Widgets Magazine
Widgets Magazine

ಎರಡನೇ ಮದುವೆ ಬಗ್ಗೆ ಮೌನ ಮುರಿದ ಅಮಲಾ ಪೌಲ್!

Chennai, ಬುಧವಾರ, 8 ಮಾರ್ಚ್ 2017 (20:10 IST)

Widgets Magazine

ಕಿಚ್ಚ ಸುದೀಪ್ ಅಭಿನಯದ ಕನ್ನಡದ ’ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಬೆಡಗಿ ಅಮಲಾ ಪೌಲ್. ತಮಿಳು ನಿರ್ದೇಶಕ ವಿಜಯ್‌ರನ್ನು ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಸರಿದಿದ್ದರು ಅಮಲಾ. ಆ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ, ಇಬ್ಬರೂ ವಿಚ್ಛೇದನದವರೆಗೂ ಹೋಗಿದ್ದು ಗೊತ್ತೇ ಇದೆ.
 
ಇದೀಗ ವಿಚ್ಛೇನದ ಬಳಿಕ ವಿಜಯ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಆದರೆ ನಟಿ ಅಮಲಾ ಪೌಲ್ ಪರಿಸ್ಥಿತಿ ಏನು? ಅವರು ಎರಡನೇ ಮದುವೆ ಮಾಡಿಕೊಳ್ಳುತ್ತಾರಾ? ಇದರ ಬಗ್ಗೆ ಸ್ವತಃ ಅಮಲಾ ಪೌಲ್ ಮೌನ ಮುರಿದಿದ್ದಾರೆ.
 
ಸದ್ಯಕ್ಕೆ ನನ್ನ ದೃಷ್ಟಿಯಲ್ಲಾ ಸಿನಿಮಾಗಳ ಮೇಲಿದೆ. ಕೆರಿಯರ್ ನಲ್ಲಿ ನೆಲೆಕಂಡುಕೊಳ್ಳಬೇಕೆಂಡಿದ್ದೇನೆ. ಮದುವೆ ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ. ವಿಜಯ್ ಮತ್ತು ಅಮಲಾ ವಿಚ್ಛೇದನಕ್ಕೆ ಸಿನಿಮಾಗಳೇ ಕಾರಣ ಎನ್ನಲಾಗಿದೆ. ವಿಜಯ್ ಕುಟುಂಬರಿಗೆ ಅಮಲಾ ಸಿನಿಮಾಗಳಲ್ಲಿ ಅಭಿನಯಿಸುವುದು ಇಷ್ಟವಿರಲಿಲ್ಲ. ಹಾಗಾಗಿ ಇವರಿಬ್ಬರೂ ದೂರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇದು ಆರ್ಗಾನಿಕ್ ಲೆಹಂಗಾ ಅಂತೆ...ಕಣ್ತುಂಬಿಕೊಳ್ಳಿ!

ಮೊದಲೇ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೈಲು. ತರಹೇವಾರಿ ಸೀರೆ, ...

news

ಮಹಿಳಾ ದಿನಾಚರಣೆಯಂದೇ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್

ಸತ್ಯ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಲವೊಮ್ಮೆ ಸಾಮಾಜಿಕ ...

news

ಶಿವಣ್ಣ ’ಟಗರು’ ಚಿತ್ರದಲ್ಲಿ ಶಿವಕುಮಾರ ಸ್ವಾಮೀಜಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮಂಗಳವಾರ ಈ ...

news

’ಬೆಳ್ಳಿಹೆಜ್ಜೆ’ಯಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ...

Widgets Magazine Widgets Magazine Widgets Magazine