Widgets Magazine

ಹೊಸಬರ ಚಿತ್ರ ರಂಗನ್ ಸ್ಟೈಲ್ ಕಾರ್ಯಾರಂಭ

ಬೆಂಗಳೂರು| ವೆಬ್‌ದುನಿಯಾ|
PR
ರಂಗನ್ ಸ್ಟೈಲ್ ಚಿತ್ರ ಶೀರ್ಷಿಕೆಯ ಕಾರಣಕ್ಕೆ ಗಮನ ಸೆಳೆದಿದೆ. ಈಗಾಗಲೇ ಚಿತ್ರತಂಡ ಯಶಸ್ಸಿಗಾಗಿ ಕಸರತ್ತು ಆರಂಭಿಸಿದೆ. ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಹೊಸಬರ ಚಿತ್ರಕ್ಕೆ ಬಲ ತಂದಿದ್ದರೆ, ಝಲಕ್ ದಿಕ್ಲಾಜಾ ಖ್ಯಾತಿಯ ನೃತ್ಯಪಟು ಭಾರತಿ ಸಿಂಗ್ ಗಂಗಮ್ಮನ ಸ್ಟೈಲ್ ಹಾಡಿಗೆ ಮೈ ಮರೆತು ಕುಣಿದಿದ್ದಾರೆ. ಈ ಹಾಡಿನ ಪರಿಕಲ್ಪನೆ, ಸಾಹಿತ್ಯ, ಸಂಗೀತ ನಿರ್ದೇಶನ ಗುರುಕಿರಣ್ ಅವರದ್ದು. ಹೊಸಬರ ಚಿತ್ರಕ್ಕೆ ಅನಗತ್ಯ ವೆಚ್ಚ ಮಾಡುವುದು ಬೇಡ ಎಂದುಕೊಂಡಿದ್ದ ಗುರುಕಿರಣ್ ನಿರ್ಮಾಪಕರ ಒತ್ತಾಯಕ್ಕೆ ಬಿದ್ದು ಶ್ರೇಯಾ ಘೋಷಾಲ್, ಸೋನು ನಿಗಮ್ ಅವರಿಂದ ಹಾಡಿಸಿದ್ದಾರಂತೆ.

ಪ್ರಶಾಂತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಸೀಡಿ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬನ ಪ್ರೇಮಕಥೆಯನ್ನು ಅವರು ಚಿತ್ರದಲ್ಲಿ ಹೇಳಿದ್ದಾರಂತೆ. ನಾಯಕ ಪ್ರದೀಪ್ಗಾಗಿಯೇ ಚಿತ್ರದ ಸಂಭಾಷಣೆಯಲ್ಲಿ ಹೊಸ ಪ್ರಯೋಗ ಮಾಡಿದ್ದಾರಂತೆ. ತಬಲಾ ನಾಣಿ ಚಿತ್ರದಲ್ಲಿ ನಾಯಕನೊಂದಿಗೆ ಕಾಣಿಸಿಕೊಳ್ಳುತ್ತಾರೆ. ಈ ಬಗೆಯ ಪಾತ್ರ ನನಗೆ ಹೊಸತೇನಲ್ಲ ಎನ್ನುವ ಅವರಿಗೆ ಚಿತ್ರದಲ್ಲಿ ಜೋಡಿಯೇ ಇಲ್ಲವಂತೆ. ನನಗೆ ಜೋಡಿಯೇ ಇಲ್ಲ, ಕೊಟ್ಟರೂ ಮುಖ ಮುಚ್ಚಿರುತ್ತಾರೆ ಎಂದು ವಿಕ್ಟರಿ ಚಿತ್ರದ ತಮ್ಮ ಪಾತ್ರವನ್ನು ನೆನಪಿಸಿಕೊಂಡು ನಾಣಿ ನಕ್ಕರು. ಕರಾವಳಿ ತೀರದ ಮೂವರು ಸಹೋದರರು ಅರೇಂಜ್ ಬ್ರದರ್ಸ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಚಿತ್ರ ತೆರೆಕಾಣಲಿದೆ.


ಇದರಲ್ಲಿ ಇನ್ನಷ್ಟು ಓದಿ :