ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್!

ನವದೆಹಲಿ, ಗುರುವಾರ, 28 ಸೆಪ್ಟಂಬರ್ 2017 (06:47 IST)

ನವದೆಹಲಿ: ಈ ವಾರಂತ್ಯದಲ್ಲಿ ನವರಾತ್ರಿ ಸಂಭ್ರಮ. ಈಗಾಗಲೇ ಮಾರುಕಟ್ಟೆ ಚುರುಕಾಗಿದೆ. ಗ್ರಾಹಕರಿಗೆ ವಿವಿಧ ಕಂಪನಿಗಳು ಬಂಪರ್ ಆಫರ್ ನೀಡುತ್ತಿದ್ದಾರೆ. ಇದಕ್ಕೆ ಟೆಲಿಕಾಂ ಸಂಸ್ಥೆಗಳೂ ಹೊರತಾಗಿಲ್ಲ.


 
ವೊಡಾಫೋನ್, ಐಡಿಯಾ,  ಏರ್ ಟೆಲ್,  ರಿಲಯನ್ಸ್ ಸೇರಿದಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಬಂಪರ್ ಆಫರ್ ನೀಡುತ್ತಿವೆ. ಯಾರೆಲ್ಲಾ ಯಾವ ಆಫರ್ ನೀಡುತ್ತಿದ್ದಾರೆಂದು ನೋಡೋಣ.
 
ಏರ್ ಟೆಲ್
ಏರ್ ಟೆಲ್ ಹಬ್ಬದ ಪ್ರಯುಕ್ತ 999 ರೂ. ಗಳ 112 ಜಿಬಿ 3 ಜಿ ಅಥವಾ 4 ಜಿ ಡೇಟಾ ಪ್ಯಾಕ್ ನೀಡುತ್ತಿದೆ. ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ.
 
ವೊಡಾಫೋನ್
ವೊಡಾಫೋನ್ ನಿಮ್ಮ ಬಳಿಯಿದ್ದರೆ ತಕ್ಷಣವೇ 4 ಜಿ ಸೂಪರ್ ನೆಟ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ. 9 ದಿನಗಳ ಹಬ್ಬದ ಪ್ರಯುಕ್ತ ವೊಡಾಫೋನ್ ಉಚಿತ ಸಿನಿಮಾ  ಮತ್ತು ರೆಸ್ಟೋರೆಂಟ್ ಟಿಕೆಟ್ ಒದಗಿಸುತ್ತಿದೆ. ಆದರೆ ಇದು ಗುಜರಾತ್ ಗ್ರಾಹಕರಿಗೆ ವಿಶೇಷ ಲಾಭ.
 
ಬಿಎಸ್ಎನ್ಎಲ್
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡಾ ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. 444 ರೂ.ಗಳಿಗೆ ಮೂರು ತಿಂಗಳ ಅವಧಿಗೆ 360 ಜಿಬಿ ಡಾಟಾ ಒದಗಿಸಲಿದೆ.
 
ರಿಲಯನ್ಸ್ ಜಿಯೊ
ರಿಲಯನ್ಸ್ ಜಿಯೊ ಗ್ರಾಹಕರಿಗಾಗಿ ಸೆಪ್ಟೆಂಬರ್ 20 ರಿಂದ 30 ರವರೆಗಿನ ಅವಧಿಗೆ ಹಾಟ್ ಸ್ಪಾಟ್ ಗ್ರಾಹಕರಿಗೆ ಈಗಿರುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರದಲ್ಲಿ ಸೇವೆ ಒದಗಿಸಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೆಲಿಕಾಂ ಸಂಸ್ಥೆ ಏರ್ ಟೆಲ್ ರಿಲಯನ್ಸ್ ಜಿಯೋ ವೊಡಾಫೋನ್ ವಾಣಿಜ್ಯ ಸುದ್ದಿಗಳು Airtel Vodafone Reliance Jio Telecom Company Business News

ವ್ಯವಹಾರ

news

ಬೆಂಗಳೂರು 5 ಜಿ ಪಡೆಯುವ ಮೊದಲ ನಗರವಾಗಲಿದೆ: ಏರ್‌ಟೆಲ್

ಬೆಂಗಳೂರು: ಮುಂಬರುವ ಕೆಲವೇ ತಿಂಗಳುಗಳಲ್ಲಿ 4ಜಿಗಿಂತ ಮೂರು ಪಟ್ಟು ಡೇಟಾ ವೇಗದ ಅನುಭವ ಪಡೆಯಲು ಬೆಂಗಳೂರು ...

news

ದೇಶದ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಬೆಂಗಳೂರು: ಭಾರತದ ಐಟಿ ರಾಜಧಾನಿ, ಬೆಂಗಳೂರು, ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ...

news

ಚೀನಾದಲ್ಲಿ ವ್ಯಾಟ್ಸಪ್ ನಿಷೇಧ: ಯಾಕೆ ಗೊತ್ತಾ?

ಬೀಜಿಂಗ್: ವ್ಯಾಟ್ಸಪ್ ಎನ್ನುವುದು ಇತ್ತೀಚೆಗೆ ನಮ್ಮಲ್ಲರ ದೈನಂದಿನ ಅಗತ್ಯಗಳಲ್ಲಿ ಒಂದು ಎಂದಾಗಿದೆ. ಆದರೆ ...

news

ಎಸ್‌ಬಿಐ ಉಳಿತಾಯ ಖಾತೆಯ ಕನಿಷ್ಠ ಠೇವಣಿ ಇಳಿಕೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಕನಿಷ್ಠ ಠೇವಣಿಯಲ್ಲಿ ಇಳಿಕೆಗೊಳಿಸಿ ಗ್ರಾಹಕರಿಗೆ ...

Widgets Magazine