ಬಾಹುಬಲಿ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೆ!

Hyderabad, ಬುಧವಾರ, 10 ಮೇ 2017 (07:12 IST)

Widgets Magazine

ಹೈದರಾಬಾದ್: ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಬಾಚಿದ ಬೆನ್ನಲ್ಲೇ ನಾಯಕ ಪ್ರಭಾಸ್ ಸಂಭಾವನೆ ಮೀರ್ ಸರಕ್ಕನೆ ಮೇಲೇರಿದೆ. ಇದೀಗ ಅವರು ನಿರ್ಮಾಪಕರಿಗೆ ನಿಜಕ್ಕೂ ನಿಲುಕದ ತಾರೆಯಾಗಿದ್ದಾರೆ.


 
ಬಾಹುಬಲಿ ಸಿನಿಮಾಗಾಗಿ ಐದು ವರ್ಷ ಮೀಸಲಿರಿಸಿದ್ದ ಪ್ರಭಾಸ್ 25 ಕೋಟಿ ಜೇಬಿಗಿಳಿಸಿದ್ದರು. ಇದೀಗ ಆ ಚಿತ್ರದ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಮತ್ತೆ 5 ಕೋಟಿಗೆ ಏರಿಸಿದ್ದಾರಂತೆ. ಅಂದರೆ ಇನ್ನು ಪ್ರಭಾಸ್ ಹಾಕಿಕೊಂಡು ಸಿನಿಮಾ ಮಾಡುವವರು ಬರೋಬ್ಬರಿ 30 ಕೋಟಿ ರೂ. ಗಂಟು ತೆಗೆದುಕೊಂಡೇ ಅವರ ಮನೆ ಬಾಗಿಲು ತಟ್ಟಬೇಕು.
 
ಅಷ್ಟಕ್ಕೂ ಬಾಹುಬಲಿಗಾಗಿ ಅವರು ಐದು ವರ್ಷ ವ್ಯಯಿಸಿದ್ದಾರೆ. ಅಷ್ಟು ಮಾಡಿದ ಮೇಲೆ ನಿರ್ಮಾಪಕರಿಗೆ ಇನ್ನಿಲ್ಲದ ಯಶಸ್ಸು ತಂದುಕೊಟ್ಟಿದ್ದಾರೆ. ಹೀಗಿರುವಾಗ ಅಷ್ಟು ಸಂಭಾವನೆ ಕೇಳುವುದರಲ್ಲಿ ತಪ್ಪೇನು ಎಂದು ಅವರ ಆಪ್ತ ಮೂಲಗಳು ಪ್ರಶ್ನಿಸಿವೆ.
 
ತಪ್ಪೇನೂ ಇಲ್ಲ ಸ್ವಾಮಿ.. ಆದರೆ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವವರು ಇನ್ನು ಗಟ್ಟಿ ಕುಳಗಳೇ ಆಗಿರಬೇಕು. ಜತೆಗೆ ಪಕ್ಕಾ ಹಿಟ್ ಕತೆಯೊಂದಿಗೇ ಸಿನಿಮಾ ಮಾಡಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಮಾಡುವ ಅವಕಾಶ ಕಳೆದುಕೊಂಡ ಶ್ರೀದೇವಿ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಬಾಹುಬಲಿ-2 ಚಿತ್ರದಲ್ಲಿ ನಟಿಸಲಿಲ್ಲ ಎಂಬುದು ನನಗೆ ಅಚ್ಚರಿ ಎನಿಸುತ್ತಿದೆ. ಆಕೆಯ ಸುದೀರ್ಘ ...

news

ಆಫ್ರಿಕಾದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತ ಮಕ್ಕಳ ಜೊತೆ ಸ್ಟೆಪ್ ಹಾಕಿದ ಪ್ರಿಯಾಂಕಾ ಚೋಪ್ರಾ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಯುನಿಸೆಫ್ ಸೌಹಾರ್ದಯುತ ...

news

ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಬಾಹುಬಲಿ-2 ಮಾಡಿದ ದಾಖಲೆಗಳೆಷ್ಟು ಗೊತ್ತಾ..?

ಐದು ವರ್ಷಗಳ ಹಿಂದೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಯನ್ನ ಜೊತೆ ಮಾಡಿ ರಾಜಮೌಳಿ ಬಾಹುಬಲಿ ಸಾಹಸಕಕೆ ...

news

ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಆಯ್ಕೆ ರಮ್ಯಾಕೃಷ್ಣ ಆಗಿರಲಿಲ್ಲ..!

ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಬಾಹುಬಲಿ-2 ಚಿತ್ರದಲ್ಲಿ ಅತ್ಯಂತ ಗಮನ ಸೆಳೆಯುವ ಪಾತ್ರ ರಾಜಮಾತೆ ...

Widgets Magazine