Widgets Magazine
Widgets Magazine

'ಕಡ್ಡಿಪುಡಿ' ರೂಢಿಯ ಚಿತ್ರವಲ್ಲ, ನನ್ನದೇ ಶೈಲಿ: ದುನಿಯಾ ಸೂರಿ

ಮಂಗಳವಾರ, 21 ಮೇ 2013 (13:50 IST)

Widgets Magazine

PR
'ಓಂ' ಚಿತ್ರದ ರೀತಿಯಲ್ಲೇ ಇದೂ ಇರುತ್ತದೆಯೇ ಎಂದು ಹಲವರು ನನ್ನಲ್ಲಿ ಕೇಳಿದರು. ಅಂದಿನ ಕಾಲಕ್ಕೆ ದೊಡ್ಡ ಹಿಟ್ ಆಗಿದ್ದ ಚಿತ್ರವನ್ನು ಈಗ ಮತ್ತೆ ಅದೇ ರೀತಿ ತೋರಿಸಿದರೆ ಜನ ನೋಡುತ್ತಾರೆಯೇ? ಖಂಡಿತಾ ಇಲ್ಲ, 'ಕಡ್ಡಿಪುಡಿ' ರೂಢಿಯಲ್ಲಿರುವ ಚಿತ್ರವಲ್ಲ. ಇದು ಸಿದ್ಧ ಸೂತ್ರಗಳಿಂದ, ಚೌಕಟ್ಟಿನಿಂದ ಹೊರಗೆ ಬಂದಿರುವ ಸಿನಿಮಾ.

ಹೀಗೆ ತನ್ನ ಸಿನಿಮಾದ ಬಗ್ಗೆ ತೀರಾ ಸ್ಪಷ್ಟತೆಯಿಂದಲೇ ಮಾತನಾಡಿದರು ನಿರ್ದೇಶಕ ದುನಿಯಾ ಸೂರಿ. ಅವರಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸ್ಟಾರ್‌ಗಿರಿಯ ಹಂಗಿಲ್ಲ, ನಾಯಕನಿಗೆ ಬಿಲ್ಡಪ್ ಕೊಡಲೆಂದು ಒಂದಷ್ಟು ಹೊತ್ತು ಸಾಮಾನ್ಯ ಪ್ರೇಕ್ಷಕರಿಗೆ ಹಿಂಸೆ ಕೊಡುವುದೂ ಇಷ್ಟವಿಲ್ಲ. ಉದ್ದೇಶ ಏನಿದ್ದರೂ, ಮನರಂಜನೆ. ಅದರಲ್ಲಿ ಎಡವಿಲ್ಲ ಎಂಬ ಭರವಸೆ ಸೂರಿಯಲ್ಲಿದೆ.

ಇದು ನನ್ನದೇ ಶೈಲಿಯ ಸಿನಿಮಾ. ಇಲ್ಲಿ ನನ್ನದೇ ಶೈಲಿಯಲ್ಲಿ ಶಿವರಾಜ್ ಕುಮಾರ್ ಲಾಂಗ್ ಹಿಡಿಯುತ್ತಾರೆ. ಇದರ ಚಿತ್ರಕಥೆಯೇ ಹಾಗಿದೆ. ಸಂಭಾಷಣೆ, ಚಿತ್ರೀಕರಣ, ಸಿನಿಮಾ ಎಲ್ಲವೂ ಇಲ್ಲಿ ಹೊಸತು ಎಂದು ಹೇಳುವಂತಿದೆ. ವಾಸ್ತವಕ್ಕೆ ಹತ್ತಿರದಲ್ಲೇ ಇರಲಿ ಎಂಬ ಕಾರಣಕ್ಕೆ ಚಿತ್ರೀಕರಣ ಸಂದರ್ಭ ಯಾವುದನ್ನೂ ಒಪ್ಪ ಓರಣವಾಗಿ ಜೋಡಿಸಲು ಹೋಗಿಲ್ಲ. ಹಾಗಾಗಿ ವಾಸ್ತವತೆಯ ಚಿತ್ರಣವೂ ಇಲ್ಲಿ ಕಾಣಬಹುದು.

'ಕಡ್ಡಿಪುಡಿ' ಮಾಮೂಲಿ ಚಿತ್ರವಲ್ಲ. ಈ ಚಿತ್ರವನ್ನು ನೋಡಿದ ನಂತರ, ಇದು ಆ ಚಿತ್ರದ ಹಾಗೆ ಇದೆ ಎಂದು ಯಾರೂ ಹೇಳುವಂತಿಲ್ಲ. ಅಷ್ಟೊಂದು ಬದಲಾವಣೆಗಳನ್ನು ಮಾಡಲಾಗಿದೆ. ನಾಯಕ ತೀರಾ ಸಾಮಾನ್ಯ ವ್ಯಕ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ. ರೌಡಿಯಾಗಿದ್ದವನು ಬದಲಾವಣೆ ಬೇಕೆಂದಾಗ ಸಮಾಜ ಆತನನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.

ಇದಿಷ್ಟೇ ಅಲ್ಲ, ಚಿತ್ರದಲ್ಲಿ ಸಾಕಷ್ಟು ಅಚ್ಚರಿಗಳಿವೆ. ರಾಧಿಕಾ ಪಂಡಿತ್ ಬೇರೆಯದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನನ್ನು ತೀರಾ ಕಾಡಿದ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿರುವುದರಿಂದ ನಿರೀಕ್ಷೆ ನನ್ನಲ್ಲೂ ಜಾಸ್ತಿಯಿದೆ. ಪ್ರೇಕ್ಷಕರಿಗೆ ಇಷ್ಟವಾಗಬಹುದು ಎಂದು ನಂಬಿದ್ದೇನೆ.

ಹೀಗೆ ಕಥೆಯ ಬಗ್ಗೆ, ಅದರ ನಿರೂಪನೆಯ ಬಗ್ಗೆ, ಒಟ್ಟಾಗಿ ಹೊರ ಬಂದಿರುವ ಫಲಿತಾಂಶದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ನಿರ್ದೇಶಕ ಸೂರಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಡ್ಡಿಪುಡಿ ಶಿವರಾಜ್ ಕುಮಾರ್ ದುನಿಯಾ ಸೂರಿ ರಾಧಿಕಾ ಪಂಡಿತ್ ಐಂದ್ರಿತಾ ರೇ ಕನ್ನಡ ಸಿನಿಮಾ

Widgets Magazine
Widgets Magazine Widgets Magazine Widgets Magazine