ಬಿಗ್ ಬಾಸ್ ಮನೆಗೆ ಅಕುಲ್ ಬಾಲಾಜಿಯವರ ದಿಢೀರ್ ಎಂಟ್ರಿ

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (08:58 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಅಕುಲ್ ಬಾಲಾಜಿಯವರು ಆಗಮಿಸಿದ್ದನ್ನು ಕಂಡು ಸ್ಪರ್ಧಿಗಳಿಗೆ ಖುಷಿ, ಸಡಗರವನ್ನುಂಟು ಮಾಡಿತ್ತು.


ಬಿಗ್ ಬಾಸ್ ನ ಸೀಸನ್ 2ರಲ್ಲಿ ನೂರು ದಿನ ಮನೆಯೊಳಗೆ ಇದ್ದು ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡ ಅಕುಲ್ ಬಾಲಾಜಿಯವರನ್ನು ಬಿಗ್ ಬಾಸ್ ಅತಿಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿದ್ದಾರೆ. ಮನೆಯೊಳಗೆ ಕಾಲಿಟ್ಟ ಅಕುಲ್ ಸ್ಪರ್ಧಿಗಳ ಪರಿಚಯವನ್ನು ಮಾಡಿಕೊಳ್ಳುತ್ತಾ ಅವರ ಮುಖದಲ್ಲಿ ನಗೆಯ ಹೊನಲನ್ನು ಹರಿಸಿದರು.


ಬಿಗ್ ಬಾಸ್ ಅಕುಲ್ ಅವರಿಗೆ ‘ಮಂತ್ರದಂಡ’ ಎಂಬ ಅಧಿಕಾರವನ್ನು ಕೊಟ್ಟು ಅದನ್ನು ನಿಮಗಿಷ್ಟ ಬಂದವರ ಮೇಲೆ ಪ್ರಯೋಗಿಸಲು ಹೇಳಿದರು.ಅದೇರೀತಿ ಅಕುಲ್ ರವರು ಅದನ್ನು ಸ್ಪರ್ಧಿಗಳ ಮೇಲೆ ಪ್ರಯೋಗಿಸುತ್ತಾ ಅವರಿಗೆಲ್ಲಾ ಕೆಲವು ಕೆಲಸಗಳನ್ನು ಕೊಟ್ಟರು.  ಸ್ಪರ್ಧಿಗಳು ಕೂಡ ಅದನ್ನು ಗೌರವದಿಂದಲೆ ಪಾಲಿಸಿದರು. ಹಾಗೆ ಸ್ಪರ್ಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೇಳಿದರು. ಅದರಂತೆ ಸ್ಪರ್ಧಿಗಳು ತಮ್ಮ ಮನದಾಳದ ಮಾತುಗಳನ್ನು ಇತರರೊಡನೆ ಹಂಚಿಕೊಂಡರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಗಳನ್ನು ಶಾಲೆಗೆ ಕಳುಹಿಸಲ್ವಾ? ಎಂದು ಪ್ರಶ್ನಿಸಿದ ಮಹಿಳೆಗೆ ಅಭಿಷೇಕ್ ಬಚ್ಚನ್ ಕೊಟ್ಟ ಉತ್ತರ!

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಬಚ್ಚನ್ ಗೆ ಈಗ 6 ...

news

ಸೊಸೆಯನ್ನೇ ಮರೆತ ನಟ ಜಗ್ಗೇಶ್ ಗೆ ನೆನಪಿಸಿದ ಅಭಿಮಾನಿಗಳು!

ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ವಿದೇಶೀ ಯುವತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ...

news

ಬಿಗ್ ಬಾಸ್: ಮೀಸೆ ಬೋಳಿಸಿಕೊಂಡ ಜೆಕೆ, ಹುಡುಗಿಯರಿಗೆ ಬೇಜಾರು!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮೊದಲ ದಿನದಿಂದಲೂ ಸ್ವಭಾವದಲ್ಲೂ, ಲುಕ್ ನಲ್ಲೂ ಒಂದೇ ರೀತಿ ಮೇನ್ ಟೈನ್ ...

news

ಯಶ್ ಮಡದಿಯಾದ ಮೇಲೂ ಬ್ಯಾಚ್ಯುಲರ್ ದಿನಗಳನ್ನು ನೆನೆಸಿಕೊಂಡ ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾಗಿ ಒಂದು ವರ್ಷ ತುಂಬಲು ಇನ್ನೆರಡೇ ದಿನ ಬಾಕಿಯಿದೆ. ಈ ...

Widgets Magazine
Widgets Magazine