ಉಪೇಂದ್ರ, ಶಿವಣ್ಣ, ರಾಧಿಕಾ ಜತೆ ಸಾಯಿಪ್ರಕಾಶ್ ಹೊಸ ಇನ್ನಿಂಗ್ಸ್

ಶುಕ್ರವಾರ, 31 ಮೇ 2013 (14:12 IST)

PR
PR
ಹೆಣ್ಮಕ್ಕಳ ನಿರ್ದೇಶಕ ಸಾಯಿ ಪ್ರಕಾಶ್ ಜನಪ್ರಿಯ ಇನ್ನಿಂಗ್ಸ್ ಪುನರಾರಂಭಕ್ಕೆ ಮುಂದಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರಗಳಲ್ಲಿರುವ ಎರಡು ಸಿನಿಮಾಗಳನ್ನು ಕೈಗೆತ್ತಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ!

ಶಿವರಾಜ್ ಕುಮಾರ್ ಜತೆ ಸಾಯಿಪ್ರಕಾಶ್ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅದೇ ರೀತಿ ಉಪ್ಪಿ ಜತೆಗೂ ಒಂದು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ರಾಧಿಕಾ ಪಂಡಿತ್ ಅಂತೂ ಚಿರಪರಿಚಿತ. ಹೀಗಿರುವಾಗ ಯಾವ ಕಲಾವಿದರೂ ಸಾಯಿಪ್ರಕಾಶ್‌ಗೆ ಹೊಸತಲ್ಲ. ಆದರೂ ಮತ್ತೆ ಅವರು ಸ್ಟಾರ್‌ಗಳ ಮೇಲೆ ಕಣ್ಣು ಹಾಕಿರುವುದು ಕುತೂಹಲ ಕೆರಳಿಸಿದೆ.

ತವರಿಗೆ ಬಾ ತಂಗಿ ಮತ್ತು ಅಣ್ಣ-ತಂಗಿ ಚಿತ್ರದ ಸೂಪರ್ ಹಿಟ್ ಜೋಡಿ ಶಿವಣ್ಣ ಮತ್ತು ರಾಧಿಕಾ ಮತ್ತೆ ಅಣ್ಣ-ತಂಗಿಯಾಗುತ್ತಿದ್ದಾರೆ ಎನ್ನುವುದು ತುಂಬಾ ಹಳೆಯ ಸುದ್ದಿ. ಅದನ್ನೀಗ ಸಾಯಿಪ್ರಕಾಶ್ ಮತ್ತೆ ಕೆದಕಿದ್ದಾರೆ. ಕೊನೆಗೂ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಆಗಸ್ಟ್ ತಿಂಗಳಲ್ಲೇ ಹೊಸ ಚಿತ್ರದ ಚಿತ್ರೀಕರಣವಂತೆ.

ಅತ್ತ ನಾಯಕನಾಗಿರುವ ಹೊಸ ಚಿತ್ರವೊಂದನ್ನು ನಿರ್ದೇಶಿಸುವತ್ತಲೂ ಸಾಯಿಪ್ರಕಾಶ್ ಹೊರಟಿದ್ದಾರೆ. ಚಿತ್ರದ ಹೆಸರು 'ಗೌರಿ'. ಇದು ತೆಲುಗಿನ ಸೂಪರ್ ಹಿಟ್ 'ಲಕ್ಷ್ಮಿ' ರಿಮೇಕ್. ಮೂಲ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಅವರು ಲಕ್ಷ್ಮಿ ನಾರಾಯಣ ಹೆಸರಿನ ಪಾತ್ರ ಮಾಡಿದ್ದರು. ಅದನ್ನು ಇಲ್ಲಿ ಉಪ್ಪಿ ಮಾಡಲಿದ್ದಾರೆ. ಕನ್ನಡದಲ್ಲಿ ಪಾತ್ರದ ಹೆಸರು ಗೌರಿಶಂಕರ್.

ಉಪ್ಪಿ ಕಡೆಯಿಂದ ಸಾಯಿಪ್ರಕಾಶ್ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಮಾಹಿತಿಯಿಲ್ಲ. ಆದರೆ ನಾಯಕಿಯರಾಗಿ ಐಂದ್ರಿತಾ ರೇ ಮತ್ತು ಪಾರುಲ್ ಯಾದವ್ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಸದ್ಯ ಸಾಯಿಪ್ರಕಾಶ್ ಕಲಿಗಾಲ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಂತರ ಶಿವಣ್ಣ-ರಾಧಇಕಾ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಈ ಹೊತ್ತಿಗೆ ಉಪ್ಪಿ ತನ್ನ ಬ್ರಹ್ಮ ಮತ್ತು ಬಸವಣ್ಣ ಚಿತ್ರಗಳನ್ನು ಮುಗಿಸಿರುತ್ತಾರೆ. ಬಳಿಕ ಗೌರಿ ಚಿತ್ರೀಕರಣ ಶುರು ಎಂದು ಹೇಳಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine