ನಟಿಯನ್ನ ಕಾರಿನಿಂದ ಎಳೆದು ಲೈಂಗಿಕ ಕಿರುಕುಳ

ಕೋಲ್ಕತ್ತಾ, ಬುಧವಾರ, 20 ಸೆಪ್ಟಂಬರ್ 2017 (18:22 IST)

ಶೂಟಿಂಗ್ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ನಟಿಯನ್ನ ತಡೆದ ಕಾಮುಕರು ನಡುರಸ್ತೆಯಲ್ಲಿ ಎಳೆದು ನೀಡಿರುವ ಘಟನೆ ಕೋಲ್ಕತ್ತಾದಲ್ಲಿ ಮಂಗಳವಾರ ನಡೆದಿದೆ.
 


ಬೆಂಗಾಲಿ ನಟಿ ಕಾಂಚನಾ ಮೋಯಿತ್ರಾ ಕಿರುಕುಳಕ್ಕೊಳಗಾದ ನಟಿಯಾಗಿದ್ದು, ದುಷ್ಕರ್ಮಿಗಳು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ದಕ್ಷಿಣ ಕೋಲ್ಕತ್ತಾದ ಬೆಹಲಾದಲ್ಲಿರುವ ತಮ್ಮ ನಿವಾಸಕ್ಕೆ ನಟಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ಸ್ರಿತಿ ಮೋರ್ ಬಳಿಗೆ ಬರುತ್ತಿದ್ದಂತೆ ಕುಡುಕರ ಗುಂಪು ಕಾರಿಗೆ ಕಲ್ಲಿನಿಂದ ಹೊಡೆದಿದ್ದಾರೆ. ಈ ಸಂದರ್ಭ ಡ್ರೈವರ್ ಕಾರು ನಿಲ್ಲಿಸಿದಾಗ ಅಕ್ಷರಶಃ ನರಕದ ದರ್ಶನವಾಗಿದೆ.
 
ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ 30 ವರ್ಷದ ಯುವಕರು ಕಾಂಚನಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೀ ಕಿತ್ತುಕೊಂಡು ಕಾರಿನಿಂದ ಹೊರಗಳೆದು ಲೈಂಗಿಕ ಕಿರುಕುಳ ನೀಡಿದ್ದಾರೆ. 40 ಬಸಿಗೆ ಹೊಡೆಸಿದ್ದಾರೆ. ನಮ್ಮಿಂದೇನಾದರೂ ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇವೆಂದು ನಟಿ ಕೈ ಮುಗಿದು ಗೋಗರೆದರೂ ಬಿಡಲಿಲ್ಲ.  
 
 
1ನನ್ನ ಡ್ರೈವರ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ನನ್ನ ಕೈಹಿಡಿದು ಎಳೆದಾಡಿದರು. ಬಳಿಕ ನನ್ನ ಕೈಯಿಂದ ಡ್ರೈವರ್ ಕಪಾಳಕ್ಕೆ 10 ಏಟು ಮತ್ತು ಅವನ ಕೈಯಿಂದ ನನ್ನ ಕೆನ್ನೆಗೆ 10 ಏಟು ಹೊಡೆಸಿದರು. ಬಳಿಕ ನನ್ನಿಂದ 40 ಬಸಿಗೆ ಹೊಡೆಸಿದರು. ಆ ಸಂದರ್ಭ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ನಟಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಾಚನಾ ಮೋಯಿತ್ರಾ ಬೆಂಗಾಲಿ ನಟಿ ಲೈಂಗಿಕ ಕಿರುಕುಳ Kanchana Moitra Bengali Actress Sexual Harassment

ಸ್ಯಾಂಡಲ್ ವುಡ್

news

ದರ್ಶನ್ ಫೋಟೊ ತೆಗೆದವರ ವಿರುದ್ಧ ಕ್ರಿಮಿನಲ್ ಕೇಸ್: ಮುನಿರತ್ನ

ಬೆಂಗಳೂರು: ಕುರುಕ್ಷೇತ್ರ ಸೆಟ್ ನಲ್ಲಿ ನಟ ದರ್ಶನ್ ಜತೆಯಿದ್ದ ನಟಿ ಪವಿತ್ರ ಗೌಡ ಫೋಟೊ ಸಾಕಷ್ಟು ಚರ್ಚೆಗೆ ...

news

ಕುರುಕ್ಷೇತ್ರದಿಂದ ಹಿರಿಯ ನಟಿ ಲಕ್ಷ್ಮೀ ಹೊರಬಂದಿದ್ದೇಕೆ?

ಬೆಂಗಳೂರು: ಹಿರಿಯ ನಟಿ ಲಕ್ಷ್ಮೀ ಕುರುಕ್ಷೇತ್ರ ಸಿನಿಮಾದಲ್ಲಿ ಕುಂತಿ ಪಾತ್ರ ಮಾಡುತ್ತಾರೆ ಎಂದು ...

news

ಕಾಂಡೋಮ್ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಸನ್ನಿ ಲಿಯೋನ್

ನವದೆಹಲಿ: ಹಾಟ್ ತಾರೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಿಂದಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ...

news

ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ

ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಪಕ್ಕಾ ರಾಜಕಾರಣಿಯಾಗಿ ಬಿಟ್ಟಿದ್ದಾರೆ. ನಂ.1 ನಟಿಯಾಗಿದ್ದ ರಮ್ಯಾ ...

Widgets Magazine
Widgets Magazine