ಕಮಲ್ ಹಾಸನ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಚೆನ್ನೈ, ಸೋಮವಾರ, 31 ಜುಲೈ 2017 (12:57 IST)

ತಮಿಳಿನ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಮಲ್ ಹಾಸನ್ ವಿರುದ್ಧ ಪುಥಿಯಾ ತಮಿಜಗಮ್ ಪಕ್ಷದ ಮುಖಂಡರೊಬ್ಬರು 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
 


ಕೊಳಗೇರಿ ನಿವಾಸಿಗಳು ಮತ್ತು ಗುಡಿಸಲುಗಳಲ್ಲಿ ವಾಸಿಸುವ ಬಡವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ನಿರೂಪಕ ಕಮಲ್ ಹಾಸನ್ ಜೊತೆ ಬಿಗ್ ಬಾಸ್ ಸ್ಪರ್ಧಿ ಮತ್ತು ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್, ನಿರ್ಮಾಣ ಸಂಸ್ಥೆ, ಖಾಸಗಿ ಚಾನಲ್`ಗೂ ನೋಟಿಸ್ ಜಾರಿ ಮಾಡಲಾಗಿದೆ.  
 
ಬಿಗ್ ಬಾಸ್ ಸ್ಪರ್ಧಿ ಗಾಯತ್ರಿ ರಘುರಾಮ್ ಅವರು ಕೊಳಗೇರಿ ನಿವಾಸಿಗಳು ಮತ್ತು ಬಡವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂಬುದು ಆರೋಪ. ಮತ್ತೊಬ್ಬ ನಟನ ವರ್ತನೆ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ ಕೋಪದಿಂದ ಮಾತನಾಡಿದ್ದ ಗಾಯತ್ರಿ, ನಿನ್ನ ವರ್ತನೆ ಸ್ಲಮ್`ನವರ ರೀತಿ ಎಂದು ನಿಂದಿಸಿದ್ದರು. ಇದರಿಂದ ಸ್ಲಮ್ ನಿವಾಸಿಗಳು ಮತ್ತು ಬಡವರ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ 7 ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ 100 ಕೋಟಿ ರೂ. ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್`ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ.. ಸಿನಿಮಾದಲ್ಲಿ ಪಾತ್ರಕ್ಕಾಗಿ ಸೆಕ್ಸ್ ಬಗ್ಗೆ ಸ್ಫೋಟಕ ಸುದ್ದಿ ಬಿಚ್ಚಿಟ್ಟ ನಟಿ..!

ಇದನ್ನೂ ಓದಿ.. ಟ್ಯೂಶನ್`ಗೆ ಬಂದ ವಿದ್ಯಾರ್ಥಿಗಳಿಗೆ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸಿದ್ದ ಶಿಕ್ಷಕಿ ಬಂಧನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕಮಲ್ ಹಾಸನ್ ಮಾನನಷ್ಟ ಮೊಕದ್ದಮೆ Defamation Kamal Hassan Big Boss

ಸ್ಯಾಂಡಲ್ ವುಡ್

news

ದರ್ಶನ್ ಜತೆ ಅಭಿನಯಿಸದ್ದಕ್ಕೆ ಶಿವರಾಜ್ ಕುಮಾರ್ ಬೇಸರ

ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷೆಯ ‘ಕುರುಕ್ಷೇತ್ರ’ ಚಿತ್ರ ಭಾರೀ ...

news

ಸ್ಮೈಲ್ ರಾಜಾ ಚಿತ್ರದ ನಿರ್ದೇಶಕ ಹರೀಶ್ ಅರೆಸ್ಟ್

ಬೆಂಗಳೂರು: ಹಣಕಾಸಿನ ವಿವಾದದಲ್ಲಿ ಹಲ್ಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ್ದ ಸ್ಮೈಲ್ ರಾಜಾ ಚಿತ್ರದ ...

news

ರಾಣಾ ಚಿತ್ರದಲ್ಲಿ ಕಿರಿಕ್ ಬೆಡಗಿ ಯಶ್ ಗೆ ನಾಯಕಿ ವಿಚಾರ: ಇದು ಸುಳ್ಳುಸುದ್ದಿ ಎಂದ ರಶ್ಮಿಕಾ

ರಾಕಿಂಗ್ ಸ್ಟಾರ್ ಯಶ್ ನಾಯಕ ನಟರಾಗಿ ಅಭಿನಯಿಸುತ್ತಿರುವ ಹರ್ಷ ನಿರ್ದೇಶನದ ರಾಣಾ ಚಿತ್ರಕ್ಕೆ ಕಿರಿಕ್ ...

news

ನಟ ದರ್ಶನ್ ಕ್ಷಮೆ ಕೋರಿದ ನಟಿ ಸಂಜನಾ

ಬೆಂಗಳೂರು: ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂಬ ಹೇಳಿಕೆ ನೀಡಿ ಅಭಿಮಾನಿಗಳ ಕಣ್ಣು ...

Widgets Magazine