Widgets Magazine
Widgets Magazine

ಶ್ರುತಿಹಾಸನ್ ವಿರುದ್ಧ ಕಿಡಿಕಾರಿದ ಖುಷ್ಬೂ..!

ಚೆನ್ನೈ, ಶುಕ್ರವಾರ, 21 ಜುಲೈ 2017 (12:02 IST)

Widgets Magazine

ಸಂಘಮಿತ್ರ ಸಿನಿಮಾದಿಂದ ಹೊರಬಂದ ನಟಿ ಶ್ರುತಿಹಾಸನ್ ವಿರುದ್ಧ ನಿರ್ದೇಶಕ ಸುಂದರ್ ಪತ್ನ ನಟಿ ಖುಷ್ಬೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ವೃತ್ತಿಪರತೆ ಪ್ರದರ್ಶಿಸುವಂತೆ ಕಿಡಿ ಕಾರಿದ್ಧಾರೆ.  
 


ನಿರ್ದೇಶಕ ಸುಂದರ್ ಕನಸಿನ ಕೂಸು ಸಂಘಮಿತ್ರ.. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪೋಸ್ಟರನ್ನ ಇತ್ತೀಚೆಗೆ ತಾನೆ ಕೇನ್ ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಅದೇನಾಯ್ತೋ ನಟಿ ಶ್ರುತಿ ಹಾಸನ್, ಚಿತ್ರಕಥೆ ಇಷ್ಟವಾಗಿಲ್ಲ ಅಂತಾ ಚಿತ್ರದಿಂದ ಹೊರಬಂದಿದ್ದರು. ಶ್ರುತಿ ಹೊರಬಂದ ಬಳಿಕ ಪಾತ್ರಕ್ಕೆ ಸೂಕ್ತ ನಟಿಯನ್ನ ಆರಿಸುವಲ್ಲಿ ಚಿತ್ರ ತಂಡ ಶತ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಈ ಅಸಮಾಧಾನವನ್ನ ಹಿರಿಯ ನಟಿ ಖುಷ್ಬೂ ಟ್ವೀಟ್ಟರ್`ನಲ್ಲಿ ಹೊರ ಹಾಕಿದ್ದಾರೆ.
 
ದೊಡ್ಡ ಚಿತ್ರರಂಗದ ಹಿನ್ನೆಲೆಯಿಂದ ಬರುವವರಿಂದ ನಾವು ಸ್ವಲ್ಪ ಜಾಸ್ತಿ ವೃತ್ತಿಪರತೆಯನ್ನ ನಿರೀಕ್ಷಿಸುತ್ತೇವೆ. ತಪ್ಪುಗಳನ್ನ ಸರಿ ಮಾಡಿಕೊಂಡರೆ ಸುದೀರ್ಘ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತೆ ಎಂದಿದ್ಧಾರೆ. ಸ್ಕ್ರಿಪ್ಟ್ ರೆಡಿಯಾಗಿಲ್ಲ ಎಂಬ ಶ್ರುತಿ ಹೇಳಿಕೆಗೆ ಟಾಂಗ್ ನೀಡಿರುವ ಖುಷ್ಬೂ, ದೇಶದ ಅತ್ಯಂತ ದುಬಾರಿ ಬಜೆಟ್ 400 ಕೋಟಿ ರೂ. ಸಿನಿಮಾಕ್ಕೆ ಅತ್ಯುತ್ತಮ ಯೋಜನೆ ಮಾಡದೇ ಇರುತ್ತೀವಾ..? 2 ವರ್ಷಗಳಿಂದ ಚಿತ್ರಕಥೆ ತಯಾರಿ ನಡೆದಿದೆ. ಶೇ.70ರಷ್ಟು ಪೂರ್ವ ನಿರ್ಮಾಣ ತಯಾರಿ ಕೇವಲ 30ರಷ್ಟು ಶೂಟಿಂಗ್ ಮಾತ್ರ, ನಿಮ್ಮ ವೈಯಕ್ತಿಕ ತಪ್ಪುಗಳಿಗಾಗಿ ಚಿತ್ರದ ಕಥೆ ದೂಷಿಸುವುದು.. ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಮಾತಿನಂತಿದೆ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್-ರಾಧಿಕಾ ಪಂಡಿತ್!

ಬೆಂಗಳೂರು: ಮದುವೆಯಾದ ಮೇಲೆ ಕನ್ನಡದ ನಟಿಯರು ಮೊದಲಿನ ಹಾಗೇ ನಾಯಕಿಯಾಗಿ ಮಿಂಚಿದ ಉದಾಹರಣೆ ಕಡಿಮೆ. ಆದರೆ ...

news

ಹೆಣ್ಣುಮಗುವನ್ನು ದತ್ತು ಪಡೆದ ಸನ್ನಿಲಿಯೋನ್-ಡೆನಿಯಲ್‌ ವೆಬರ್‌ ದಂಪತಿ

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಹೆಣ್ಣುಮಗುವೊಂದನ್ನು ದತ್ತು

news

ಲಿಂಕಿನ್‌ ಪಾರ್ಕ್‌ ಸಿಂಗರ್ ಚೆಸ್ಟರ್‌ ಬೆನ್ನಿಂಗ್ಟನ್‌ ಆತ್ಮಹತ್ಯೆ..!

ಲಿಂಕಿನ್‌ ಪಾರ್ಕ್‌ ರಾಕ್‌ ಹಾಡುಗಳ ಗಾಯಕ ಚೆಸ್ಟರ್‌ ಬೆನ್ನಿಂಗ್ಟನ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ...

news

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ: ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ನಟ ದಿಲೀಪ್ ...

Widgets Magazine Widgets Magazine Widgets Magazine