ವಿವೋದಿಂದ ಎರಡು ಸೆಲ್ಫಿ ಸ್ಮಾರ್ಟ್‍ಫೋನ್

New Delhi, ಮಂಗಳವಾರ, 3 ಜನವರಿ 2017 (12:16 IST)

Widgets Magazine

ಸೆಲ್ಫಿ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಕಂಪನಿ ವಿವೋ. ಆರಂಭದಿಂದಲೂ ಸೆಲ್ಫೀ ಫೋನ್‌ಗಳ ಮೇಲೆ ದೃಷ್ಟಿ ಇಟ್ಟಿರುವ ಈ ಕಂಪನಿ ಇತ್ತೀಚೆಗೆ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಡ್ಯುಯಲ್ ಫ್ರಂಟ್ ಕ್ಯಾಮೆರಾ ಇರುವ ವಿ5 ಪ್ಲಸ್ ಮಾಡೆಲನ್ನು ಈ ತಿಂಗಳು ಜ.23ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.
 
ಇದುವರೆಗೂ ಹಿಂಬದಿ ಎರಡು ಕ್ಯಾಮೆರಾಗಳುಳ್ಳ ಫೋನ್ ವಿಶೇಷವಾಗಿತ್ತು. ಈಗ ಮುಂಬದಿ ಸಹ ಎರಡು ಕ್ಯಾಮೆರಾಗಳೊಂದಿಗೆ ಬರುತ್ತಿರುವುದು ವಿಶೇಷ. ಇದರಿಂದ ಅತ್ಯುತ್ತಮ ಸೆಲ್ಫೀಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಿದೆ ಕಂಪನಿ. 
 
5.5 ಇಂಚು ಸ್ಪರ್ಶಸಂವೇದಿ ಪರದೆಯುಳ್ಳ ಈ ಸ್ಮಾರ್ಟ್‌ಫೋನ್‌ 1.5 ಗಿಗಾ ಹಟ್ಜ್ ಪ್ರೋಸೆಸರ್, 4ಜಿಬಿ ರ್ಯಾಮ್ ಹೊಂದಿದೆ. ಮುಂಬದಿ ಎರಡು 20 ಮೆಗಾಪಿಕ್ಸೆಲ್ ಕ್ಯಾಮೆರಾ, ಹಿಂಬದಿ 13 ಮೆಗಾಪಿಕ್ಸೆಲ್ ಕ್ಯಾಮೆರಾಗಳಿದೆ. 32ಜಿಬಿ ಆಂತರಿಕ ಮೆಮೊರಿ ಜತೆಗೆ 128 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಮೆಮರಿ ಸೌಲಭ್ಯ ಇದೆ. ಬ್ಯಾಟರಿ ಸಾಮರ್ಥ್ಯ 3000 ಎಂಎಎಚ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸರಕಾರದ ’ಭೀಮ್’ ಆಪ್‌ಗೆ ಅದ್ಭುತ ಪ್ರತಿಕ್ರಿಯೆ

ನಗದು ರಹಿತ ವಹಿವಾಟಿಗೆ ಅನುಕೂಲವಾಗಲಿ ಎಂದು ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಭೀಮ್ ಆಂಡ್ರಾಯ್ಡ್ ಆಪ್‌ಗೆ ...

news

15 ದಿನಗಳಲ್ಲಿ ಜನ್‌ಧನ್‌ನಿಂದ 3285ಕೋಟಿ ವಿತ್ ಡ್ರಾ

ಕಳೆದ 15 ದಿನಗಳಲ್ಲಿ ಜನ್‌ಧನ್ ಖಾತೆಗಳಿಂದ ಒಟ್ಟು 3285ಕೋಟಿ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಲಾಗಿದೆ ...

news

ಡಿಸೆಂಬರ್‌ನಲ್ಲಿ ಇಳಿಕೆಯಾದ ಮಾರುತಿ ಮಾರಾಟ

ದೇಶೀಯ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ. ಮುಖ್ಯವಾಗಿ ಡಿಸೆಂಬರ್ ...

news

ರಾಯಲ್ ಎನ್‌ಫೀಲ್ಡ್ ಮಾರಾಟದಲ್ಲಿ ಹೆಚ್ಚಳ

ಯುವಕರಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿರುವ ಬೈಕ್ ರಾಯಲ್ ಎನ್‌ಫೀಲ್ಡ್ ಡಿಸೆಂಬರ್‌ನಲ್ಲಿ ಅತ್ಯಧಿಕ ...

Widgets Magazine Widgets Magazine