ಯೂ-ಟ್ಯೂಬ್‌ನಲ್ಲಿ ಸದ್ದುಮಾಡುತ್ತಿರುವ ಅಲ್ಲು ಅರ್ಜುನ್..!!

ನಾಗಶ್ರೀ ಭಟ್ 

ಬೆಂಗಳೂರು, ಸೋಮವಾರ, 8 ಜನವರಿ 2018 (18:58 IST)

ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ನಾ ಪೇರು ಸೂರ್ಯ' ಚಿತ್ರದ ಟೀಸರ್ ಜನವರಿ 5, 2018 ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮಿಲಿಟರಿ ಮ್ಯಾನ್ ಆಗಿ ಅಭಿನಯಿಸಿದ್ದಾರೆ. ಪಕ್ಕಾ ಸ್ಟೈಲಿಶ್ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಅಲ್ಲು ಅರ್ಜುನ್‌ರನ್ನು ಮಿಲಿಟರಿ ಮ್ಯಾನ್ ಗೆಟಪ್‌ನಲ್ಲಿ ನೋಡಿದ ಅಭಿಮಾನಿಗಳಿಗೆ ಈ ಟೀಸರ್ ತುಂಬಾನೇ ಇಷ್ಟವಾಗಿದೆ.

ಈ ಟೀಸರ್ ಬಿಡುಗಡೆ ಹೊಂದಿದ ಎರಡು ದಿನಗಳಲ್ಲೇ ಬರೋಬ್ಬರಿ 10 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದು, ಟೀಸರ್‌ನಿಂದಲೇ ಇಷ್ಟೊಂದು ಸದ್ದು ಮಾಡಿರುವ ಈ ಸಿನಿಮಾವನ್ನು ವೀಕ್ಷಿಸಲು ಅಲ್ಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
 
'ನಾ ಇಲ್ಲು ಇಂಡಿಯಾ ಎಂಬ ಟ್ಯಾಗ್ ಲೈನ್' ಹೊಂದಿರುವ ಈ ಚಿತ್ರದಲ್ಲಿ ಅಲ್ಲು ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಅತೀಯಾದ ಕೋಪದಿಂದ ಕಥಾನಾಯಕ ಯಾವ ತರಹದ ತೊಂದರೆಗಳನ್ನು ಅನುಭವಿಸುತ್ತಾನೆ ಎಂಬುದೇ ಈ ಚಿತ್ರದ ತಿರುಳು. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಅನು ಎಮ್ಯಾನ್ಯುವೆಲ್ ಅಭಿನಯಿಸಿದ್ದು ಇವರೊಂದಿಗೆ ಅರ್ಜುನ್ ಸರ್ಜಾ, ವೆನ್ನೆಲಾ ಕಿಶೋರ್, ಆರ್. ಶರತ್‌ಕುಮಾರ್, ರಾವ್ ರಮೇಶ್ ಹಾಗೂ ಇನ್ನಿತರರು ಈ ಚಿತ್ರದಲ್ಲಿದ್ದಾರೆ. 
 
ಚಿತ್ರದ ಟೀಸರ್‌ಗೆ ದೊರೆತ ಪ್ರತಿಕ್ರಿಯೆಗೆ ಸಂತಸಗೊಂಡಿರುವ ಅಲ್ಲು "ಎಲ್ಲರಿಗೂ ಧನ್ಯವಾದಗಳು. ಅದ್ಭುತ ಪ್ರತಿಕ್ರಿಯೆಗಾಗಿ ಕೃತಜ್ಞತನಾಗಿರುತ್ತೇನೆ". ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೇ ರಾಮಲಕ್ಷ್ಮೀ ಸಿನಿ ಕ್ರಿಯೇಶನ್ಸ್ ಸಂಸ್ಥೆಯಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಈ ಚಿತ್ರಕ್ಕೆ ವಕ್ಕಾಂತಂ ವಂಶಿ ಆ್ಯಕ್ಷನ್ ಕಟ್ ಹೇಳಿದ್ದಾರೆ, ಅಲ್ಲದೇ ವಿಶಾಲ್ ಶೇಕರ್ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರವು ಏಪ್ರಿಲ್‌ ತಿಂಗಳಿನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೆಲುಗಿನಲ್ಲಿ ಬರಲಿದೆ ಗಣೇಶ್ ಅಭಿನಯದ 'ಚಮಕ್' ರಿಮೇಕ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅವರ ಅಭಿನಯದ 'ಚಮಕ್' ಸಿನಿಮಾ ನೋಡುಗರಿಗೆ ಕಿಕ್ ...

news

ಶಾಕಿಂಗ್! ಬಾಡಿಗೆ ತಾಯಿಯಾಗಲಿದ್ದಾರೆ ಐಶ್ವರ್ಯಾ ರೈ ಬಚ್ಚನ್

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಬಾಡಿಗೆ ...

news

ರಾಖಿ ಸಾವಂತ್ ವಿರುದ್ಧ ಕೋರ್ಟ್ ನೋಟಿಸ್ - ಹನಿಪ್ರೀತ್ ತಾಯಿ...!!

ಇತ್ತೀಚಿಗೆ ದೇಶದಲ್ಲೆಡೆ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಡೇರಾ ಮುಖ್ಯಸ್ಥ ಗುರ್ಮಿತ್ ಸಿಂಗ್ ಮತ್ತು ಆತನ ...

news

ಬಹು ನಿರೀಕ್ಷಿತ ಚಿತ್ರ 'ಪದ್ಮಾವತ್' ಜ. 25ಕ್ಕೆ ತೆರೆಯಮೇಲೆ ಬರಲಿದೆ..!!

ಹಲವಾರು ವಿವಾದಗಳಿಗೆ ತುತ್ತಾಗಿದ್ದ ಸಂಜಯ್ ಲೀಲಾ ಬನ್ಸಾಲಿಯವರ ನಿರ್ಮಾಣದ 'ಪದ್ಮಾವತ್' ಜನವರಿ 25, 2018 ...

Widgets Magazine
Widgets Magazine