Widgets Magazine
Widgets Magazine

’ಡಮ್ಕಿ ಡಮಾರ್' ಚಿತ್ರದಲ್ಲಿ ಅರ್ಜುನ್ ಜನ್ಯ ಮುನ್ನುಡಿ

Bangalore, ಸೋಮವಾರ, 23 ಜನವರಿ 2017 (14:51 IST)

Widgets Magazine

ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ ’ಡಮ್ಕಿ ಡಮಾರ್’. ಸದ್ಯದಲ್ಲೇ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲು  ಸಿದ್ದವಾಗಿದೆ. ಈ ಚಿತ್ರದ ಆರಂಭದಲ್ಲಿ ಬರುವ ದೃಶ್ಯದಲ್ಲಿ ಮುನ್ನುಡಿ ಹಾಗೂ ವಿವರಣೆಯನ್ನು ಸಂಗೀತ ನಿರ್ದೇಶಕ ಅವರು ನೀಡಿದ್ದಾರೆ. 
 
ಈಗಾಗಲೇ ಓರ್ವ ಯಶಸ್ವೀ ಸಂಗೀತ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಅವರು ಯಶಸ್ವಿ ಗಾಯಕನೂ ಹೌದು. ಈ ಚಿತ್ರದ ಆರಂಭದಲ್ಲಿ ಚಿತ್ರಕ್ಕೆ ಮುನ್ನುಡಿ ಹೇಳುವ ಮೂಲಕ ಹೊಸ ಸಾಹಸ ಮಾಡಿದ್ದಾರೆ.  ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಸದ್ಗುಣ ಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 
 
ಈಗಾಗಲೇ 85 ಕ್ಕೂ ಹೆಚ್ಚು ಚಿತ್ರಗಳಿಗೆ ರೀ ರೆಕಾರ್ಡಿಂಗ್ ಮಾಡಿರುವ ಸದ್ಗುಣ ಮೂರ್ತಿ ಅವರ ಪುತ್ರ ಪ್ರದೀಪ್ ವರ್ಮ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಶ್ರೀ ಭೂಮಿಕ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಶ್ರೀನಿವಾಸ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.
 
ಈ ಚಿತ್ರಕ್ಕೆ ವೇಲ್ಸ್ ಛಾಯಾಗ್ರಹಣ, ಎಸ್. ಪ್ರದೀಪ್ ವರ್ಮಾ ಸಂಗೀತ, ಸಾಯಿ ಸರ್ವೇಶ ಸಾಹಿತ್ಯ, ಕುಮಾರ ಕೋಟೆ ಕೊಪ್ಪ, ಸಂಕಲನ, ಇಂದ್ರಜಿತ್ ಸಹನಿರ್ಮಾಪಕರಾಗಿದ್ದು, ಪ್ರದೀಪ್ ವರ್ಮ, ಚೈತ್ರ ಶೆಟ್ಟಿ, ಜಗದೀಶ್ ವೆಂಕಿ, ಅನುಷ್ಕಾ ಶೆಟ್ಟಿ, ರಾಜೇಶ, ಶಿವಾನಂದ, ಸುನೀಲ್‍ಕುಮಾರ್, ರವಿರಾಜ್, ಅಂಬಿಕಾ, ಮಣಿ, ಶೋಭಿತಾ, ಇನ್ನು ಮುಂತಾದವರ ತಾರಾಬಳಗವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶ್ರೀದೇವಿ ಮಗಳು ಜಾನ್ವಿ ಬೆಳ್ಳಿಪರದೆಗೆ ಎಂಟ್ರಿ

ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್‌ಗೆ ಅಡಿಯಿಡುವ ದಿನಗಳು ಶೀಘ್ರದಲ್ಲೇ ...

news

ಸಿಂಗಂ ಸ್ಟಾರ್ ಸೂರ್ಯ ಮೊದಲ ಸಂಬಳ ಎಷ್ಟು ಗೊತ್ತಾ?

ಮೊದಲ ಸಂಬಳ, ಮೊದಲ ಉದ್ಯೋಗವನ್ನು ಯಾರೇ ಆಗಲಿ ಮರೆಯಲ್ಲ. ಅದು ಸೆಲೆಬ್ರಿಟಿಯಾಗಲಿ, ಸಾಮಾನ್ಯ ಪ್ರಜೆಯೆ ಆಗಲಿ. ...

news

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ

ನಟಿ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಊಹೆಗೂ ಮೀರಿ ಯಶಸ್ವಿಯಾದ ಚಿತ್ರ ’ಪಿಂಕ್’. ಹಾಗಾಗಿ ಈಗ ಬಾಲಿವುಡ್ ...

news

ಶ್ರೀಕಾಳಹಸ್ತೀಶ್ವರ ದರ್ಶನ ಪಡೆದ ಚಿರಂಜೀವಿ

ಮೆಗಾ ಸ್ಟಾರ್ ಚಿರಂಜೀವಿ ರೀ ಎಂಟ್ರಿ ಕೊಟ್ಟಿರುವ ಖೈದಿ ನಂಬರ್ 150 ಬಾಕ್ಸ್ ಆಫೀಸಲ್ಲಿ ಭಾರಿ ಯಶಸ್ಸು ...

Widgets Magazine Widgets Magazine