ಡ್ರಗ್ಸ್ ಹಗರಣ: ಕಾಜಲ್ ಅಗರ್ವಾಲ್ ಮ್ಯಾನೇಜರ್ ಬಂಧನ

ಹೈದ್ರಾಬಾದ್, ಮಂಗಳವಾರ, 25 ಜುಲೈ 2017 (12:03 IST)

ತನಿಖೆ ಮುಂದುವರೆದಂತೆ ಆಂಧ್ರಪ್ರದೇಶದ ಡ್ರಗ್ಸ್ ಮಾಫಿಯಾದಲ್ಲಿ ಮತ್ತಷ್ಟು ಸಿನಿಮಾ ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ತೆಲಂಗಾಣದ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ ಸೆಲೆಬ್ರಿಟಿ ಮ್ಯಾನೇಜರ್ ಪಟ್ಕರ್ ರೋನ್ಸನ್ ಜೋಸೆಫ್ ಅಕ ರೋಝೋ ರೊನಿಯನ್ನ ಬಂಧಿಸಿದ್ದಾರೆ.


ಈತ ಖ್ಯಾತ ನಟಿ ಕಾಜಲ್ ಅಗರ್ವಾಲ್ ಸೇರಿ ಮೂವರು ಖ್ಯಾತ ನಾಮರಿಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ರೋನಿ ಬಂಧನದ ವೇಳೆ ಆತನ ಬಳಿ ಇದ್ದ ಮಾದಕ ವಸ್ತುಗಳನ್ನೂ ತನಿಖಾ ತಂಡ ವಶಕ್ಕೆ ಪಡೆದಿದೆ. ರೋನಿ ಬಂಧನ ಟಾಲಿವುಡ್`ನಲ್ಲಿ ಸಂಚಲನ ಮೂಡಿಸಿದ್ದು, ಕೆಲ ದೊಡ್ಡ ತಾರೆಗಳಿಗೆ ನಡುಕ ಹುಟ್ಟಿಸಿದೆ.

ಈ ಮಧ್ಯೆ, ನಟ ನವದೀದ್ ಎಸ್`ಐಟಿ ಮುಂದೆ ತನಿಖೆಗೆ ಹಾಜರಾಗಿದ್ದು, 8 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆದಿದೆ ಎನ್ನಲಾಗಿದೆ. ಕಲಾ ನಿರ್ದೇಶಕ ಧರ್ಮರಾವ್ ಸಹ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡ್ರಗ್ಸ್ ಹಗರಣ ಕಾಜಲ್ ಅಗರ್ವಾಲ್ ಚಾರ್ಮಿ ಕೌರ್ Tollywood Charmi Kaur Kajal Agarwal

ಸ್ಯಾಂಡಲ್ ವುಡ್

news

ಡ್ರಗ್ಸ್ ಹಗರಣ: ಹೈಕೋರ್ಟ್ ಮೆಟ್ಟಿಲೇರಿದ ನಟಿ ಚಾರ್ಮಿ ಕೌರ್

ತಿಂಗಳ ಹಿಂದಷ್ಟೇ ಬೆಳಕಿಗೆ ಬಂದ ಆಂಧ್ರಪ್ರದೇಶದ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆ ಎದುರಿಸುತ್ತಿರುವ ...

news

ನಾನು ಒಳ್ಳೆ ಹುಡುಗ ಎನ್ನಲು ಹೊರಟ ಪ್ರಥಮ್ ಮೇಲೆ ನ್ಯಾಯಾಧೀಶರು ಗರಂ

ಬೆಂಗಳೂರು: ಸಹನಟ ಭುವನ್ ಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ನಟ ಪ್ರಥಮ್ ಗೆ ...

news

ಮಲೆಯಾಳಂ ಖ್ಯಾತ ನಟಿಯ ಅರೆನಗ್ನ ಚಿತ್ರಗಳು ವೈರಲ್: ಆರೋಪಿ ಅರೆಸ್ಟ್

ತಿರುವನಂತಪುರಂ: ಮಲೆಯಾಳಂ ಚಿತ್ರರಂಗಕ್ಕೆ ಯಾಕೋ ಟೈಮ್ ಸರಿಯಿದ್ದಂತಿಲ್ಲ. ದಿಲೀಪ್ ಪ್ರಕರಣ ಮಾಸುವ ಮುನ್ನವೇ ...

news

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಕ್ಷಮೆ

ಮುಂಬೈ: ದೇಶಭಕ್ತಿ, ಭಾರತೀಯ ಸೇನೆಗೆ ಸಹಾಯ ಮಾಡುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್ ನಟ ...

Widgets Magazine