ಫೇಸ್‌ಬುಕ್‌ನಲ್ಲೂ ಅಸಮಧಾನ ಹೊರ ಹಾಕಿದ ದರ್ಶನ್

ಸೋಮವಾರ, 6 ಮಾರ್ಚ್ 2017 (08:12 IST)

Widgets Magazine

ನಿನ್ನೆ ಟ್ವಿಟರ್‌ನಲ್ಲಿ ತಮ್ಮ ಮತ್ತು ಸುದೀಪ್ ನಡುವಿನ ಸ್ನೇಹ ಅಂತ್ಯವಾಗಿದೆ ಎಂದು ಟ್ವೀಟ್ ಮಾಡಿದ್ದ ದರ್ಶನ್ ಇಂದು ಫೇಸ್‌ಬುಕ್‌ನಲ್ಲಿ ಕೂಡ ಅಸಮಧಾನವನ್ನು ಹೊರಹಾಕಿದ್ದಾರೆ.

ನಾನು  ಹಾಗೂ ಸುದೀಪ್ ಇನ್ನು ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗದ ನಟರಷ್ಟೇ. ನಮ್ಮ ನಡುವಿನ ಸ್ನೇಹದ ಕುರಿತು ಯಾವುದೇ ಊಹಾಪೋಹಗಳು ಇಂದಿನಿಂದ ಕೊನೆಗೊಳ್ಳಲಿ, ಎಂದು ದರ್ಶನ್ ಟ್ವೀಟ್ 
 
ಮಾಡಿದ ಬಳಿಕ ಅವರ ಖಾತೆ ಹ್ಯಾಕ್ ಆಗಿದೆ ಎಂದು ಕೆಲ ವಾಹಿನಿಗಳು ಸುದ್ದಿ ಪ್ರಕಟಿಸಿದ್ದವು. ಆದರೆ ತಮ್ಮ ಖಾತೆ ಹ್ಯಾಕ್ ಆಗಿಲ್ಲ ಎಂದು ಫೇಸ್‌ಬುಕ್ ಮೂಲಕ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
 
ಅವರು ಪ್ರಕಟಿಸಿರುವ ಫೇಸ್‌ಬುಕ್ ಸ್ಟೇಟಸ್ ಸರಣಿ ಹೀಗಿದೆ:
 
*ಕೆಲ ಚಾನೆಲ್ಸ್ ಹೇಳುವಂತೆ ಯಾರೇನು ಹ್ಯಾಕ್ ಮಾಡಿಲ್ಲ. ಇದು ನನ್ನ ಖಾತೆ, ಎಲ್ಲವು ನಾನು ಹೇಳಿದ ಮಾತುಗಳೇ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ತುಂಬಾ ಆಲೋಚಿಸಿಯೇ ನಾನು ಹೇಳಲು ಬಯಸುವ ವೇದಿಕೆ. 
- ನಿಮ್ಮ ದಾಸ ದರ್ಶನ್
 
*ಇದೇ ಮೊದಲ ಬಾರಿಗೆ ಈ ವೀಡಿಯೋ ( ಸುದೀಪ್ ಮಾತಿನ ವಿಡಿಯೋ ಪ್ರಕಟಿಸಿ) ನೋಡಿದಾಗ ನನ್ನ ಮನಸ್ಸಿಗೆ ನೋವಾದಂತೂ ನಿಜ. ಈ ಹೇಳಿಕೆ ನೀಡಿದ್ದೇಕೆ!? ಸುದೀಪ್ ರವರು ಕ್ಲಾರಿಟಿ ನೀಡಲಿ .
 
*ಈ ವೀಡಿಯೋಲಿ ಹೇಳಿರುವ ಪ್ರಕಾರ ಅವಕಾಶ ಸಿಗಲು ಸುದೀಪ್ ತಾವೇ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಮಾಡದಿರುವ ಕೆಲಸವನ್ನು ಮಾಡಿದ್ದೀನಿ ಎಂದು ಹೇಳುವುದು ಎಷ್ಟು ಸರಿ?
 
*ನನಗೆ 'ಮೆಜೆಸ್ಟಿಕ್' ಸಿಗಲು ಕಾರಣ - ರಾಮಮೂರ್ತಿ, ಪಿ ಎನ್ ಸತ್ಯ ಮತ್ತು ರಮೇಶ್
 
*Me & aren't Friends Anymore. We are just Actors working for Kannada Industry. No more speculations please. That's the end of it‬.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ದರ್ಶನ್- ಸುದೀಪ್ ಬ್ರೇಕ್ ಅಪ್‌ಗೆ ಕಾರಣವಾದ ವಿಡಿಯೋ ತುಣುಕು

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ಸ್ವತಃ ದರ್ಶನ್ ...

news

ದರ್ಶನ್- ಸುದೀಪ್ ಕುಚುಕು ಸ್ನೇಹ ಅಂತ್ಯ?

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ನಮ್ಮ ನಡುವೆ ಯಾವುದೇ ...

news

ರಜಪೂತರ ಒಪ್ಪಿಗೆ ಇದ್ದರೆ ಮಾತ್ರ ’ಪದ್ಮಾವತಿ’ಗೆ ರಿಲೀಸ್ ಭಾಗ್ಯ

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ ಪದ್ಮಾವತಿ. ಈ ಚಿತ್ರದ ಬಿಡುಗಡೆ ...

news

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪ್ರಿಯಾಂಕಾ ಬಿಕಿನಿ ಚಿತ್ರಗಳು

ದೇಶಿಗರ್ಲ್ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ನಲ್ಲಿ ಪಾದ ಊರಿರುವುದು ಗೊತ್ತೇ ಇದೆ. ತನ್ನ ಚೊಚ್ಚಲ ...

Widgets Magazine