ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮದ ವಿರುದ್ಧ ದೂರು ನೀಡಿದ ನಟ ಅಕ್ಷಯ್ ಕುಮಾರ್

ಮುಂಬೈ, ಶುಕ್ರವಾರ, 12 ಅಕ್ಟೋಬರ್ 2018 (10:40 IST)

ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮವೊಂದರ  ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸೈಬರ್ ಪೋಲಿಸರಿಗೆ ದೂರು ನೀಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ  ಮಾಧ್ಯಮದವರೊಂದಿಗೆ ನಡೆಸಿದ್ದ ಸಂವಾದದ ವೇಳೆ ನಟ ಅಕ್ಷಯ್ ಕುಮಾರ್ ಅವರು ಬೇರೊಬ್ಬ ನಟಿಯ ಬಗ್ಗೆ ಮಾತನಾಡಿದರೆ ಅದನ್ನು ತನುಶ್ರೀ ದತ್ತಾ ಹಾಗೂ ನಾನಾ ಪಾಟೇಕರ್​ ಪ್ರಕರಣದಲ್ಲಿ ತನುಶ್ರೀ ದತ್ತಾ ವಿರುದ್ಧ ಮಾತನಾಡಿದ್ದೇನೆ ಎಂಬಂತೆ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ.


ಈ ಬಗ್ಗೆ ಗರಂ ಆದ ನಟ ಅಕ್ಷಯ್  ಸೈಬರ್ ಪೋಲಿಸರಿಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಕ್ಷಯ್​ ಕುಮಾರ್​ ಅವರು ಕಂಪ್ಲೇಟ್​ ದಾಖಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದ ಆ ಸೈಟ್​ನಲ್ಲಿ ವಿಡಿಯೋ ಡಿಲೀಟ್​ ಮಾಡಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪೋಸ್ಟರ್ ಮೂಲಕ ಸಿನಿಮಾ ಪ್ರಚಾರಕ್ಕೆ ಅವಕಾಶ ; ಸಿಎಂ ಬಳಿ ನಟ ಶಿವರಾಜ್ ಕುಮಾರ್ ಮನವಿ

ಬೆಂಗಳೂರು : ಫ್ಲೆಕ್ಸ್ ನಿಷೇಧದಿಂದ ಸಿನಿಮಾ ಪ್ರಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಸಿನಮಾ ...

news

ಲೈಂಗಿಕ ಕಿರುಕುಳದ ಆರೋಪ ಹೊತ್ತ ಗಾಯಕ ರಘು ದೀಕ್ಷಿತ್ ವಿರುದ್ಧವೇ ಮಾತನಾಡಿದ ಪತ್ನಿ ಮಯೂರಿ

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರ ಮೇಲೆ ತಮಿಳು ಗಾಯಕಿ ...

news

ಪತ್ನಿ ರಾಧಿಕಾಳ ಬಯಕೆ ತೀರಿಸಿದ ನಟ ಯಶ್

ಬೆಂಗಳೂರು : ನಟ ಯಶ್ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ...

news

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಮುಂಬೈ : ಇಂದು (ಅ.11) ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ...

Widgets Magazine