ತನ್ನ ನಾಲ್ಕು ಸೇವೆಗಳಲ್ಲಿ ಬದಲಾವಣೆ ಮಾಡಲಿದೆಯಂತೆ ಎಸ್.ಬಿ.ಐ

ನವದೆಹಲಿ, ಸೋಮವಾರ, 29 ಅಕ್ಟೋಬರ್ 2018 (14:14 IST)

ನವದೆಹಲಿ : ಎಸ್.ಬಿ.ಐ. ತನ್ನ ಗ್ರಾಹಕರ ಹಿತದೃಷ್ಟಿಯಿಂದ ಮುಂದಿನ 60 ದಿನಗಳಲ್ಲಿ ಅದರ ನಾಲ್ಕು ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿರುವುದಾಗಿ ತಿಳಿದುಬಂದಿದೆ.


ಆ ನಾಲ್ಕು ಸೇವೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ :

*ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಡಿಸೆಂಬರ್ 1ರ ಒಳಗೆ ಬ್ಯಾಂಕಿನೊಂದಿಗೆ ನೋಂದಾಯಿಸಬೇಕು. ಇಲ್ಲವಾದರೆ ಇಂಟರ್ ನೆಟ್ ಪಡೆಯಲು ಸಾಧ್ಯವಾಗುವುದಿಲ್ಲ.

*ನವೆಂಬರ್ 1ರಿಂದ ತನ್ನ ಎಸ್.ಬಿ.ಐ. ಬುಡ್ಡಿ ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿರುವ ಕಾರಣ  ಅದರ ಬದಲು ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆ ಮಾಡಬೇಕೆಂಬುದಾಗಿ ತಿಳಿಸಿದೆ.

*ಬ್ಯಾಂಕಿನ ಕ್ಲಾಸಿಕ್ ಮತ್ತು ಮೆಸ್ಟ್ರೋ ಕಾರ್ಡ್ ಗಳನ್ನು ಬಳಸುವ ಗ್ರಾಹಕರು ಅಕ್ಟೋಬರ್ 31ರ ನಂತರ ಎಟಿಎಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆಯಲು ಸಾಧ್ಯವಾಗುವುದಿಲ್ಲ.

*ಎಟಿಎಂಗಳಿಂದ ನಗದ ಹಣ ತೆಗೆದುಕೊಳ್ಳುವಾಗ ನಡೆಯುವ ವಂಚನೆಯನ್ನು ತಪ್ಪಿಸಲು ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಎಟಿಎಂನಿಂದ ಹಣ ಪಡೆದುಕೊಳ್ಳುವ ಮಿತಿ ಕಡಿತಗೊಳಿಸಲಾಗುತ್ತಿದೆ. ಹಾಗೇ ಮ್ಯಾಗ್ನೆಟಿಕ್ ಸ್ವೈಪ್ ಆಧಾರಿತ ಡೆಬಿಟ್ ಕಾರ್ಡುಗಳ ಬಳಕೆ  ಡಿಸೆಂಬರ್ ನಿಂದ ಸ್ಥಗಿತಗೊಳ್ಳಲಿರುವ ಕಾರಣ  ಈಗಾಗಲೇ ಹಳೆ ಕಾರ್ಡ್ ಬದಲು ಚಿಪ್ ಆಧಾರಿತ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದಿನೇ ದಿನೇ ಇಳಿಕೆಯಾಗುತ್ತಿದೆ ಪೆಟ್ರೋಲ್-ಡೀಸೆಲ್ ಬೆಲೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಇಳಿಕೆ ಮಾಡಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ...

news

ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಗ್ರಾಹಕರಿಗೆ ನೀಡುತ್ತಿದೆ ಬಂಪರ್ ಆಫರ್

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ವೊಂದನ್ನು ...

news

ಗುಡ್ ನ್ಯೂಸ್; ಇನ್ನುಮುಂದೆ ಎಟಿಎಂಗಳಿಂದ ಹಣ ತೆಗೆಯಲು ಕಾರ್ಡ್ ಗಳು ಬೇಕಾಗಿಲ್ಲವಂತೆ

ನವದೆಹಲಿ : ಗ್ರಾಹಕರು ಎಟಿಎಂಗಳಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ...

news

ಬಿ.ಎಸ್.ಎನ್.ಎಲ್ ನ ಧನಲಕ್ಷ್ಮಿ ಯೋಜನೆಯಡಿ ಗ್ರಾಹಕರಿಗೊಂದು ಬಂಪರ್ ಆಫರ್

ನವದೆಹಲಿ : ಬಿ.ಎಸ್.ಎನ್.ಎಲ್ ಗ್ರಾಹಕರಿಗೊಂದು ಸಿಹಿಸುದ್ದಿ. ಧನಲಕ್ಷ್ಮಿ ಯೋಜನೆಯಡಿ ತನ್ನ ಗ್ರಾಹಕರಿಗೆ ...

Widgets Magazine