ರೆಡ್ಮಿ ನೋಟ್-4 ಸ್ಫೋಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಷಿಯಾಮಿ ಇಂಡಿಯಾ

ಬೆಂಗಳೂರು, ಬುಧವಾರ, 26 ಜುಲೈ 2017 (09:11 IST)

ಬೆಂಗಳೂರಿನಲ್ಲಿ ನಡೆದಿದ್ದ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ಸಂಸ್ಥೆ ಸ್ಪಷ್ಟಪಡಿಸಿದೆ. ಮೊಬೈಲ್ ಮಾಲೀಕ ಅನ್ಯ ಚಾರ್ಜರ್ ಬಳಸಿದ್ದರಿಂದ ಫೋನ್ ಸ್ಫೋಟಗೊಂಡು ಬೆಂಕಿಜ್ವಾಲೆ ಹೊತ್ತಿಕೊಂಡಿದೆ. ತನಿಖೆ ವೇಳೆ ಈ ಸತ್ಯ ಧೃಡಪಟ್ಟಿದ್ದು, ಅದರ ಬದಲಾಗಿ ಹೊಸ ರೆಡ್ಮಿ ನೋಟ್-4 ಉಚಿತವಾಗಿ ನೀಡಿರುವುದಾಗಿ ಷಿಯಾಮಿ ಇಂಡಿಯಾ ತಿಳಿಸಿದೆ.


ಬೆಂಗಳೂರಿನಲ್ಲಿ ಮೊಬೈಲ್ ಸ್ಫೋಟಗೊಂಡ ಬಗ್ಗೆ ಇಂಟರ್ನೆಟ್`ನಲ್ಲಿ ಹರಿದಾಡುತ್ತಿದ್ದ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸ್ಫೋಟಗೊಂಡ ಮೊಬೈಲ್`ಗೆ ಬದಲಾಗಿ ಬೇರೆ ಮೊಬೈಲ್ ನೀಡಿಲ್ಲವೆಂದು ಮಾಲೀಕ ದೂರನ್ನ ಸಹ ದಾಖಲಿಸಿದ್ದರು. ರೆಡ್ಮಿ ನೋಟ್-4 ಖರೀದಿಸಿದ್ದ ಬೇರೆ ಗ್ರಾಹಕರಿಗೂ ಈ ಬಗ್ಗೆ ಆತಂಕ ಶುರುವಾಗಿತ್ತು. ಇದೀಗ, ಎಲ್ಲ ಆತಂಕಗಳಿಗೆ ಷಿಯಾಮಿ ಇಂಡಿಯಾ ತೆರೆ ಎಳೆದಿದೆ.

ಮಂಗಳವಾರ ಇಂಟರ್ನೆಟ್`ನಲ್ಲಿ ಹರಿದಾಡಿದ ವಿಡಿಯೋ ರೆಡ್ಮಿ ನೋಟ್-4 ಸಂಬಂಧಿಸಿದ್ದಲ್ಲ. ನಕಲಿ ವಿಡಿಯೋ ಎಂದು ಸ್ಪಷ್ಟಪಡಿಸಿರುವ ಷಿಯಾಮಿ ಇಂಡಿಯಾ, ಇದೇವೇಳೆ, ರೆಡ್ಮಿ ಫೋನ್`ಗಳಿಗೆ ಅದರದ್ಧೇ ಚಾರ್ಜರ್ ಬಳಸುವಂತೆ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮುಂದಿನ ತಿಂಗಳು ಬರಲಿದೆ ಹೊಸ ನೋಟು.. ಯಾವುದು ಗೊತ್ತಾ..?

ನೋಟು ಅಮಾನ್ಯ ಬಳಿಕ ದೇಶಾದ್ಯಂತ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸಿದ್ದು, ಈಗಲೂ ಜನ ಇದರಿಂದ ...

news

10,000 ಅಂಕಗಳ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಾಣ

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ...

news

ಎಲ್ಲಾ ಜಿಯೋ ಮಾಯೆ… ಮತ್ತೊಂದು ಕಂಪನಿಯ ಹೊಸ ಆಫರ್ ಏನು ಗೊತ್ತಾ?

ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ...

news

ಭಾರತೀಯರನ್ನು ಅವಹೇಳನ ಮಾಡಿದ್ದು ‘ಸಂವಹನ ದೋಷದಿಂದ ಎಂದ ಒಪ್ಪೊ ಸಂಸ್ಥೆ

ನವದೆಹಲಿ: ಚೀನಾ ಮೂಲದ ಮೊಬೈಲ್ ಸಂಸ್ಥೆ ಪಂಜಾಬ್ ನ ಕಚೇರಿಯಲ್ಲಿ ಚೀನಾ ಅಧಿಕಾರಿಗಳು ಭಾರತೀಯರ ಬಗ್ಗೆ ...

Widgets Magazine