ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಈಗ ಉಬರ್ ಡ್ರೈವರ್!

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (10:08 IST)

ಬೆಂಗಳೂರು: ಹಿರಿಯ ನಟ ಅಶ್ವತ್ಥ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಹಳೆಯ ಕನ್ನಡ ಸಿನಿಮಾಗಳಲ್ಲಿ ತಂದೆಯ ಪಾತ್ರ ನಿರ್ವಹಿಸುತ್ತಿದ್ದ ಹಿರಿಯ ನಟನನ್ನು ಕಂಡರೆ ನಮ್ಮ ತಂದೆಯನ್ನು ಕಂಡಷ್ಟೇ ಗೌರವ ಮೂಡುತ್ತಿತ್ತು.
 

ಅಂತಹ ಮಹಾನ್ ನಟನ ಪುತ್ರ ಶಂಕರ್ ಅಶ್ವತ್ಥ್ ಕೂಡಾ ಕೆಲವು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದವರೇ. ಆದರೆ ಇಂದು ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದ ಕಾರಣಕ್ಕೆ ಉಬರ್ ಕ್ಯಾಬ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 
ಸ್ವಾಭಿಮಾನದ ಬದುಕಿಗಾಗಿ ಬೇರೆ ದಾರಿ ಕಾಣದೆ ಉಬರ್ ಕ್ಯಾಬ್ ಚಾಲಕ ವೃತ್ತಿಗೆ ಸೇರಿಕೊಂಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಸ್ವಾಭಿಮಾನದಿಂದ ಬದುಕಲು ಯಾವ ವೃತ್ತಿಯಾದರೇನು ಎಂಬ ತಂದೆಯ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಇದರಲ್ಲಿ ನನಗೆ ಯಾವುದೇ ಬೇಸರವಿಲ್ಲ. ಸ್ವಾಭಿಮಾನದಿಂದ ಬದುಕಲು ಯಾವ ವೃತ್ತಿಯಾದರೇನು ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
 
ಅಷ್ಟೇ ಅಲ್ಲದೆ, ತಾವು ಉಬರ್ ಚಾಲಕರಾಗಿ ಕೆಲಸ ಮಾಡುವಾಗ ಹಲವು ಜನ ಪ್ರಯಾಣಿಕರು ತಮ್ಮನ್ನು ಗುರುತಿಸುತ್ತಾರೆ. ಅಶ್ವತ್ಥ್ ಮಗ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ತುಂಬಾ ಖುಷಿಯಾಗುತ್ತದೆ ಎಂದು ಶಂಕರ್ ಅಶ್ವತ್ಥ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಭಾವಿ ಮಡದಿ ರಶ್ಮಿಕಾ ನೋಡಿ ರಕ್ಷಿತ್ ಶೆಟ್ಟಿ ಹೊಗಳಿದ್ದೇ ಹೊಗಳಿದ್ದು!

ಬೆಂಗಳೂರು: ಭಾವೀ ಮಡದಿ ರಶ್ಮಿಕಾ ಅಭಿನಯದ ಚಮಕ್ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ...

news

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹೊಸವರ್ಷವನ್ನು ಎಲ್ಲಿ ಆಚರಿಸಲಿದ್ದಾರೆ ಗೊತ್ತಾ…?

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗು ನಟಿ ದೀಪಿಕಾ ಪಡುಕೋಣೆ ಅವರ ಜೋಡಿ ಈ ವರ್ಷ ಹೊಸ ವರ್ಷವನ್ನು ...

news

ದೊಡ್ಡ ಗಂಡಾಂತರದಿಂದ ಪಾರಾದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ನಿಂತು ಹೋದರೆ ...

news

ಕಿಚ್ಚ ಸುದೀಪ್ ಜೆಡಿಎಸ್ ಸೇರುವುದು ಖಚಿತವೇ? ದೇವೇಗೌಡರ ಜತೆ ನಡೆದಿದೆ ಮಾತುಕತೆ?!

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರಾ? ...

Widgets Magazine
Widgets Magazine