ಜಿಯೋಗೆ ಸೆಡ್ಡು.. ವೊಡಫೋನ್-ಐಡಿಯಾ ವಿಲೀನ..

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (13:07 IST)

Widgets Magazine

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್`ನ ಜಿಯೋ ಸೃಷ್ಟಿಸಿದ ಕ್ರಾಂತಿ ಇತರೆ ಟೆಲಿಕಾಂ ಕಂಪನಿಗಳು ನಿದ್ದೆಗೆಡುವಂತೆ ಮಾಡಿದೆ. ಜಿಯೋಗೆ ಸೆಡ್ಡು ಹೊಡೆಯಲು ಹೆಚ್ಚುವರಿ ಡೇಟಾ ಆಫರ್`ಗಳನ್ನ ಜನರ ಮುಂದಿಟ್ಟ ಟೆಲಿಕಾಂ ಕಂಪನಿಗಳು ಇದೀಗ ವಿಲೀನದ ಹಾದಿ ಹಿಡಿದಿವೆ.


ಬ್ರಿಟನ್ ಮೂಲದ ಪ್ರತಿಷ್ಠಿತ ವೊಡಾಫೋನ್ ಮತ್ತು ಭಾರತದ ಐಡಿಯಾ ಟೆಲಿಕಾಂ ಕಂಪನಿ ವಿಲೀನಗೊಂಡಿವೆ. ಈ ಮೂಲಕ ಅತಿ ದೊಡ್ಡ ಟೆಲಿಕಾಂ ಸೇವೆಯಾಗಿ ಹೊರಹೊಮ್ಮುವುದು ಇದರ ಉದ್ದೇಶವಾಗಿದೆ. ಕೆಲ ದಿನಗಳಲ್ಲೇ ಜಿಯೋ ಉಚಿತ ಆಫರ್ ಮೂಲಕ 100 ಮಿಲಿಯನ್(10 ಕೋಟಿ) ಗ್ರಾಹಕರನ್ನ ತಲುಪಿತ್ತು. ವೊಡಾಫೋನ್ ಮತ್ತು ಐಡಿಯಾ ರಿಲಯನ್ಸ್ ಕಂಪನಿಗೆ ಪ್ರತಿ ಸವಾಲು ಹಾಕಲು ಸಜ್ಜಾಗಿವೆ. ಈ ಎರಡೂ ಕಂಪನಿಗಳ ವಿಲೀನದಿಂದಾಗಿ ಜಿಯೋಗಿಂತಲೂ ದೊಡ್ಡ ನೆಟ್ವರ್ಕ್ ಏರ್ಪಡಲಿದ್ದು, 400 ಮಿಲಿಯನ್(40 ಕೋಟಿ) ಗ್ರಾಹಕರು ಒಂದೇ ಟೆಲಿಕಾಂ ಸೇವೆಯಡಿ ಬಂದಂತಾಗಿದೆ.

ಇದರಲ್ಲಿ ವೊಡಾಫೋನ್ ಬಂಡವಾಳ 828 ಬಿಲಿಯನ್ ಆಗಿದ್ದು, ಐಡಿಯಾ ಬಂಡವಾಳ 722 ಬಿಲಿಯನ್ ಆಗಿದೆ.
ಈ ಎರಡು ಬೃಹತ್ ಕಂಪನಿಗಳ ವಿಲೀನ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಉಚಿತ ಸೇವೆಯ ರಸದೌತಣ ಸಿಗುವುದು ಪಕ್ಕಾ ಆಗಲಿದೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

6 ಸಾವಿರಕ್ಕೆ Redmi-4A ಸ್ಮಾರ್ಟ್ ಪೋನ್

ತನ್ನ ವಿಶಿಷ್ಟ ಫೀಚರ್`ಗಳ ಮೂಲಕ ಖ್ಯಾತಿ ಹೊಂದಿರುವ ಕ್ಸಿಯಾಮಿ ಕಂಪನಿ ರೆಡ್ಮಿ ಸೀರಿಸ್`ನ ಮತ್ತೊಂದು ...

news

ಕ್ಯಾಶ್ ವಿತ್ ಡ್ರಾ ಮಿತಿ ಸಂಪೂರ್ಣ ರದ್ದು.. ಎಷ್ಟು ಬೇಕಾದರೂ ಡ್ರಾ ಮಾಡಿ

ನೋಟ್ ಬ್ಯಾನ್ ಬಳಿಕ ನಗದು ವಿತ್ ಡ್ರಾ ಮೇಲೆ ಮಿತಿ ಹೇರಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂದಿನಿಂದ ಸಂಪೂರ್ಣ ...

news

2 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರದ ಬೆಲೆ

ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ದಿಢೀರ್ ಕುಸಿದಿದೆ. ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ...

news

ಮಾರುಕಟ್ಟೆಗೆ ದಾಂಗುಡಿ ಇಟ್ಟ ಇಂಟೆಕ್ಸ್ ಎಸಿಗಳು

ಕಂಪ್ಯೂಟರ್ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಗೃಹೋಪಕರಣಗಳ ಕ್ಷೇತ್ರಕ್ಕೆ ಅಡಿಯಿಟ್ಟ ಇಂಟೆಕ್ಸ್ ಇತ್ತೀಚೆಗೆ ...

Widgets Magazine