ಟ್ವಿಂಕಲ್ ಖನ್ನಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅಕ್ಷಯ್ ಕುಮಾರ್

ಮುಂಬೈ, ಸೋಮವಾರ, 7 ಆಗಸ್ಟ್ 2017 (11:19 IST)

ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರಲು ಬಯಸುವ ಬಾಲಿವುಡ್`ನ ತಾರಾ ಜೋಡಿ ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ. ಈ ಬಾರಿ ಅಕ್ಷಯ್ ತಮ್ಮ ಕುಟುಂಬದಲ್ಲಿ ಪ್ರಶಸ್ತಿ ವಿಚಾರವಾಗಿ ನಡೆಯುತ್ತಿದ್ದ ಶೀತಲ ಸಮರದ ಬಗ್ಗೆ ಬಾಯ್ಬಿಟ್ಟಿದ್ದಾರೆ.


ನ್ಯಾಶನಲ್ ಅವಾರ್ಡ್ ಬಂದ ಬಳಿಕ ಪತ್ನಿ ಟ್ವಿಂಕಲ್ ನನಗೆ ಟಾಂಟ್ ಕೊಡುವುದನ್ನ ನಿಲ್ಲಿಸಿದ್ದಾರೆ. ಎಜುಕೇಶನ್ ಫೆಸ್ಟಿವಲ್`ವೊಂದರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ಕುಟುಂಬದ ಹಲವರು ಹಲವು ಪ್ರಶಸ್ತಿ ಪಡೆದಿದ್ದಾರೆ. ನನಗೆ ಪ್ರಶಸ್ತಿಗಳು ಬರದಿರುವ ಬಗ್ಗೆ ಯಾವಾಗಲೂ ನನ್ನನ್ನ ಛೇಡಿಸುತ್ತಿದ್ದಳು. ಇದೀಗ, ನನಗೂ ನ್ಯಾಶನಲ್ ಅವಾರ್ಡ್ ಸಿಕ್ಕಿರುವುದರಿಂದ ಟ್ವಿಂಕಲ್  ಸೈಲೆಂಟ್ ಆಗಿದ್ದಾಳೆಂದು ಹೇಳಿಕೊಂಡಿದ್ದಾರೆ.

64ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ರುಸ್ತುಂ ಚಿತ್ರಕ್ಕಾಗಿ ಅಕ್ಷಯ್ ಕುಮಾರ್`ಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು.
ಇದೇವೇಳೆ, ತಮಗೆ ಪ್ರಶಸ್ತಿ ಸಿಕ್ಕ ಬಗ್ಗೆ ಎದ್ದ ವಿವಾದಗಳಿಗೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, 25 ವರ್ಷಗಳಿಂದ ನಾನು ಇದನ್ನ ನೋಡುತ್ತಿದ್ದೇನೆ. ಯಾರಿಗಾದರೂ ಪ್ರಶಸ್ತಿ ಸಿಕ್ಕಾಗ, ಅವರಿಗೆ ಪ್ರಶಸ್ತಿ ಸಿಗಬಾರದಿತ್ತು. ಬೇರೆಯವರಿಗೆ ಸಿಗಬೇಕಿತ್ತೆಂಬ ಬಗ್ಗೆ ವಾದ ವಿವಾದಗಳು ನಡೆಯುತ್ತವೆ. ನನಗೆ ಪ್ರಶಸ್ತಿ ಸಿಗಬಾರದಿತ್ತು ಎಂದು ಯಾರಾದರೂ ಅಂದುಕೊಮಡಿದ್ದರೆ ದಯವಿಟ್ಟು ಈ ಪ್ರಶಸ್ತಿಯನ್ನ ತೆಗೆದುಕೊಮಡು ಹೋಗಿ ಎಂದಿದ್ದಾರೆ.
  
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಾಲಿವುಡ್ ಅಕ್ಷಯ್ ಕುಮಾರ್ ಟ್ವಿಂಕಲ್ ಖನ್ನಾ Bollywood Akshay Kumar Twikle Khanna

ಸ್ಯಾಂಡಲ್ ವುಡ್

news

ಅಮೀರ್ ಖಾನ್, ಪತ್ನಿಗೆ ಎಚ್1ಎನ್1

ಮುಂಬೈ: ಮಾರಕ ಎಚ್1ಎನ್1 ರೋಗ ಬಾಲಿವುಡ್ ಮಂದಿಯನ್ನೂ ಬಿಟ್ಟಿಲ್ಲ ನೋಡಿ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ...

news

ಸುದೀಪ್ ಹಾದಿ ಹಿಡಿದ ದರ್ಶನ್

ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ತಮ್ಮ ಕಂಚಿನ ಕಂಠವನ್ನು ಬೇರೆಯವರ ಚಿತ್ರಕ್ಕೆ ನೀಡಿದ ಉದಾಹರಣೆಯಿದೆ. ಇದೀಗ ...

news

ಮದುವೆ ಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ...

news

ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಎಂಗೇಜ್ ಮೆಂಟ್ ಆದ ಮೇಲೆ ಮದುವೆ ಊಟ ಯಾವಾಗ ಹಾಕ್ತಾರೆ ಎಂದು ...

Widgets Magazine