ನಿಮ್ಮ ಜತೆ ಈಗಿರುವುದು ನನ್ನ ಅದೃಷ್ಟವೆಂದು ಭಾವಿಸಿದ್ದೇನೆ: ಅಂಬರೀಷ್ ಸುದ್ದಿಗೋಷ್ಠಿ

ಶುಕ್ರವಾರ, 11 ಏಪ್ರಿಲ್ 2014 (17:02 IST)

PR
PR
ಬೆಂಗಳೂರು, ಏ.11: ವಸತಿ ಸಚಿವ ಅಂಬರೀಷ್ ಅವರು ಮಲ್ಯೇಷ್ಯಾದಿಂದ ಹಿಂತಿರುಗಿದ ಬಳಿಕ ನಗರದ ಅಶೋಕ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಗೃಹಸಚಿವ ಕೆ.ಜೆ ಜಾರ್ಜ್, ಪುತ್ರ ಮುಂತಾದವರು ಹಾಜರಿದ್ದರು. ನಿಮ್ಮ ಜತೆ ನಾನು ಈಗಿರುವುದು ನನ್ನ ಅದೃಷ್ಟವೆಂದು ಭಾವಿಸಿದ್ದೇನೆ. ನನ್ನ ನಿರ್ಲಕ್ಷ್ಯದಿಂದ ಆರೋಗ್ಯ ಹದೆಗೆಡಲು ಕಾರಣವಾಯಿತು. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಹಾರೈಕೆ ಇದರಿಂದ ಸಿಕ್ಕಿದೆ. ಯಾವುದೇ ಜಾತಿ, ಧರ್ಮವೆನ್ನದೇ ನನಗೆ ಶುಭ ಹಾರೈಸಿದ್ದಾರೆ ಎಂದು ಅಂಬರೀಷ್ ಹೇಳಿದರು.

ಸಿಂಗಪುರದಲ್ಲಿ ನನ್ನನ್ನು ನೋಡಲು ಬಡವರು ಕೂಡ ದುಡ್ಡು ಹಾಕಿಕೊಂಡು ಅಷ್ಟು ದೂರ ಬಂದಿದ್ದಕ್ಕೆ ಕೃತಜ್ಞನಾಗಿದ್ದೇನೆ. ಜನಗಳು ತಮ್ಮ ಮೇಲೆ ಇರಿಸಿದ ವಿಶ್ವಾಸ, ನಂಬಿಕೆಯಿಂದ ತಾವು ಖಳನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ನಿಮ್ಮೆಲ್ಲರ ಅಭಿಮಾನದಿಂದ ನಾಯಕನಟನಾಗಿ ಬೆಳೆದೆ. ನಂತರ ಸಂಸತ್ ಸದಸ್ಯನಾಗಿ, ಕೇಂದ್ರ ಸಚಿವನಾಗಿ, ರಾಜ್ಯ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ವಸತಿ ಸಚಿವನಾಗಿ ನಾನಾ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಯೋಜಿಸಿದ್ದೇನೆ ಎಂದು ಅಂಬರೀಷ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ...

ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ

ಫತೆಹಪುರ : ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ...

ಪಾಕಿಸ್ತಾನದಲ್ಲಿ ರಸ್ತೆ ಅಫಘಾತ: 30 ಜನರು ಸಾವು

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ...

Widgets Magazine
Widgets Magazine