Widgets Magazine

ರಮ್ಯಾ ಜಗಳವಾಡಿದವರ ಜತೆ ರಾಗಿಣಿ ಪ್ರೀತಿ: ಸಖತ್ ಟಾಂಗ್!

ರಾಜೇಶ್ ಪಾಟೀಲ್|
PR
ಲಕ್ಕಿ ಸ್ಟಾರ್ ರಮ್ಯಾ ಮತ್ತು ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ಆಜನ್ಮ ವೈರಿಗಳಂತೆ ಪರೋಕ್ಷವಾಗಿ ಕಿತ್ತಾಡುತ್ತಿರುವುದು ಹೊಸತೇನಲ್ಲ. ಅವರಿಬ್ಬರು ಹಾವು-ಮುಂಗುಸಿಗಳ ಹಾಗೆ ಆಡುತ್ತಿದ್ದಾರೆ. ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗಿ ಬರುವುದಿಲ್ಲ. ಹೀಗಿರುವಾಗ ರಾಗಿಣಿ ವಿವಾದಕ್ಕೆ ಒಂದಷ್ಟು ಸಮಯದ ನಂತರ ತುಪ್ಪ ಸುರಿದಿದ್ದಾರೆ!

ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ ರಗಳೆ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಅದು ತನ್ನ ಅನುಮತಿ ಇಲ್ಲದೆ 'ನೀರ್ ದೋಸೆ' ಚಿತ್ರದ 'ಅಶ್ಲೀಲ' ಫೋಟೊ ತೆಗೆದಿದ್ದಾರೆ ಮತ್ತು ಅದನ್ನು ಇಂಟರ್ನೆಟ್‌ನಲ್ಲಿ ಶೇರ್ ಮಾಡಿದ್ದಾರೆ ಎಂದು ಸಿನಿಮಾ ಛಾಯಾಗ್ರಾಹಕರ ವಿರುದ್ಧ ಕಿಡಿ ಕಾರಿದ್ದು. ಆ ಮೂಲಕ ಸಿನಿ ಛಾಯಾಗ್ರಾಹಕರನ್ನು ರಮ್ಯಾ ವಿನಾಕಾರಣ ಎದುರು ಹಾಕಿಕೊಂಡಿದ್ದರು. ಅಲ್ಲದೆ, ತಾನು ಮಾಡಿದ್ದೇ ಸರಿ ಎಂದು ಸಮರ್ಥನೆ ಕೂಡ ಮಾಡಿಕೊಂಡಿದ್ದರು.


ಇದರಲ್ಲಿ ಇನ್ನಷ್ಟು ಓದಿ :