Widgets Magazine

ನಿರೀಕ್ಷಿತ ದೇಸಾಯಿ ಚಿತ್ರದಿಂದ ಚೇತನ್ ಔಟ್

ನಾಗೇಂದ್ರ ತ್ರಾಸಿ|
MOKSHA
'ಆ ದಿನಗಳು' ಖ್ಯಾತಿಯ ನಟ ಚೇತನ್, ಪ್ರಸ್ತುತ 'ಸೂರ್ಯಕಾಂತಿ' ಚಿತ್ರದ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸೂರ್ಯಕಾಂತಿ ತೆರೆಕಂಡ ನಂತರ ಚೇತನ್, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಬೇಕಿತ್ತು.

ಎರಡು ಭಾಷೆಗಳಲ್ಲಿ ತಯಾರಾಗುವ ಈ ಚಿತ್ರಕ್ಕೆ ಭಾರತ ಮತ್ತು ಯೂರೋಪ್‌ನಲ್ಲಿ 60 ದಿನಗಳ ಕಾಲದ ಚಿತ್ರೀಕರಣ ಮಾಡುವುದೆಂದು ನಿರ್ಧಾರವಾಗಿತ್ತು. ಆದರೆ, ಹೊಸ ಬೆಳವಣಿಗೆಯಿಂದ ಚೇತನ್, ದೇಸಾಯಿ ಅವರ ಚಿತ್ರದಿಂದ ಹೊರಬಿದ್ದಿರುವುದು ಖಾತ್ರಿಯಾಗಿದೆ.

ನಾನಾ ಕಾರಣದಿಂದಾಗಿ ದೇಸಾಯಿ ಚಿತ್ರದಲ್ಲಿ ಚೇತನ್ ಅವರಿಗೆ ನಟಿಸಲು ಸಾಧ್ಯವಾಗುತ್ತಿಲ್ಲವಂತೆ. ಉತ್ತಮ ತಂತ್ರಜ್ಞರಾದ ದೇಸಾಯಿ ಅವರೊಂದಿಗೆ ಮುಂದಿನ ದಿನಗಳಲ್ಲಾದರೂ ನಟಿಸಲೇಬೇಕು ಎನ್ನುತ್ತಾರೆ ಚೇತನ್.


ಇದರಲ್ಲಿ ಇನ್ನಷ್ಟು ಓದಿ :