ಗಾಸಿಪ್ ಗಳಿಗೆ ಇತಿಶ್ರೀ ಹಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು, ಮಂಗಳವಾರ, 10 ಅಕ್ಟೋಬರ್ 2017 (14:24 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಹೈದರಾಬಾದ್ ನಲ್ಲಿ ತಮ್ಮ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಾರಕ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ಮಧ್ಯೆ ದರ್ಶನ್ ಅಭಿನಯದ 51, 52, 53ನೇ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ನಡೆಯುತ್ತಿದೆ.


ಆದರೆ ಇದಕ್ಕೆಲ್ಲ ದರ್ಶನ್ ಫೇಸ್ ಬುಕ್ ಪೋಸ್ಟ್ ಮತ್ತು ಟ್ವೀಟ್ ಮಾಡುವ ಮೂಲಕ ಎಲ್ಲಾ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. `ತಾರಕ್ ಚಿತ್ರವನ್ನು ಇಷ್ಟು ಪ್ರೀತಿಯಿಂದ ದೊಡ್ಡ ಮಟ್ಟದ ಯಶಸ್ಸು ನೀಡಿ ಒಪ್ಪಿಕೊಂಡಿರುವುದಕ್ಕೆ ಎಲ್ಲರಿಗೂ ನಮ್ಮ ತಂಡದಿಂದ ಕೃತಘ್ನತೆಗಳು. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ. ತಾರಕ್ ಆದಮೇಲೆ ನನ್ನ 50ನೇ ಚಿತ್ರ ಕುರುಕ್ಷೇತ್ರ. ಅದರ ವಿವರ ಕೆಲ ತಿಂಗಳ ನಂತರ ನಾನೇ ತಿಳಿಸುವೆ ಎಂದು ಪೋಸ್ಟ್ ಮಾಡಿದ್ದಾರೆ.

`ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ 51, 52, 53ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿಸುದ್ದಿಗಳು ಸದ್ಯಕ್ಕೆ ಬೇಡ. ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ. ಈಗ ತಾರಕ್ ಚಿತ್ರಕ್ಕೆ ಬೆನ್ನುತಟ್ಟಿ ನೀವು ತೋರುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿ. ಎಲ್ಲರೂ ತಾರಕ್ ನೋಡಿ ಹರಸಿ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೂಪರ್ ಟಾಕ್ ಟೈಮ್ ನಲ್ಲೇ ಔಟ್ ಆಗಿತ್ತಾ ಚಿರು-ಮೇಘನಾ ಗುಟ್ಟು?

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಚಿರು ಸರ್ಜಾ-ಮೇಘನಾ ರಾಜ್ ವಿವಾಹದ ಬಗ್ಗೆ ವದಂತಿಗಳು ...

news

ಸೃಜನ್ ಲೋಕೇಶ್ ಮಜಾ ಟಾಕೀಸ್ ಬಂದ್!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಕಾಮಿಡಿ ಶೋ ಮಜಾ ಟಾಕೀಸ್ ...

news

ವಿವಾದಗಳ ನಂತರ ಕನ್ನಡದ ಬಗ್ಗೆ ‘ಹೆಮ್ಮೆ’ಯ ಮಾತನಾಡಿದ ಶ್ರುತಿ ಹಾಸನ್

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಬರಲ್ಲ ಎಂದಿದ್ದ ಶ್ರುತಿ ಹಾಸನ್ ವಿವಾದದ ನಂತರ ಎಚ್ಚೆತ್ತುಕೊಂಡಿದ್ದು, ...

news

ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಿಸಿದ ಜುಬೇರ್ ಖಾನ್

ಮುಂಬೈ: ವಿವಾದಗಳಿಂದಲೇ ಸುದ್ದಿಯಾಗುತ್ತಿದೆ ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ. ಅದೇ ರೀತಿ ಸೀಸನ್ 11 ...

Widgets Magazine
Widgets Magazine