ಒಂದೇ ಯೋಜನೆಯಲ್ಲಿ 5 ಮಂದಿ ಲಾಭ ಪಡೆಯಲು ವೊಡಾಫೋನ್ ನ ಈ ಪ್ಯಾಕ್ ನ್ನು ರಿಚಾರ್ಜ್ ಮಾಡಿ

ನವದೆಹಲಿ, ಶನಿವಾರ, 8 ಜೂನ್ 2019 (07:29 IST)

ನವದೆಹಲಿ : ಕುಟುಂಬದ ಸದಸ್ಯರೆಲ್ಲರೂ ಒಂದೇ ಯೋಜನೆಯನ್ನು ಹೊಂದಲು ಇಚ್ಚಿಸುವ ಗ್ರಾಹಕರಿಗಾಗಿ ವೊಡಾಫೋನ್ ಹೊಸ ಪ್ಯಾಮಿಲಿ ಪ್ಯಾಕ್ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಈ ಯೋಜನೆಯಲ್ಲಿ ಒಬ್ಬ ಗ್ರಾಹಕ 999 ರೂಪಾಯಿ ರಿಚಾರ್ಜ್ ಮಾಡಿದರೆ ಅದರ ಸೌಲಭ್ಯವನ್ನು ಐದು ಮಂದಿ ಪಡೆಯಬಹುದು. ಆಗ ರೂ. 999ರ ಈ ಪ್ಲಾನ್ ಅನ್ನು ವಿಂಗಡಿಸಿದರೆ ಒಬ್ಬರಿಗೆ ರೂ. 200 ಖರ್ಚು ಮಾಡಿದಂತಾಗುತ್ತದೆ. ಮೂಲ ನಂಬರ್ ಗೆ ಗ್ರಾಹಕರು ಅನಿಯಮಿತ ಕರೆ ಜೊತೆ ಪ್ರತಿ ತಿಂಗಳು 80 ಜಿಬಿ ಡೇಟಾ ಪಡೆಯಬಹುದು. ಉಳಿದ ನಂಬರ್ ಗಳಿಗೆ ಪ್ರತಿ ತಿಂಗಳು 20 ಜಿಬಿ ಡೇಟಾ ಲಭ್ಯವಾಗಲಿದೆ. ಇದರಲ್ಲಿ ರೋಲ್ ಓವರ್ ಸೌಲಭ್ಯವಿದ್ದು, 200 ಜಿಬಿ ಡೇಟಾವರೆಗೆ ಪಡೆಯಬಹುದಾಗಿದೆ.


ಅದರ ಜೊತೆಗೆ ಗ್ರಾಹಕರು ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಒಂದು ವರ್ಷಗಳ ಕಾಲ ಆನಂದಿಸಬಹುದು. ಕೆಲ ದಿನಗಳ ಹಿಂದಷ್ಟೆ ವೋಡಾಪೋನ್ ರೂ. 399 ಹಾಗೂ ರೂ. 499 ಪ್ಲಾನ್ ಜಾರಿಗೆ ತಂದಿತ್ತು. ವೊಡಾಫೋನ್ ಫ್ಲೇ ತನ್ನ ಸದಸ್ಯರಿಗೆ ZEE5, ಸೋನಿ LIV, ಶೆಮಾರು, ಹೋಯಿ ಚೋಯಿ, ಸನ್ NXT ಮತ್ತು ಆಲ್ಟ್ ಬಾಲಾಜಿ ಪ್ರೀಮಿಯಂ ಕಂಟೆಂಟ್ ಪಡೆಯಲು ಅವಕಾಶ ಒದಗಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆರ್ಟಿಜಿಎಸ್ ಹಾಗೂ ನೆಪ್ಟ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ಆರ್.ಬಿ.ಐ.

ನವದೆಹಲಿ : ಆರ್ಟಿಜಿಎಸ್ ಹಾಗೂ ನೆಪ್ಟ್ ವ್ಯವಹಾರಗಳ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ವಹಿವಾಟು ...

news

ಕ್ರಿಕೆಟ್ ನೋಡಿ ಬಹುಮಾನ ಗೆಲ್ಲಲು ಜಿಯೋ ಈ ಪ್ಯಾಕ್ ರಿಚಾರ್ಜ್ ಮಾಡಿ

ಬೆಂಗಳೂರು : ಕ್ರಿಕೆಟ್ ಪ್ರಿಯರಿಗಾಗಿ ರಿಲಾಯನ್ಸ್ ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್ ಎಂಬ ಹೊಸ ಪ್ಲಾನ್ ...

news

ಹೊಸ ಬ್ಯಾಂಕ್ ಗಳಿಗೆ 2-3 ವರ್ಷಗಳ ಕಾಲ ಪರವಾನಗಿ ನೀಡಲ್ಲ- ಆರ್.ಬಿ.ಐ

ನವದೆಹಲಿ : ಹೊಸ ಬ್ಯಾಂಕ್ ಗಳಿಗೆ 2-3 ವರ್ಷಗಳ ಕಾಲ ಪರವಾನಗಿ ನೀಡದಿರಲು ಆರ್.ಬಿ.ಐ. ನಿರ್ಧಾರ ಮಾಡಿದೆ ...

news

ಆದಾಯ ತೆರಿಗೆ ಪಾವತಿ ಮಾಡಿದರೆ ಪ್ರಧಾನಿ ಮೋದಿ ಜೊತೆಗೆ ಟೀ ಕುಡಿಯುವ ಅವಕಾಶ

ನವದೆಹಲಿ : ಆದಾಯ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಹೊಸ ...