ಟಾಸ್ಕ್ ಕಂಪ್ಲೀಟ್ ಮಾಡಲಾಗದೆ ಕಣ್ಣೀರಿಟ್ಟ ಬಾರ್ಬಿ ಡಾಲ್, ಆಶಿತಾ

ಬೆಂಗಳೂರು, ಶುಕ್ರವಾರ, 20 ಅಕ್ಟೋಬರ್ 2017 (17:38 IST)

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ಕಣ್ಣೀರಿನ ಕೋಡಿ ಹರಿಯಿತು. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ನೀಡಿದ್ದ `ಬಾಹುಬಲ’ ಟಾಸ್ಕ್‌ ಮಾಡಲು ಆಗದೆ ಬಾರ್ಬಿ ಡಾಲ್‌ ನಿವೇದಿತಾ ಹಾಗೂ ಆಶಿತಾ ಅರ್ಧಕ್ಕೆ ಟಾಸ್ಕ್‌ ಬಿಟ್ರು.


`ಬಾಹುಬಲ’ ಟಾಸ್ಕ್‌ ಅನ್ವಯ ಎರಡೂ ತಂಡದಲ್ಲಿ ದೈಹಿಕವಾಗಿ ಬಲಶಾಲಿಯಲ್ಲದ ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕಿತ್ತು. ಈ ಎಬ್ಬರೂ ಇತರೆ ಸ್ಪರ್ಧಿಗಳನ್ನು ಹಗ್ಗ ಕಟ್ಟಿದ ಟೈರ್‌ ಮೇಲೆ ಕೂರಿಸಿಕೊಂಡು ಗೆರೆ ಮುಟ್ಟಿಸಬೇಕಾಗಿತ್ತು. ತೇಜಸ್ವಿನಿ ತಂಡದಲ್ಲಿ ಆಶಿತಾ, ಸಿಹಿ ಕಹಿ ಚಂದ್ರು ತಂಡದಲ್ಲಿ ನಿವೇದಿತಾರನ್ನ ಆಯ್ಕೆ ಮಾಡಲಾಗಿತ್ತು. ಇಬ್ಬರೂ ಸಹ ಪ್ರತ್ಯೇಕವಾಗಿ ಒಬ್ಬೊಬ್ಬರನ್ನು ಟೈರ್‌ ಮೇಲೆ ಕೂರಿಸಿಕೊಂಡು ಎಳೆಯಲು ಪ್ರಾರಂಭಿಸಿದ್ರು. ಸತತ ಪ್ರಯತ್ನದ ನಡುವೆ ನಿವೇದಿತಾ ಒಬ್ಬರನ್ನು ಎಳೆದು ಟಾರ್ಗೆಟ್ ರೀಚ್ ಆದ್ರು. ಆದರೆ ಆಶಿತಾ ಮಾತ್ರ ತುಂಬಾ ಕಷ್ಟಪಟ್ಟರು. ಆಟ ಮುಂದುವರೆಸಿದಾಗ ನಿವೇದಿತಾ ಹಾಗೂ ಆಶಿತಾ ಕೈಗೆ ಗಾಯವಾಯಿತು. ನೋವು ತಡೆಯಲಾಗದೆ ಇಬ್ಬರೂ ಸ್ಪರ್ಧಿಗಳು ಕಣ್ಣೀರಿಟ್ಟರು.

ಮೊದಲ ವಾರವೇ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಶಿಪ್ ಬೇಡ ಎಂದು ಅನುಪಮಾ ಕಣ್ಣೀರಿಟ್ಟರು. ಯಾವುದೇ ವಿಷಯಕ್ಕೂ ಮನೆಯ ಸದಸ್ಯರು ತನ್ನ ಮಾತುಕೇಳುತ್ತಿಲ್ಲ. ಏನೇ ಹೇಳಿದರೂ ವಾದ ಮಾಡುತ್ತಿದ್ದಾರೆ ಎಂದು ಅತ್ತರು. ಈ ವೇಳೆ ಸಿಹಿ-ಕಹಿ ಚಂದ್ರು ಸೇರಿದಂತೆ ಹಲವರು ಕ್ಯಾಪ್ಟನ್‌ ಅನುಪಮಾಗೆ ಸಮಾಧಾನ ಮಾಡಿ, ಧೈರ್ಯ ತುಂಬಿದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಚಿವ ಎಚ್ ಎಂ ರೇವಣ್ಣ ಇನ್ನು ಸಿಎಂ!

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಎಚ್ ಎಂ ರೇವಣ್ಣ ಇನ್ನು ಮುಖ್ಯಮಂತ್ರಿಯಾಗಲಿದ್ದಾರೆ! ...

news

ತಮಿಳು ನಟ ವಿಜಯ್ ಮೆರ್ಸಲ್ ಚಿತ್ರಕ್ಕೆ ಮತ್ತೊಂದು ವಿವಾದ

ಚೆನ್ನೈ: ತಮಿಳು ನಟ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರದ ಅಭಿಮಾನಿಗಳು ಬೆಂಗಳೂರಿನ ಥಿಯೇಟರ್ ಗಳ ಮುಂದೆ ...

news

ಪುಟ್ಟಗೌರಿ ಮದುವೆಗೆ ಅಭಿಮಾನಿಗಳು ತಮಾಷೆ ಮಾಡಿದರೂ ಡೋಂಟ್ ಕೇರ್ ಎಂದ ನಿರ್ದೇಶಕ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿ ಬಗ್ಗೆ ...

news

ಕಿಚ್ಚ ಸುದೀಪ್ ದಂಪತಿಗೆ ಬಾಲಿವುಡ್ ನಿಂದಲೂ ಶುಭಾಷಯ! ಕಾರಣ ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾಗೆ ಬಾಲಿವುಡ್, ಸ್ಯಾಂಡಲ್ ವುಡ್ ...

Widgets Magazine
Widgets Magazine