ಈ ಮೊಬೈಲ್ ಗಳಲ್ಲಿ ಇನ್ಮುಂದೆ ವಾಟ್ಸ್ ಆಪ್ ತನ್ನ ಸೇವೆ ಸ್ಥಗಿತಗೊಳಿಸಲಿದೆಯಂತೆ!

ಬೆಂಗಳೂರು, ಗುರುವಾರ, 21 ಜೂನ್ 2018 (15:21 IST)

ಬೆಂಗಳೂರು: ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೆಂಜಿಂಗ್ ಆಪ್ ವಾಟ್ಸ್ ಆಪ್ ಸದ್ಯದಲ್ಲೆ ಕೆಲವೊಂದು ಮೊಬೈಲ್ ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಹಳೆಯ ಸಾಧನಕ್ಕೆ ವಾಟ್ಸ್ ಆಪ್ ನ ಹೊಸ ಆಪ್ ಹೊಂದಾಣಿಕೆಯಾಗದಿರುವುದಕ್ಕೆ  ಹೀಗೆ ಮಾಡಲಾಗಿದೆಯಂತೆ.


ಈಗಾಗಲೇ ಕೆಲ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಸ್ಥಗಿತಗೊಂಡಿದ್ದು ಇನ್ನು ಒಂದಷ್ಟು ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಸೇವೆ ಕೊನೆಗೊಳ್ಳಲಿದೆಯಂತೆ. ಇದರ ಕುರಿತು ವಾಟ್ಸ್ ಆಪ್ ಕಂಪೆನಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.
‘ಇದು ಅನಿವಾರ್ಯವಾಗಿರುವುದರಿಂದ ನಾವು ಈ ಹೆಜ್ಜೆ ಇಡುತ್ತಿದ್ದೇವೆ. ನಾವು ವಾಟ್ಸ್ ಆಪ್ ಅನ್ನು ಸಂಪರ್ಕಿಸಲು ಸಾಧ್ಯವಾಗದ ಫೋನ್ ಬಳಕೆ ಮಾಡುತ್ತಿದ್ದಲ್ಲಿ ದಯವಿಟ್ಟು ಒಳ್ಳೆಯ ದರ್ಜೆಯ ಮೊಬೈಲ್ ಅನ್ನು ಖರೀದಿಸಿ’ ಎಂದು ತಿಳಿಸಿದೆ.
ಇನ್ನು ವಾಟ್ಸ್ ಆಪ್ ಸೇವೆ ಸ್ಥಗಿತವಾಗಲಿರುವ ಮತ್ತು ಈಗಾಗಲೇ ಸ್ಥಗಿತಗೊಂಡಿರುವ ಮೊಬೈಲ್ ಫೋನ್ ಗಳು ಯಾವುವು ಎಂಬುದು ಇಲ್ಲಿದೆ ನೋಡಿ.


ನೋಕಿಯಾ ಎಸ್ 40 ಅಥವಾ ನೋಕಿಯಾ ಆಶಾ ಸರಣಿ ಫೋನ್ ಗಳು ವಾಟ್ಸಾ ಆಪ್ ಇರುವುದಿಲ್ಲ. ಹಾಗೇ ನೋಕಿಯಾ ಸಿಂಬಿಯಾನ್ ಎಸ್ 60 ಕೂಡ ಈ ಪಟ್ಟಿಯಲ್ಲಿದೆ ಎಂದು ವಾಟ್ಸ್ ಆಪ್ ತಿಳಿಸಿದೆ.


ಹಾಗೇ ಹಳೆಯ ಆಂಡ್ರಾಯ್ಡ್ ಮೊಬೈಲ್ ನಲ್ಲೂ ವಾಟ್ಸ್ ಆಪ್ ಇನ್ನೇರೆಡು ವರ್ಷಗಳಲ್ಲಿ ವಾಟ್ಸ್ ಆಪ್ ಸೇವೆ ಇಲ್ಲವಂತೆ.
ಇನ್ನು ಐಫೋನ್ 3ಜಿಎಸ್/ಐಒಎಸ್ 6 ಫೆಬ್ರವರಿ 1, 2020ರಿಂದ ವಾಟ್ಸ್ ಆಪ್ ಸೇವೆಯನ್ನು ಪಡೆಯುವುದಿಲ್ಲವಂತೆ. ವಿಂಡೋಸ್ ಫೋನ್ 7.0 ಮತ್ತು 8.0 ಕೂಡ ವಾಟ್ಸ್ ಆಪ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ವಾಟ್ಸ್ ಆಪ್ ತಿಳಿಸಿದೆ.


ವಾಟ್ಸ್ ಆಪ್ ಸೇವೆ ಕೊನೆಗೊಳ್ಳಲಿರುವ ಮೊಬೈಲ್ ಅನ್ನು ಖರೀದಿಸುವುದಕ್ಕಿಂತ ಇತ್ತೀಚಿಗಿನ ಮೊಬೈಲ್  ಖರೀದಿಸಿ.ವಾಟ್ಸ್ ಆಪ್ ಅನ್ನು ಉಪಯೋಗಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಟಿವಿಎಸ್‍‍ನ ಹೈಬ್ರಿಡ್ ಸ್ಕೂಟರ್ ಹೇಗಿದೆ ಗೊತ್ತಾ..?

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ನವೀನ ಪ್ರಯೋಗಗಳ ಮೂಲಕ ಗ್ರಾಹಕರ ಮನಗೆದ್ದಿರುವ ಟಿವಿಎಸ್ ಮೋಟಾರ್ ...

news

ಏರ್‌ಟೆಲ್ ಪ್ಯಾಕೇಜ್ ನೋಡಿ ಬೆದರಿದ ರಿಲಯನ್ಸ್

ದೂರಸಂಪರ್ಕ ಕ್ಷೇತ್ರದಲ್ಲಿ ಉತ್ತಮ ಪ್ಲಾನ್‌ಗಳನ್ನು ನೀಡುವ ಮೂಲಕ ಎಲ್ಲರ ಮನೆಮಾತಾಗಿದ್ದ ರಿಲಯನ್ಸ್ ಒಡೆತನದ ...

news

ಹೊಸ ರೂಪದೊಂದಿಗೆ ಲಗ್ಗೆ ಇಟ್ಟಿದೆ ಬಜಾಜ್ ಪಲ್ಸರ್ ಎನ್‌ಎಸ್200.

ದ್ವೀಚಕ್ರ ತಯಾರಿಕೆಯಲ್ಲಿ ಅಗ್ರಗಣ್ಯದಲ್ಲಿರುವ ಬಜಾಜ್ ತನ್ನ ಹೊಸ ಮಾದರಿಯ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ...

news

ವಿಜಯ್ ಮಲ್ಯ ವಿಮಾನದಿಂದ ನಷ್ಟ ಅನುಭವಿಸುತ್ತಿರುವ ಏರ್ ಪೋರ್ಟ್

ಮುಂಬೈ : ಉದ್ಯಮಿ ವಿಜಯ್‌ ಮಲ್ಯ ಅವರ ವಿಮಾನವನ್ನು 2013ರಿಂದ ಮುಂಬಯಿ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್‌ ...

Widgets Magazine
Widgets Magazine