ಕಿಮ್ಸ್ ಆಸ್ಪತ್ರೆಯಿಂದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಡಿಸ್ಚಾರ್ಜ್

ಬೆಂಗಳೂರು, ಶನಿವಾರ, 8 ಏಪ್ರಿಲ್ 2017 (14:47 IST)

Widgets Magazine

ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಥಮ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಿದ್ದಾಗಿ ವೈದ್ಯ ಡಾ. ಮಧುಶಂಕರ್ ಹೇಳಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ್ ಯಾವುದೇ ತೊಂದರೆ ಮಾಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಥಮ್, ನನ್ನ ಬಗ್ಗೆ ಹರಡುತ್ತಿರುವ ಇಲ್ಲಸಲ್ಲದ ವದಂತಿಗಳಿಂದ ತುಂಬಾ ನೋವಾಗಿದೆ. ಯಾವುದೇ ನಟಿ ಜೊತೆ ನನಗೆ ಸಂಬಂಧ ಇಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ. ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಇನ್ಮುಂದೆ ಈ ರೀತಿಯ ತಪ್ಪು ಆಗುವುದಿಲ್ಲ. ನಾನು ಯಾವುದೇ ಸಾಲ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ಇದೇವೇಳೆ, ಏಪ್ರಿಲ್ 3ರಂದು ಮಾತ್ರ ನನ್ನ ಅಕೌಂಟಿಗೆ ಬಿಗ್ಬಾಸ್ ಬಹುಮಾನದ ಹಣ ಜಮೆಯಾಗಿದೆ. 15 ಲಕ್ಷ ರೂಪಾಯಿ ಹಣವನ್ನ ನನ್ನ ಹುಟ್ಟೂರಿನ ವಿದ್ಯುತ್ ಸಂಪರ್ಕಕ್ಕೆ ಮತ್ತು 10 ಲಕ್ಷ ರೂಪಾಯಿಯನ್ನ ಯೋಧರ ಕಲ್ಯಾಣ ನಿಧಿಗೆ ಕೊಡುವುದಾಗಿ ಹೇಳಿದ್ದಾರೆ. 15 ದಿನ ವಿಶ್ರಾಂತಿಗಾಗಿ ಊರಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!

ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗಿದ್ದಾರಾ..? ಈ ಪ್ರಶ್ನೆ ಹುಟ್ಟಲು ಕಾರಣ ಬೆಂಗಳೂರಿನ ಮಾಲ್`ವೊಂದರಲ್ಲಿ ...

news

ಬಾಹುಬಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡಿದ ವಾಟಾಳ್ ನಾಗರಾಜ್

ಬೆಂಗಳೂರು: ಬಾಹುಬಲಿ ಭಾಗ 1 ರಿ ರಿಲೀಸ್ ಆಗಿದ್ದರೂ, ಕರ್ನಾಟಕದಲ್ಲಿ ಬಿಡುಗಡೆಗೆ ಕನ್ನಡ ಪರ ಹೋರಾಟಗಾರರು ...

news

ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಮನೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಮಲ್ ...

news

ತಮಾಷೆಗೆ ಡಾರ್ಲಿಂಗ್ ಎನ್ನುವ ಅನುಶ್ರೀಗೆ ಅರ್ಜುನ್ ಜನ್ಯಾ ಪತ್ನಿ ರಿಯಾಕ್ಷನ್

ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ತಮ್ಮ ವೃತ್ತಿಜೀವನದಲ್ಲಿ ಸಾಧನೆಗೈದ ಸಾಧಕರನ್ನ ಕರೆಸಿ ...

Widgets Magazine Widgets Magazine