ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

Mumbai, ಸೋಮವಾರ, 10 ಜುಲೈ 2017 (14:37 IST)

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ಮಂದಿ ಗ್ರಾಹಕರಾದರು. ಆದರೆ ಆ ಗ್ರಾಹಕರು ಶಾಕ್ ಆಗುವ ಸುದ್ದಿ ಬಂದಿದೆ.


 
ರಿಲಯನ್ಸ್ ಜಿಯೋ ಸಂಸ್ಥೆಯ ಗ್ರಾಹಕರ ವೈಯಕ್ತಿಕ ವಿವರಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ಹ್ಯಾಕರ್ ಗಳ ಹಾವಳಿ ಎಂದು ಶಂಕಿಸಲಾಗಿದೆ. ಆದರೆ ಸಂಸ್ಥೆ ಇದಕ್ಕೆ ಸ್ಪಷ್ಟನೆ ನೀಡಿದ್ದು, ಡಾಟಾಬೇಸ್ ಉಲ್ಲಂಘನೆಯಾಗಿಲ್ಲ ಎಂದಿದೆ.
 
ಆದರೆ ಭಾನುವಾರ ಟ್ವಿಟರ್ ನಲ್ಲಿ ವೆಬ್ ಸೈಟ್ ಒಂದರ ವಿಳಾಸ ಓಡಾಡುತ್ತಿತ್ತು. ಇದನ್ನು ಓಪನ್ ಮಾಡಿದರೆ ಗ್ರಾಹಕರ ವೈಯಕ್ತಿಕ ವಿವರಗಳನ್ನು ತಿಳಿಯಬಹುದಾಗಿತ್ತು. ಇದರಲ್ಲಿ ರಿಲಯನ್ಸ್ ಜಿಯೋ ಗ್ರಾಹಕರ  ಸಂಪೂರ್ಣ ವಿಳಾಸ, ಫೋನ್ ನಂಬರ್ ನೋಡಬಹುದಾಗಿತ್ತು. ಆದರೆ ತಕ್ಷಣವೇ ಆ ವೆಬ್ ಸೈಟ್ ನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಗ್ರಾಹಕರು ಕೊಂಚ ಮಟ್ಟಿಗೆ ನಿರಾಳವಾಗಬಹುದಾಗಿದೆ.
 
ಈ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹೇಳಿಕೆ ನೀಡಿದ್ದು, ಗ್ರಾಹಕರ ವಿವರಗಳು ಸುರಕ್ಷಿತವಾಗಿದೆ ಎಂದಿದೆ. ಇಂತಹದ್ದೊಂದು ಎಡವಟ್ಟಿನ ವೆಬ್ ಸೈಟ್ ನ ವಿವರಗಳ ಕುರಿತು ತನಿಖೆ ನಡೆಯುತ್ತಿದೆ.
 
ಇದನ್ನೂ ಓದಿ.. ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತಾ?’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ

ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ...

news

ನಕಲಿ ಸರಕುಗಳನ್ನು ಗುರುತಿಸಲು ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್

ಲಂಡನ್: ಔಷಧಿ, ದಿನಸಿ ವಸ್ತುಗಳಿಂದ ಹಿಡಿದು ಕಾರಿನ ಭಾಗಗಳವರೆಗೆ ಶೇ.100 ರಷ್ಟು ನಿಖರತೆ ಹೊಂದಿರುವ ನಕಲಿ ...

news

ಕೆಟಿಎಂ ಬೈಕ್ ಗಳಿಗೆ ಭರ್ಜರಿ ಆಫರ್

ಜಿಎಸ್ ಟಿ ಜಾರಿಗೆ ಬಂದ ಬೆನ್ನಲ್ಲೇ ಕೆಟಿಎಂ ಬೈಕ್ ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.. ಈ ಬಗ್ಗೆ ...

news

ಅತ್ಯಾಕರ್ಷಕ GLA ಮಾದರಿಯ ಕಾರುಗಳನ್ನ ಪರಿಚಯಿಸುತ್ತಿರುವ Mercedes Benz

ದೇಶದ ಅತಿದೊಡ್ಡ ಐಶಾರಾಮಿ ಕಾರುಗಳ ಉತ್ಪಾದನಾ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಅತ್ಯದ್ಭುತ ಮತ್ತು ...

Widgets Magazine
Widgets Magazine