‘ಐಪಿಎಸ್ ರೂಪಾ’ ಚಿತ್ರದಲ್ಲಿ ರೂಪಾ ಪಾತ್ರ ಯಾರು ಮಾಡ್ತಾರೆ ಗೊತ್ತಾ…?

ಬೆಂಗಳೂರು, ಸೋಮವಾರ, 28 ಆಗಸ್ಟ್ 2017 (14:08 IST)

ಬೆಂಗಳೂರು: ಜೈಲಿನ ಅಕ್ರಮಗಳನ್ನ ಬಯಲಿಗೆಳೆದಿದ್ದ ದಿಟ್ಟ ಐಪಿಎಸ್ ಅಧಿಕಾರಿ ರೂಪಾ ಕುರಿತ ಚಿತ್ರ ‘ಐಪಿಎಸ್ ರೂಪಾ’ ನಿರ್ಮಾಣವಾಗಲಿದೆ ಎನ್ನುವ ವಿಷಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಎ.ಎಂ.ಆರ್ ರಮೇಶ್, ಡಿಐಜಿ ರೂಪಾರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.ಐಪಿಎಸ್ ಅಧಿಕಾರಿ ರೂಪಾರನ್ನ ಭೇಟಿಯಾಗಿದ್ದ ನಿರ್ದೇಶಕ ರಮೇಶ್, ಅವರ ವೈಯಕ್ತಿಕ ಜೀವನ, ವೃತ್ತಿ ಜೀವನ ಹಾಗೂ ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ಕುರಿತು ಸಿನಿಮಾ ಮಾಡಲು ರೂಪಾ ಸಹ ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದಿಟ್ಟ ಅಧಿಕಾರಿ ರೂಪಾರ ಪಾತ್ರವನ್ನ ಯಾರು ಮಾಡುತ್ತಾರೆ ಎಂಬುದೇ ಈಗ ತೀವ್ರ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಬಹುಭಾಷಾ ನಟಿಯರಾದ ಅನುಷ್ಕಾ ಹಾಗೂ ನಯನತಾರಾ ಹೆಸರು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಪಕ್ಕಾ ಆಗಿಲ್ಲ. ಸದ್ಯ ರಮೇಶ್, ರಾಜೀವ್ ಗಾಂಧಿ ಹತ್ಯೆ ಕುರಿತ ‘ಆಸ್ಫೋಟ’ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಗಿದ ಕೂಡಲೇ ‘ಐಪಿಎಸ್ ರೂಪಾ’ ಚಿತ್ರ ಸೆಟ್ಟೇರಲಿದೆಯಂತೆ.ಇದರಲ್ಲಿ ಇನ್ನಷ್ಟು ಓದಿ :  
ಐಪಿಎಸ್ ರೂಪಾ ಡಿಐಜಿ ಪರಪ್ಪನ ಅಗ್ರಹಾರ ಅಕ್ರಮ ನಿರ್ದೇಶಕ ಎ.ಎಂ.ಆರ್ ರಮೇಶ್ ಆಸ್ಫೋಟ Ramesh Dig Amr Parappana Agrahara Ips Roopa

ಸ್ಯಾಂಡಲ್ ವುಡ್

news

ಮುಗುಳುನಗೆ ಟ್ರೇಲರ್ ಔಟ್… ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

ಬೆಂಗಳೂರು: ರೊಮ್ಯಾಂಟಿಕ್ ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ್ದ ಗೋಲ್ಡನ್ ...

news

ಉಪೇಂದ್ರ ಮಗಳೂ ಬಣ್ಣ ಹಚ್ಚಲಿದ್ದಾಳೆ!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಫೀಲ್ಡಿಗೆ ಬರುತ್ತೇನೆಂದು ಘೋಷಿಸಿದ್ದರೆ, ಅವರ ಪುಟಾಣಿ ಮಗಳು ...

news

ಪೋರ್ನ್ ವಿಡಿಯೋ ಪ್ರಕಟಿಸಿದ ಬಾಲಿವುಡ್ ಸ್ಟಾರ್ ವಿರುದ್ಧ ದೂರು

ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಆಗಾಗ ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಹಿಂದೊಮ್ಮೆ ಭಾರತ ...

news

ಸಿನಿಮಾ ಅವಕಾಶಕ್ಕಾಗಿ ತಿಮ್ಮಪ್ಪನ ಮೊರೆ ಹೋದ ಶ್ರೀಯಾ..!

ತೆಲುಗಿನ ಖ್ಯಾತ ನಟಿ ಶ್ರೀಯಾ ಸರಣ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಇವತ್ತು ಬೆಳ್ಳಂ ಬೆಳಗ್ಗೆ ...

Widgets Magazine