ನಟ ದಿಲೀಪ್ ಬಂಧನಕ್ಕೆ ಕಾರಣವಾಯ್ತಾ ಸೆಲ್ಫೀ..? ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳದ ಸ್ಫೋಟಕ ಮಾಹಿತಿ ಬಹಿರಂಗ

ತಿರುವನಂತಪುರ, ಮಂಗಳವಾರ, 11 ಜುಲೈ 2017 (10:40 IST)

ಮಲೆಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ನಟ ದಿಲೀಪ್ ಜೈಲು ಸೇರಿದ್ದಾಗಿದೆ. ಇದೀಗ, ಈಜೊ ಪ್ರಕರಣದ ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ.
 


ಹೌದು, ದಿಲೀಪ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ವ್ಯಕ್ತಿಯೊಬ್ಬ ಆ ಸೆಲ್ಫಯನ್ನ ಎಲ್ಲೆಡೆ ಹೆಮ್ಮೆಯಿಂದ ಪಸರಿಸಿದ್ದ. ಈ ಸೆಲ್ಫಿಯೇ ದಿಲೀಪ್`ಗೆ ಕಂಟಕವಾಗಿದೆ.  ಶೂಟಿಂಗ್ ಸಂದರ್ಭ ಪಡೆದ ಈ ಸೆಲ್ಫಿಯಲ್ಲಿ ವ್ಯಕ್ತಿಯೊಬ್ಬ ಮೂಲೆಯಲ್ಲಿ ನಿಂತಿರುವುದು ಗೋಚರಿಸುತ್ತಿದೆ. ಅದು ಬೇರಾರೂ ಅಲ್ಲ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಪ್ರಮುಖ ಆರೋಪಿ ಪಲ್ಸಾರ್ ಸುನಿ.
 
ಈ ಸೆಲ್ಫೀ ಫೋಟೊ ಪಲ್ಸಾರ್ ಸುನಿ ಯಾರೆಂಬುದೇ ಗೊತ್ತಿಲ್ಲವೆನ್ನುತ್ತಿದ್ದ  ನಟ ದಿಲೀಪ್ ಬಣ್ಣವನ್ನ ಬಯಲು ಮಾಡಿತ್ತು. ಪಲ್ಸಾರ್ ಸುನಿ ಜೊತೆ ದಿಲೀಪ್ ಸ್ನೇಹ ಹೊಂದಿರುವುದರ ಸ್ಪಷ್ಟ ಸುಳಿವು ನೀಡಿತ್ತು ಸೆಲ್ಫಿ. ಸೆಲ್ಫಿ ಜಾಡು ಹಿಡಿದು ಪಲ್ಸಾರ್ ಸುನಿಯನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ನಟಿಯನ್ನ ಅಪಹರಿಸಿ ಲೈಂಗಿಕ ಕಿರುಕುಳ ನೀಡಲು ಹೋಟೆಲ್`ವೊಂದರಲ್ಲಿ ರೂಪಿಸಿದ ಸಂಚು ಹೊರಗೆ ಬಂದಿದೆ. ಸುನಿ ಹೇಳಿಕೆ ಮೇರೆಗೆ ನಟನನ್ನ ಬಂಧಿಸಿರುವ ಪೊಲಿಸರಿಗೆ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಿಯಾಂಕ ಚೋಪ್ರಾ ತುಂಡುಡುಗೆ ಪ್ರಧಾನಿ ಮೋದಿಗೆ ನೋ ಪ್ರಾಬ್ಲಂ ಅಂತೆ!

ಮುಂಬೈ: ಇತ್ತೀಚೆಗೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಬಾಲಿವುಡ್ ಬೆಡಗಿ ಪ್ರಿಯಾಂಕ ...

news

ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ...

news

ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ...

news

ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

ಬೆಂಗಳೂರು: ತೆಲುಗು ಸ್ಟಾರ್ ನಟ ಬಾಲಕೃಷ್ಣ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ...

Widgets Magazine