ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗಾಭರಣ ಆಯ್ಕೆ

MOKSHENDRA
`ನಂಯಜಮಾನ್ರು' ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ನಿರ್ದೇಶಕ ಅವರಿಗೆ ಹೊಸದೊಂದು ಜವಾಬ್ದಾರಿ ಕೂಡಾ ಬಂದಿದೆ. ಕನ್ನಡ ಚಿತ್ರಗಳನ್ನು ಪೋಷಿಸುವ ಸಲುವಾಗಿ ಕರ್ನಾಟಕ ಸರ್ಕಾರ ರಚಿಸಿರುವ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಟಿ.ಎಸ್. ನಾಗಾಭರಣ ಅವರನ್ನು ನೇಮಕ ಮಾಡಿದೆ.

ಅಕಾಡೆಮಿಯ ಸದಸ್ಯರಾಗಿ ಎಚ್.ಎನ್.ಮಾರುತಿ, ಜೈ ಜಗದೀಶ್, ಚಿಂದೋಡಿ ಬಂಗಾರೇಶ್, ಎಂ.ಎನ್.ವ್ಯಾಸರಾವ್, ಗುಣಶೀಲಂ, ರವಿಶಂಕರ್, ಕೆ.ಎಚ್.ಸಾವಿತ್ರಿ ನೇಮಕಗೊಂಡಿದ್ದಾರೆ. ವಾರ್ತಾ ಇಲಾಖೆಯ ಜಗನ್ನಾಥ್ ಪ್ರಕಾಶ್ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿದೆ.

ಇಳಯರಾಜ|
ಉತ್ತಮ ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಮಾಡಲು ರಚಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ಸಿದ್ಧಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. 30 ಚಿತ್ರಗಳಿಗೆ ತಲಾ 10 ಲಕ್ಷ ರೂ. ನಂತೆ ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :