Widgets Magazine

ಗಾಂಧಿನಗರದಲ್ಲಿ ಶ್ರಾವಣ ಮಾಸದ ಸಂಭ್ರಮ

ಇಳಯರಾಜ|
ಗಾಂಧಿನಗರದಲ್ಲಿ ಮಾಸದ ಕಾರ್ಯ ಭರ್ಜರಿಯಾಗಿ ಸಾಗಿದೆ. ಎಲ್ಲೆಡೆ ಹಬ್ಬದ ವಾತಾವರಣ ಗೋಚರಿಸುತ್ತಿದೆ. ಇದೇನು ಆಷಾಡ ಮಾಸ ನಿನ್ನೆ ಮೊನ್ನೆಯಷ್ಟೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಾಂಧಿನಗರದವರಿಗೆ ಬುದ್ದಿ ಇಲ್ಲವೇ? ಶ್ರಾವಣ ಆಚರಿಸುತ್ತಿದ್ದಾರೆ ಅಂದುಕೊಳ್ಳಬೇಡಿ. ಇದು ಶ್ರಾವಣ ಚಿತ್ರದ ಕುರಿತ ಸುದ್ದಿ.

ಚಿತ್ರದ ಚಿತ್ರೀಕರಣಕ್ಕೆ ಮಾತ್ರ ಆಷಾಢದ ಛಾಯೆ ಆವರಿಸಿಲ್ಲ. ಅದು ನಿರಂತರವಾಗಿ ಸಾಗಿದೆ. ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಗಾಂಧಿನಗರದಲ್ಲಿ ನಡೆಯಿತು. ನಟ ಯೋಗೀಶ್ ಅಲಿಯಾಸ್ ಲೂಸ್ ಮಾದ ಇದರಲ್ಲಿ ಪಾಲ್ಗೊಂಡಿದ್ದರು. ಅಕ್ಷಯ್ ಆಡಿಯೋ ಹೊರತಂದಿರುವ ಚಿತ್ರದ ಧ್ವನಿಸುರುಳಿಯನ್ನು ಅವರು ಬಿಡುಗಡೆ ಸಹ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಬಿ.ಎ. ರಾಜಶೇಖರ್ ಇದೊಂದು ಸಂಗೀತಮಯ ಚಿತ್ರ ಆಗುತ್ತೆ ಅನ್ನುವ ಕಲ್ಪನೆ ಇರಲಿಲ್ಲ. ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವ ಗೊಂದಲ ಶೂಟಿಂಗ್ ಆರಂಭವಾಗುವವರೆಗೂ ಇತ್ತು. ಅಂತಿಮವಾಗಿ ಸ್ನೇಹಿತರ ಮೂಲಕ ಪರಿಚಯವಾದ ಕಾರ್ತಿಕ್ ಭೂಪತಿ ಆಯ್ಕೆಯಾದರು. ನಿಜಕ್ಕೂ ಉತ್ತಮ ಸಂಗೀತ ನೀಡಿ, ಚಿತ್ರವನ್ನು ಸಂಗೀತಮಯವಾಗಿಸಿದ್ದಾರೆ ಎಂದರು.

ಹಾಸ್ಯ, ಭಾವುಕತೆ ಹಾಗೂ ಪ್ರೀತಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರಕಥೆಯಲ್ಲಿ ಹೊಸತನವಿದೆ. ಕಾರ್ತಿಕ್ ಮಲಯಾಳಂನಲ್ಲಿ 100ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕನ್ನಡದ ಪಾಲಿಗೆ ಇದು ಅವರ ಮೊದಲ ಚಿತ್ರ.


ಇದರಲ್ಲಿ ಇನ್ನಷ್ಟು ಓದಿ :