ಫೇಸ್ಬುಕ್ ಲೈವ್`ನಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಥಮ್

ಬೆಂಗಳೂರು, ಬುಧವಾರ, 5 ಏಪ್ರಿಲ್ 2017 (08:20 IST)

Widgets Magazine

ಬಿಗ್ ಬಾಸ್ ಸೀಸನ್-4 ವಿನ್ನರ್ ಒಳ್ಳೆ ಹುಡುಗ ಪ್ರಥಮ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಫೇಸ್ಬುಕ್ ಲೈವ್`ನಲ್ಲೇ ಪ್ರಥಮ್ ನಿದ್ದೆ ಮಾತ್ರೆ ಸೇವಿಸಿದ್ದಾರೆ. ಇದಾದ ಬಳಿಕ ಪ್ರಥಮ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್ ನಂಬರ್`ಗಳು ಸಹ ಸ್ವಿಚ್ ಆಫ್ ಬರುತ್ತಿವೆ.


ನಿನ್ನೆ ಸ್ನೇಹಿತ ಲೋಕಿ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿದೆ. ಬಳಿಕ ಲೋಕೇಶ್ ಮತ್ತು ಪ್ರಥಮ್ ಜಗಳ ನಡೆದಿದೆ. ಬಳಿಕ ಲೋಕೇಶ್, ಬಸವೇಶ್ವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಥಮ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದರಿಂದ ನೊಂದ ಪ್ರಥಮ್ ರಾತ್ರಿ 2 ಗಮಟೆ ಸುಮಾರಿಗೆ ಫೇಸ್ಬುಕ್ ಲೈವ್`ನಲ್ಲಿ ಲೋಕೇಶ್ ವಿರುದ್ಧ ಆರೋಪ ಮಾಡಿದ್ದು,  ನಿದ್ದೆ ಮಾತ್ರೆ ಸೇವಿಸಿದ್ದಾರೆ.

ಪ್ರಥಮ್ ಹೇಳಿದ್ದು..: ನನಗೆ ದುಡ್ಡು ಕೊಡು ಎಂದು ಪೀಡಿಸುತ್ತಿದ್ದಾರೆ. ತುಂಬಾ ಹಿಂಸೆ ಕೊಡುತ್ತಿದ್ದಾರೆ. ನಾನು ಹೊಸ ಮನೆಯಲ್ಲಿದ್ದೇನೆ ಎಂದು ಫೇಸ್ಬುಕ್`ನಲ್ಲಿ ಹಾಕಿದರೆ ಅದಕ್ಕೆ ಕೆಟ್ಟ ಕಮೆಂಟ್ ಹಾಕಿದ್ದಾರೆ. 

ಲೋಕಿ ನನಗೆ ತುಂಬಾ ಟಾರ್ಚರ್ ಮಾಡುತ್ತಿದ್ದಾನೆ. ಬದುಕುವುದಕ್ಕೇ ಬಿಡುತ್ತಿಲ್ಲ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ನನಗೂ ಇನ್ಮುಂದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಾನು ಸಲ್ಮಾನ್ ಖಾನ್ ರಂತೆ ನಿರಪರಾಧಿ ಎಂದು ರಾಖಿ ಸಾವಂತ್

ಲುಧಿಯಾನ: ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ...

news

ನಟಿ ರಾಖಿ ಸಾವಂತ್ ಬಂಧನ

ಮಹರ್ಷಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ಅವರನ್ನ ಪಂಜಾಬ್ ಪೊಲೀಸರು ...

news

ಕನ್ನಡದಲ್ಲಿ ಮಾತನಾಡಿ, ಕುಂದಾಪುರದ ನಂಟು ಬಿಚ್ಚಿಟ್ಟ ಜ್ಯೂ. ಎನ್ಟಿಆರ್

ತೆಲುಗಿನ ದಂತಕತೆ ಎನ್`ಟಿಆರ್ ಮೊಮ್ಮಗ ಜ್ಯೂ. ಎನ್ಟಿರ್ ಬಗ್ಗೆ ಬಹುಶಃ ಕನ್ನಡಿಗರಿಗೂ ಚಿರ ಪರಿಚಿತ. ...

news

ಪ್ರಿಯಾಂಕಾ ಚೋಪ್ರಾ ವಿಶ್ವದ 2ನೇ ಸುಂದರ ಮಹಿಳೆ

ಬಾಲಿವುಡ್, ಹಾಲಿವುಡ್`ನಲ್ಲಿ ತನ್ನ ನಟನೆ ಮತ್ತು ಸೌಂದರ್ಯದ ಮೂಲಕ ಹೆಸರು ಮಾಡಿರುವ ಖ್ಯಾತ ನಟಿ ಪ್ರಿಯಾಂಕಾ ...

Widgets Magazine