆರ್`ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ಆರ್`ಬಿಐ ಕಡಿತಗೊಳಿಸಿರುವುದರಿಂದ ಬ್ಯಾಂಕ್`ಗಳು ಈಗಾಗಲೇ ನೀಡಿರುವ ಮತ್ತು ಭವಿಷ್ಯದಲ್ಲಿ ನೀಡಲಿರು ಗೃಹ ಸಾಲ, ವಾಹನ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ಸಾಲಗಳ ಮೇಲಿನ ಬಡ್ಡಿ ದರ ಕಡಿತಗೊಳ್ಳಲಿದೆ. ಇದರ ಜೊತೆಗೆ ರಿವರ್ಸ್ ರೆಪೋ(ವಾಣಿಜ್ಯ ಬ್ಯಾಂಕ್`ಗಳು ರಿಸರ್ವ್ ಬ್ಯಾಂಕ್`ನಲ್ಲಿಟ್ಟಿರುವ ಠೇವಣಿಗೆ ಕೊಡುವ ಬಡ್ಡಿ ದರ) ದರವನ್ನೂ 6 ರಿಂದ ಶೇ 5.75ಕ್ಕೆ ಇಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಿಮಾನದಲ್ಲಿ ಸುಂದರ ಯುವತಿ ಪಕ್ಕದಲ್ಲಿ ಕೂರುವ ಕನಸಿಗೆ ಬಿತ್ತು ಕತ್ತರಿ!

ನವದೆಹಲಿ: ಜಾಹೀರಾತೊಂದರಲ್ಲಿ ಮಹಿಳೆ ಸ್ವಲ್ಪ ಸೀಟ್ ಅಡ್ಜಸ್ಟ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಯುವಕ ...

news

ಮೋದಿ ಎಫೆಕ್ಟ್ : ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆ

ನವದೆಹಲಿ: ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆಯಾಗಲಿದೆ ಎಂದು ಕೇಂದ್ರದ ಅನಿಲ ಖಾತೆ ಸಚಿವಾಲಯದ ...

news

ಆಧಾರ ಲಿಂಕ್ ಮಾಡದಿದ್ರೆ ಪ್ಯಾನ್‌ಕಾರ್ಡ್ ಕ್ಯಾನ್ಸಲ್

ನವದೆಹಲಿ: ಆಧಾರ ಲಿಂಕ್ ಮಾಡದಿದ್ದರೆ ಪ್ಯಾನ್‌ಕಾರ್ಡ್‌ ಕ್ಯಾನ್ಸಲ್ ಆಗುತ್ತದೆ ಎಂದು ಕೇಂದ್ರ ಕಂದಾಯ ...

news

ಟೊಮೆಟೋ ಬಳಕೆದಾರರಿಗೆ ಸಿಹಿ ಸುದ್ದಿ

ಬೆಂಗಳೂರು: ದೇಶದಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿ ಸಾರು, ರಸಂ ಮಾಡದ ಪರಿಸ್ಥಿತಿಗೆ ಬಂದಿತ್ತು ಗೃಹಿಣಿಯರ ...

Widgets Magazine