ವಾಹನಸವಾರರಿಗೊಂದು ಶಾಕಿಂಗ್ ನ್ಯೂಸ್. ಸದ್ಯದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ, ಬುಧವಾರ, 5 ಡಿಸೆಂಬರ್ 2018 (10:59 IST)

ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ನೋಡಿ ಸಂತಸದಲ್ಲಿರುವ ವಾಹನಸವಾರರಿಗೊಂದು ಶಾಕಿಂಗ್ ನ್ಯೂಸ್. ಸದ್ಯದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಕೆ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ.


ಹೌದು. ಇತ್ತೀಚೆಗೆ  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದ್ದ ಕಾರಣ, ಭಾರತದ ತೈಲ ಕಂಪನಿಗಳು ಅದಕ್ಕನುಗುಣವಾಗಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿದ್ದವು.


ಆದರೆ ಸೋಮವಾರದಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ 4.65 ರಷ್ಟು ಏರಿಕೆಯಾಗಿದ್ದು, ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.


ಇನ್ನು ತೈಲ ರಪ್ತು ರಾಷ್ಟ್ರಗಳ ಒಕ್ಕೂಟದ ಸಭೆ ಈ ವಾರ ನಡೆಲಿದ್ದು, ಜಾಗತೀಕ ಮಾರುಕಟ್ಟೆ ತೈಲ ಪೂರೈಕೆಯನ್ನು ಕಡಿತಗೊಳಿಸುವ ಬಗ್ಗೆ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಹೆಚ್ಚಳವಾಗಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವೋಡಾಫೋನ್ ನೀಡ್ತಿದೆ 159 ರೂಪಾಯಿಯ ಹೊಸ ಪ್ಲಾನ್

ಬೆಂಗಳೂರು : ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 159 ರೂಪಾಯಿಯ ಹೊಸ ...

news

ಹೊಸ ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್. ನಿಂದ ಬಂಪರ್ ಆಫರ್

ಬೆಂಗಳೂರು : ದೇಶದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿ ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ...

news

ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಆನ್‌ಲೈನ್ ಸ್ಟಾರ್ಟಪ್ ಕಂಪನಿಯಲ್ಲಿ ಸಿಗಲಿದೆಯಂತೆ

ಬೆಂಗಳೂರು : ಇನ್ನುಮುಂದೆ ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳಿಗಾಗಿ ಜನರು ಪರದಾಡಬೇಕಾಗಿಲ್ಲ. ಯಾಕೆಂದರೆ ಈ ...

news

ಕೇಂದ್ರ ಸರಕಾರದಿಂದ ಜನತೆಗೆ ಸಿಹಿಸುದ್ದಿ; ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ

ನವದೆಹಲಿ : ಕಳೆದ ಕೆಲವು ದಿನಗಳಿಂದ ಸಿಲೆಂ‍ಡರ್ ಬೆಲೆ ಏರುತ್ತಿರುವುದನ್ನು ಕಂಡು ಚಿಂತೆಗೊಳಗಾಗಿದ್ದ ...

Widgets Magazine
Widgets Magazine