ಚಿಪ್ ರಹಿತ ಎಟಿಎಂ ಕಾರ್ಡ್ ಬದಲಾಯಿಸದ ಗ್ರಾಹಕರಿಗೆ ಆರ್.ಬಿ.ಐ ನೀಡಿದೆ ಈ ಸೂಚನೆ

ನವದೆಹಲಿ, ಮಂಗಳವಾರ, 8 ಜನವರಿ 2019 (07:04 IST)

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಡೆಬಿಟ್ ಕಾರ್ಡ್ ನಲ್ಲಿ ಆಗುತ್ತಿರುವ ವಂಚನೆ ತಪ್ಪಿಸಲು ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳಿಸಿ, ಇಎಂವಿ ಚಿಪ್ ಇರುವ ಕಾರ್ಡ್ ನ್ನು ಗ್ರಾಹಕರು ಪಡೆದುಕೊಳ್ಳುವಂತೆ ಘೋಷಣೆ ಮಾಡಿತ್ತು.  ಆದರೆ ಇದೀಗ  ಈ ನಿಯಮವನ್ನು ಸಡಿಲಗೊಳಿಸಿದೆ.

ಹೌದು. ಆರ್.ಬಿ.ಐ ಡಿಸೆಂಬರ್ 31, 2018ಕ್ಕೆ ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳ್ಳಲಿರುವ ಕಾರಣ ಅಷ್ಟರೊಳಗೆ ಇಎಂವಿ ಚಿಪ್ ಇರುವ ಕಾರ್ಡ್ ನೀಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಅದರಂತೆ ಶೇಕಡಾ 40 ರಷ್ಟು ಬ್ಯಾಂಕ್ ಗ್ರಾಹಕರು ಮಾತ್ರ ಕಾರ್ಡ್ ಬದಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಗ್ರಾಹಕರ ಬಳಿ ಹಳೆ ಕಾರ್ಡ್ ಗಳೇ ಇರುವ ಕಾರಣ ಅವರಿಗೆ ವ್ಯವಹಾರದಲ್ಲಿ ತೊಂದರೆಯಾಗಬಹುದೆಂಬ ಉದ್ದೇಶದಿಂದ ಇದೀಗ ಆರ್.ಬಿ.ಐ. ತನ್ನ ನಿಯಮವನ್ನು ಸಡಿಲಗೊಳಿಸಿದೆ.

 

ಚಿಪ್ ಇಲ್ಲದ ಮ್ಯಾಜಿಸ್ಟ್ರಿಪ್ ಕಾರ್ಡ್ ಕೂಡ ಕೆಲಸ ಮಾಡಲಿದೆ. ಆದರೆ ಹಳೆ ಕಾರ್ಡ್ ಎಲ್ಲಿಯವರೆಗೆ ಕೆಲಸ ಮಾಡಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದ್ದರಿಂದ ಇಎಂವಿ ಚಿಪ್ ಕಾರ್ಡ್ ಬ್ಯಾಂಕ್ ನಲ್ಲಿಯೇ ಇದ್ದು, ಶಾಖೆಗೆ ಬಂದು ಹೊಸ ಕಾರ್ಡ್ ಪಡೆಯುವಂತೆ ಬ್ಯಾಂಕ್ ಗಳು ಗ್ರಾಹಕರಿಗೆ ಮನವಿ ಮಾಡುವಂತೆ ಆರ್.ಬಿ.ಐ ಸೂಚಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್; ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಏರಿಕೆ

ಬೆಂಗಳೂರು : ಕಳೆದ 10 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಇಳಿಕೆಯಾಗುತ್ತಿದ್ದ ಕಾರಣ ಸರ್ಕಾರದ ...

news

ಐಓಸಿ ವತಿಯಿಂದ ಮನೆ ಬಾಗಿಲಿಗೆ ಬರಲಿದೆಯಂತೆ ಪೆಟ್ರೋಲ್-ಡೀಸೆಲ್

ನವದೆಹಲಿ : ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಹಾಕಿಸಲು ವಾಹನ ಸವಾರರು ಇಷ್ಟುದಿನ ಪೆಟ್ರೋಲ್ ಪಂಪ್ ಗೆ ...

news

ಮೂರು ಬ್ಯಾಂಕುಗಳ ವಿಲೀನಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಸಂಪುಟ

ನವದೆಹಲಿ : ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಮೂಲಕ ಇದೀಗ ವಿಜಯ ...

news

ಹೊಸ ವರ್ಷದ ಸೆಲೆಬ್ರೆಷನ್ ನಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಬಂದ ಹಣವೆಷ್ಟು ಗೊತ್ತಾ?

ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಯಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಬಂದಿದೆ. ಆ ...