ನನ್ನ ಮಗನಿಗೆ ನೋಟಿಸ್ ಬಂದಿದೆ, ಪೊಲೀಸರಿಗೆ ಸತ್ಯ ಹೇಳುತ್ತೇವೆ: ನಟ ದೇವರಾಜ್

ಬೆಂಗಳೂರು, ಸೋಮವಾರ, 2 ಅಕ್ಟೋಬರ್ 2017 (11:54 IST)

ಉದ್ಯಮಿ ಪುತ್ರ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗ ಪ್ರಣಾಮ್ ದೇವರಾಜ್`ಗೆ ಪೊಲೀಸರಿಂದ ನೋಟಿಸ್ ಬಂದಿರುವುದು ನಿಜ ಎಂದು ಹಿರಿಯ ನಟ ದೇವರಾಜ್ ಹೇಳಿದ್ದಾರೆ.


ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ದೇವರಾಜ್, ಅಪಘಾತದ ಸಂದರ್ಭ ಅಲ್ಲಿದ್ದ ಬಗ್ಗೆ ವಿವರಣೆ ಕೇಳಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಪಘಾತ ನಡೆದ ಸಂದರ್ಭ ನನ್ನ ಮಗ ಅಲ್ಲಿರಲಿಲ್ಲ. ಅಪಘಾತದ ಸುದ್ದಿ ಕೇಳಿ ಅಲ್ಲಿಗೆ ಬಂದಿದ್ದರು. ಪೊಲೀಸರು ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ. ಪೊಲೀಸರ ಮುಂದೆ ಸತ್ಯ ಹೇಳುತ್ತೇವೆಂದು ದೇವರಾಜ್ ಹೇಳಿದ್ದಾರೆ.

ಸೆ.29ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಗೀತಾ ವಿಷ್ಣು ಕಾರನ್ನ ಅಡ್ಡಾ ದಿಡ್ಡಿ ಚಲಾಯಿಸಿ ಅಪಘಾತ ಎಸಗಿದ್ದರು. ಈ ಸಂದರ್ಭ ಕಾರಿನಲ್ಲಿ ಇಬ್ಬರು ಸ್ಯಾಂಡಲ್ ವುಡ್ ನಟರಿದ್ದರೆಂಬ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ. ರಕ್ತ, ಮೂತ್ರದ ಮಾದರಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪೊಲೀಸ್ ದೇವರಾಜ್ ಸ್ಯಾಂಡಲ್ ವುಡ್ ಪ್ರಣಾಮ್ ದೇವರಾಜ್ Police Sandalwood Pranam Devraj Kannada Film

ಸ್ಯಾಂಡಲ್ ವುಡ್

news

`ನನಗೆ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ’

ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ...

news

ಐಶ್ವರ್ಯಾ ಬಚ್ಚನ್ ಪುತ್ರಿಯ ದಸರಾ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿಯೊಂದಿಗೆ ದಸರಾ ಸೆಲೆಬ್ರೇಷನ್ ...

news

ಬಾಲ್ಯದ ಗೆಳೆಯನ ಜತೆ ಗೊಂಬೆ ನೇಹಾ ಗೌಡ ನಿಶ್ಚಿತಾರ್ಥ

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ನಿಶ್ಚಿತಾರ್ಥ ಅವರ ಬಾಲ್ಯದ ಗೆಳೆಯ ಚಂದನ್ ಜತೆ ...

news

ದರ್ಶನ್ ಗೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ!

ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ...

Widgets Magazine