41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದರ್ಶನ್; ಯುವಕರಿಗೆ ನೀಡಿದ ಸಲಹೆ ಏನು...?

ಬೆಂಗಳೂರು, ಶುಕ್ರವಾರ, 16 ಫೆಬ್ರವರಿ 2018 (09:14 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ 41ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಶುಕ್ರವಾರ (ಇಂದು ) ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ.


ಕುಟುಂಬದ ಸದಸ್ಯರು, ತಮ್ಮ ದಿನಾಕರ್ ತೂಗುದೀಪ, ಕಾಮಿಡಿ ಸ್ಟಾರ್ ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ರವಿಚೇತನ್, ತರುಣ್ ಸುಧೀರ್ ಇತರ ನಟರು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಆಗಮಿಸಿದ್ದು, ಸರತಿ ಸಾಲಲ್ಲಿ ಕಾದು ನಿಂತು, ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನ ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ಅಭಿಮಾನಿಗಳ ಕುರಿತು ಮಾತನಾಡಿದ ದರ್ಶನ್ ಅವರು, ‘ಅಭಿಮಾನಿಗಳೇ ನನಗೆಲ್ಲಾ ಸ್ನೇಹಿತರು ದಿನಾ ಸಿಗುತ್ತಾರೆ. ಅಭಿಮಾನಿಗಳು ಇವತ್ತು ಮಾತ್ರ ಸಿಗುತ್ತಾರೆ. ಅವರಿಗೋಸ್ಕರ ಅವರ ಜೊತೆ ಇರುತ್ತೀನಿ. ನಾನಾ ಜಿಲ್ಲೆಗಳಿಂದ ಬಂದು ಶುಭ ಹಾರೈಸಲು ಬಂದಿರೋ ಅಭಿಮಾನಿಗಳಿಗೆ ನಾನು ಚಿರುಋಣಿಯಾಗಿರುತ್ತೀನಿ. ಯುವಕರಿಗೆ ನಾನಿಷ್ಟೇ ಹೇಳಲು ಬಯಸುತ್ತೇನೆ. ಅದೇನೆಂದ್ರೆ ಟೈಂ ಇಂಪಾರ್ಟೆಂಟ್.. ಟೈಂ ವೇಸ್ಟ್ ಮಾಡಬೇಡಿ.. ಎಂದು ಹೇಳಿ ಇನ್ನೂ ಒಳ್ಳೋಳ್ಳೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಕಮಲ್ ಹಾಸನ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್; ಸಿನಿಮಾ ಜೀವನಕ್ಕೆ ವಿದಾಯ ಹೇಳಲಿದ್ದಾರಂತೆ ಕಮಲ್!

ನವದೆಹಲಿ : 1959ರಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟು, 1973ರಲ್ಲಿ ನಟನಾಗಿ ವೃತ್ತಿ ...

news

ಚಂದನ್ ಶೆಟ್ಟಿ 3 ಪೆಗ್ ಸಾಂಗ್ ಹಿಂದೆ ಇನ್ನೊಬ್ಬ ವ್ಯಕ್ತಿಯ ಶ್ರಮವಿದೆಯಂತೆ; ಅದರ ಬಗ್ಗೆ ಯಾಕೆ ಚಂದನ್ ಶೆಟ್ಟಿ ಬಾಯಿಬಿಟ್ಟಿಲ್ಲ...?

ಬೆಂಗಳೂರು : ಬಿಗ್‌ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬರುವ ಮೊದಲು 3 ಪೆಗ್ ...

news

ಜೆಕೆ ಅವರ ಕನಸಿನ ಹುಡುಗಿ ಹೇಗಿರಬೇಕಂತೆ ಗೊತ್ತಾ...?

ಬೆಂಗಳೂರು : ಬಿಗ್’ಬಾಸ್ ಮನೆಯಲ್ಲಿ ತಾಳ್ಮೆ, ಸಹನೆಯಿಂದ ಇದ್ದು ಎಲ್ಲರನ್ನು ತಮಾಷೆ ಮೂಲಕ ನಗಿಸುತ್ತಾ ಎಲ್ಲರ ...

news

ಸೆನ್ಸೇಶನ್ ಪ್ರಿಯಾ ವಾರಿಯರ್ ಬಿಗ್‌ ಡ್ರೀಮ್ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ...!

ಮುಂಬೈ: ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್‌ಗಳನ್ನು ಹಿಂದಿಕ್ಕಿ ಭಾರತದಲ್ಲಿ ಯುವಕರಿಗೆ ಹುಚ್ಚು ...

Widgets Magazine
Widgets Magazine