Widgets Magazine

ಹನಿಮೂನ್ ಹೋಗಿರುವ ಸಿದ್ದಾರ್ಥ್ ಬರುವವರೆಗೆ ‘ಅಗ್ನಿಸಾಕ್ಷಿ’ಯಲ್ಲಿ ಚಂದ್ರಿಕಾ ಸಿಗಲ್ಲ!

ಬೆಂಗಳೂರು| Krishnaveni K| Last Modified ಶನಿವಾರ, 16 ಮಾರ್ಚ್ 2019 (09:01 IST)
ಬೆಂಗಳೂರು: ವಾಹಿನಿಯ ‘ಅಗ್ನಿಸಾಕ್ಷಿ’ ಧಾರವಾಹಿ ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿದೆ. ವಿಲನ್ ಚಂದ್ರಿಕಾರನ್ನು ಸೆರೆಹಿಡಿಯಲು ಪೊಲೀಸರು ತಡಕಾಡುತ್ತಿರುವುದನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

 
ಚಂದ್ರಿಕಾ ಸಿಗದೇ ಇರುವುದಕ್ಕೆ ಸಿದ್ಧಾರ್ಥ್ ಹನಿಮೂನ್ ಗೆ ಹೋಗಿರುವುದೇ ಕಾರಣ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ರಿಯಲ್ ಲೈಫ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಾಯಕ ಸಿದ್ಧಾರ್ಥ್ ಈಗ ಒಂದು ವಾರದಿಂದ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ.
 
ಇದಕ್ಕೆ ಅಭಿಮಾನಿಗಳು ಈ ರೀತಿ ಟ್ರೋಲ್ ಮಾಡಿದ್ದಾರೆ. ಅತ್ತ ತಲೆಮರೆಸಿಕೊಂಡಿರುವ ಚಂದ್ರಿಕಾಳನ್ನು ಸೆರೆಹಿಡಿಯಲು ಪೊಲೀಸರು ಪ್ರಯತ್ನ ಮಾಡುತ್ತಿದ್ದರೆ, ಇತ್ತ ಸಿದ್ಧಾರ್ಥ್ ನಾಪತ್ತೆಯಾಗಿದ್ದಾನೆ.
 
ಅಸಲಿಗೆ, ಮದುವೆ, ಹನಿಮೂನ್ ಎಂದು ಬ್ಯುಸಿಯಾಗಿರುವ ಕಾರಣ ನಾಯಕ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಶೂಟಿಂಗ್ ಗೆ ಬರಲಾಗುತ್ತಿಲ್ಲ. ಇದಕ್ಕೇ ಕತೆ ಹೀಗೆ ಮಾಡಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     
ಇದರಲ್ಲಿ ಇನ್ನಷ್ಟು ಓದಿ :