ಅಶ್ಲೀಲ ಕಾಂಡೋಮ್ ಜಾಹೀರಾತು ಸಮರ್ಥಿಸಿಕೊಂಡ ಹಾಟ್ ಬಿಪಾಶಾ

ನವದೆಹಲಿ, ಮಂಗಳವಾರ, 24 ಅಕ್ಟೋಬರ್ 2017 (16:03 IST)

ಬಾಲಿವುಡ್ ಸ್ಟಾರ್ ಬಿಪಾಶಾ ಬಸು ಆನ್‌ಲೈನ್ ಟ್ರಾಲ್‌ಗಳ ಟೀಕೆಗಳ ಸುರಿಮಳೆಗೆ ಕಾರಣವಾಗಿದ್ದಾರೆ. ಇದಕ್ಕೆ ಕಾರಣ ಕಾಂಡೋಮ್ ಜಾಹೀರಾತು.38 ವರ್ಷ ವಯಸ್ಸಿನ ಬಿಪಾಶಾ ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಜೊತೆಯಲ್ಲಿ ಕಾಂಡೋಮ್ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. 
ಆನ್‌ಲೈನ್ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಬಿಪಾಶಾ, ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಯಾಕೆ ಅಂತಹ ಜಾಹೀರಾತಿನಲ್ಲಿ ನಟಿಸಬೇಕಾಯಿತು ಎನ್ನುವ ಬಗ್ಗೆ ಟೀಕಾಕಾರರಿಗೆ ಸಂದೇಶ ಪೋಸ್ಟ್ ಮಾಡಿದ್ದಾರೆ. 
 
ವಿಶ್ವದ ಎರಡನೇ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿರುವ ನಾವು ಇನ್ನೂ ಸೆಕ್ಸ್ ಮತ್ತು ಕಾಂಡೋಮ್‌ ಪದಗಳ ಮೇಲೆ ನಿಷೇಧವನ್ನು ಹೊಂದಿದ್ದೇವೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
 
ಸೆಕ್ಸ್ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ ಸರಳವಾದ ಮುನ್ನೆಚ್ಚರಿಕೆಯ ಬಳಕೆಯಿಂದ ತಪ್ಪಿಸಬಹುದಾದ ಅನಾಹುತಗಳ ಬಗ್ಗೆ ಎಲ್ಲ ವಿಷಯಗಳನ್ನು ಹೆಚ್ಚು ಓದಬೇಕು ಮತ್ತಷ್ಟು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
 
ಕಾಂಡೋಮ್‌ಗಳೊಂದಿಗೆ ನೀವು ಯೋಜಿತ ಗರ್ಭಧಾರಣೆ ಮತ್ತು ಸಂರಕ್ಷಿತ ಲೈಂಗಿಕತೆಯನ್ನು ಹೊಂದಬಹುದು. ಇದು ಎಚ್ಐವಿ ಮತ್ತು ಎಸ್‌ಟಿಡಿಯಂತಹ ಗಂಭೀರವಾದ ರೋಗಗಳನ್ನು ನಿಗ್ರಹಿಸಬಹುದು. ದಂಪತಿಗಳಾಗಿ ನಾವು ಯೋಚನೆ ಮಾಡಿಯೇ ಜಾಹೀರಾತಿನಲ್ಲಿ ನಟಿಸಲು ಒಪ್ಪಿಕೊಂಡಿದ್ದೇವೆ ಎಂದು ಹಾಟ್ ನಟಿ ಬಿಪಾಶಾ ಬಸು ನುಲಿದಿದ್ದಾಳೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ...

news

ಮೊದಲ ಬಾರಿಗೆ ಬಣ್ಣ ಹಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ...

news

ಪ್ರಭಾಸ್-ಅನುಷ್ಕಾ ನಡುವೆ ಏನೋ ಇದೆ ಎಂದು ಪ್ರೂವ್ ಮಾಡಿತು ಈ ಉಡುಗೊರೆ

ಹೈದರಾಬಾದ್: ಬಾಹುಬಲಿ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಸಮ್ ಥಿಂಗ್ ಇದೆ, ಅವರಿಬ್ಬರೂ ...

news

ನಟ ವಿಶಾಲ್ ಸಂಸ್ಥೆ ಮೇಲೆ ಜಿಎಸ್ ಟಿ ತಂಡ ದಾಳಿ

ಚೆನ್ನೈ: ತಮಿಳು ಸಿನಿಮಾಗೆ ಜಿಎಸ್ ಟಿ ಉರುಳು ಸಿಕ್ಕಿ ಹಾಕಿಕೊಂಡಿದೆ. ಮರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ...

Widgets Magazine
Widgets Magazine