Widgets Magazine
Widgets Magazine

ಪವರ್‌ಫುಲ್ ಸೌಲಭ್ಯಗಳೊಂದಿಗೆ ಸ್ಯಾಂಸಂಗ್ ಸ್ಮಾರ್ಟ್‌ಫೋನ್

New Delhi, ಮಂಗಳವಾರ, 7 ಮಾರ್ಚ್ 2017 (11:46 IST)

Widgets Magazine

ಪ್ರಮುಖ ಎಲಕ್ಟ್ರಾನಿಕ್ ಉತ್ಪನ್ನಗಳ ಸ್ಯಾಂಸಂಗ್ ಕಂಪೆನಿ ಮೊಬೈಲ್ ತಯಾರಿಕೆಯಲ್ಲಿ ತನ್ನದೇ ಆದಂತಹ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಅದಕ್ಕನುಗುಣವಾಗಿ ಕಾಲಕಾಲಕ್ಕೆ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. 
 
ಇತ್ತೀಚೆಗೆ ಗ್ಯಾಲಕ್ಸಿ ಎ7, ಎ5 ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎ (2017) ಸೀರೀಸ್ ಮೂಲಕ ಅತ್ಯಾಧುನಿಕ, ವಿನೂತನ ವಿನ್ಯಾಸದ ಫೋನ್ ಬಿಡುಗಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಸ್ಯಾಂಸಂಗ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಅಸಿಂ ವರ್ಸಿ ಮಾತನಾಡುತ್ತಾ, ನಮ್ಮ ಗ್ರಾಹಕರಿಗಾಗಿ ಅತ್ಯಾಧುನಿಕ ಮೊಬೈಲ್‌ಗಳನ್ನು ತರಲು ನಾವು ಯಾವತ್ತೂ ಮುಂದಿರುತ್ತೇವೆ ಎಂದಿದ್ದಾರೆ.
 
ಸದ್ಯಕ್ಕೆ ಬಿಡುಗಡೆ ಮಾಡಿರುವ ಫೋನ್‌ಗಳೂ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. ಗ್ಯಾಲಾಕ್ಸಿ ಎ2017 ಸೀರೀಸ್‌ನ ಈ ಫೋನ್‌ಗಳು ನೀರು, ಧೂಳು ಬಿದ್ದರೂ ತಡೆದುಕೊಂಡು ಕಾರ್ಯನಿರ್ವಹಿಸಲಿವೆ. ಗ್ಯಾಲಕ್ಸಿ ಎ7 ಬೆಲೆ ರೂ.34,490, ಎ5 ಬೆಲೆ ರೂ.28,990. 
 
ಗ್ಯಾಲಾಕ್ಸಿ ಎ7, ಎ5 ವಿಶೇಷತೆಗಳು
* 5.7 ಇಂಚಿನ ಫುಲ್‌ ಎಚ್‌ಡಿ ಸ್ಪರ್ಶಸಂವೇದಿ ಪರದೆ (ಎ7)
* 5.2 ಇಂಚಿನ ಸ್ಪರ್ಶ ಸಂವೇದಿ ಪರದೆ (ಎ5)
* ಡ್ಯುಯಲ್ ಸಿಮ್
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ
* 32 ಜಿಬಿ ಆಂತರಿಕ ಮೆಮೊರಿ
* 256 ಜಿಬಿವರೆಗೂ ಮೆಮೊರಿ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ
* ಫಿಂಗರ್ ಪ್ರಿಂಟ್ ಸ್ಕ್ಯಾನರ್
* 4ಜಿ ಎಲ್‍ಟಿಇ, ವಿವೋ ಎಲ್‍ಟಿಇ ಸಪೋರ್ಟ್
* 1.9 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 3ಜಿಬಿ ರ‍್ಯಾಮ್
* 16 ಮೆಗಾ ಪಿಕ್ಸೆಲ್ ಮುಂಬದಿ, ಹಿಂಬದಿ ಕ್ಯಾಮೆರಾ
*  3600 ಎಂಎಎಚ್ ಬ್ಯಾಟರಿ (ಎ7)
* 3000 ಎಂಎಎಚ್ ಬ್ಯಾಟರಿ (ಎ5)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಬಾಗಿಲು ಮುಚ್ಚಿದ ಜನರಲ್ ಮೋಟಾರ್ಸ್ ಘಟಕ

ಗುಜರಾತ್‌ನಲ್ಲಿನ ಹಲೋಲ್ ಜನರಲ್ ಮೋಟರ್ಸ್ ಘಟಕವನ್ನು ಏಪ್ರಿಲ್ 2017ರಿಂದ ಮುಚ್ಚುತ್ತಿರುವುದಾಗಿ ...

news

ವಾಹನಗಳ ವಿಮಾ ಕಂತು ಶೇ.50 ರಷ್ಟು ಹೆಚ್ಚಳ ಸಾಧ್ಯತೆ

ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ಶೇ.50ರಷ್ಟು ಹೆಚ್ಚಾಗಲಿದೆ ಎಂಬ ಸುದ್ದಿ ಈಗ ವಾಹನ ಮಾಲೀಕರಿಗೆ ಶಾಕ್‍ ...

news

ಫ್ಲಿಪ್‌ಕಾರ್ಟ್‌ನಲ್ಲಿ ಶೇ.20-30ರಷ್ಟು ನೇಮಕಾತಿ ಹೆಚ್ಚಳ

ಪ್ರಮುಖ ಇ-ಕಾಮರ್ಸ್ ದಿಗ್ಗಜ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಕಂಪೆನಿ ಈ ವರ್ಷ ಶೇ.20-30ರಷ್ಟು ಹೆಚ್ಚಿನ ...

news

ರೂ.30 ಸಾವಿರ ತಲುಪಿದ ಬಂಗಾರದ ಬೆಲೆ

ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಬೇಡಿಕೆ ಇಲ್ಲದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಮುಖವಾಗಿದ್ದು ...

Widgets Magazine Widgets Magazine Widgets Magazine