ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಬಾಹುಬಲಿ-2 ಮಾಡಿದ ದಾಖಲೆಗಳೆಷ್ಟು ಗೊತ್ತಾ..?

ಹೈದ್ರಾಬಾದ್, ಸೋಮವಾರ, 8 ಮೇ 2017 (21:02 IST)

Widgets Magazine

ಐದು ವರ್ಷಗಳ ಹಿಂದೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಯನ್ನ ಜೊತೆ ಮಾಡಿ ರಾಜಮೌಳಿ ಬಾಹುಬಲಿ ಸಾಹಸಕಕೆ ಕೈಹಾಕಿದಾಗ ಬಹುಶಃ ಈ ಚಿತ್ರ ಇತಿಹಾಸ ನಿರ್ಮಿಸುತ್ತೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಮೊದಲ ಭಾಗದಲ್ಲಿ ವಿಶ್ವಾದ್ಯಂತ ಹೆಸರು ಮಾಡಿದ್ದ ಬಾಹುಬಲಿ, ಅದ್ಬುತ ಸ್ಟೋರಿ, ಮೇಕಿಂಗ್, ಯುದ್ಧದ ಅವಿಸ್ಮರಣೀಯ ಕ್ಷಣಗಳು, ವಿಶಿಷ್ಟ ಡೈಲಾಗ್ ಡೆಲಿವರಿ.. ಹೀಗೆ ಹತ್ತು ಹಲವು ವಿಷಯಗಳಿಂದ ಜನ ಮನನಣೆ ಗಳಿಸಿತ್ತು. ಇದೀಗ ಎಲ್ಲ ದಾಖಲೆಗಳನ್ನ ಪುಡಿಗಟ್ಟಿದೆ.
 


ಬಿಡುಗಡೆಯಾದ ಹತ್ತೇ ದಿನಕ್ಕೆ ಬಾಹುಬಲಿ-2 ಹಲವು ದಾಖಲೆಗಳನ್ನ ಮುರಿದು ಮುಂದೆ ಸಾಗುತ್ತಿದೆ.

1. 1000 ಕೋಟಿ ಗಳಿಕೆ ಕಂಡ ಮೊದಲ ಭಾರತೀಯ ಚಿತ್ರ: ಬಿಡುಗಡೆಯಾದ ಹತ್ತೇ ದಿನಕ್ಕೆ 1000 ಕೋಟಿ ರೂ. ಗಳಿಕೆ ಕಂಡಿರುವ ಬಾಹುಬಲಿ-2 ಈ ಸಾಧನೆ ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಬಾಲಿವುಡ್ ಚಿತ್ರಗಳೇ ಮಾಡಲಾಗದ ಸಾಧನೆಯನ್ನ ಬಾಹುಬಲಿ ಮಾಡಿದೆ.

2. ಮೊದಲ ದಿನವೇ ಗರಿಷ್ಠ ಗಳಿಕೆ: ಬಿಡುಗಡೆಯಾದ ದಿನವೇ ಬಾಹುಬಲಿ-2 ವಿಶ್ವಾದ್ಯಂತ 124 ಕೋಟಿ ಗಳಿಸಿತ್ತು. ಬಾಹುಬಲಿಯನ್ನ ಕಟ್ಟಪ್ಪ ಕೊಂದದ್ದೇಕೆ? ಎಂಬ ಕುತೂಹಲಕಾರಿ ಅಂಶ ಅಭಿಮಾನಿಗಳನ್ನ ಥಿಯೇಟರ್`ಗಳತ್ತ ಸೆಳೆದಿತ್ತು.

3. ಅಮೆರಿಕದಲ್ಲೇ 100 ಕೋಟಿ: ಅಮೆರಿಕದಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಬಾಹುಬಲಿ. ಇನ್ನೂ ಸಹ ಅಮೆರಿಕದ ಚಿತ್ರಮಂದಿರದಲ್ಲಿ ಬಾಹುಬಲಿ ಪ್ರದರ್ಶನ ಕಾಣುತ್ತಿದೆ.
 
4. ಮೊದಲ ದಿನವೇ ಡಬ್ಬಿಂಗ್ ಸಿನಿಮಾ ಗಳಿಸಿದ ದೊಡ್ಡ ಮೊತ್ತ: ಹಿಂದಿ ಭಾಷೆಗೆ ಡಬ್ ಆಗಿದ್ದ ಬಾಹುಬಲಿ-2 ಮೊದಲ ದಿನವೇ 40 ಕೋಟಿ ಗಳಿಸಿತ್ತು. ಇದು ಇದುವರೆಗಿನ ಸಾರ್ವಕಾಲಿಕ ದಾಖಲೆ. ಖಾನ್`ತ್ರಯರ ಸಿನಿಮಾಗಳೇ ಇಷ್ಟು ಇಂಪ್ಯಾಕ್ಟ್ ಮಾಡಿಲ್ಲ.

ಇದರ ಜೊತೆಗೆ ಮೊದಲ ದಿನವೇ 100 ಕೋಟಿ ದಾಟಿದ ಭಾರತ ಸಿನಿಮಾ, ಅತ್ಯಧಿಕ 9000 ಸ್ಕ್ರೀನ್`ಗಳಲ್ಲಿ ತೆರೆ ಕಂಡ ಮೊದಲ ಭಾರತೀಯ ಸಿನಿಮಾ ಎಂಬ ಹಲವು ದಾಖಲೆಗಳನ್ನ ಬಾಹುಬಲಿ-2 ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಆಯ್ಕೆ ರಮ್ಯಾಕೃಷ್ಣ ಆಗಿರಲಿಲ್ಲ..!

ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಬಾಹುಬಲಿ-2 ಚಿತ್ರದಲ್ಲಿ ಅತ್ಯಂತ ಗಮನ ಸೆಳೆಯುವ ಪಾತ್ರ ರಾಜಮಾತೆ ...

news

ಕನ್ನಡ ಚಿತ್ರ ಬಿಟ್ಟು ತಮಿಳು ಚಿತ್ರದತ್ತ ಸಂಯುಕ್ತಾ ಹೆಗಡೆ..?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ಸಂಯುಕ್ತಾ ಹೆಗಡೆ ವಿವಾದಕ್ಕೆ ಸಿಲುಕಿದ್ದಾರೆ. ...

news

ಬಾಹುಬಲಿ ನಿರ್ದೇಶಕರ ಮೇಲೆ ತಮನ್ನಾ ಮುನಿಸು!

ಹೈದರಾಬಾದ್: ಬಾಹುಬಲಿ 2 ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿರುವಾಗಲೇ ಅದರ ತೆರೆಯ ಹಿಂದಿನ ಒಂದೊಂದೇ ...

news

ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಹೀರೋ ಬದಲಾಗಿದ್ದು ಯಾಕೆ ಗೊತ್ತಾ?

ಬೆಂಗಳೂರು: ಧಾರವಾಹಿಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ವಿಶೇಷವೇನಲ್ಲ. ಅದೇ ರೀತಿ ಕಲರ್ಸ್ ಕನ್ನಡ ...

Widgets Magazine Widgets Magazine