Widgets Magazine
Widgets Magazine

ರಾಜಕೀಯ ಎಂಟ್ರಿ ವದಂತಿ ಬಗ್ಗೆ ಖಡಕ್ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (10:10 IST)

Widgets Magazine

ನಾನು ರಾಜಕೀಯಕ್ಕೆ ಬರುತ್ತೇನೆಂದು ಹರಡಿರುವ ಸುದ್ಧಿ ಶುದ್ಧ ಸುಳ್ಳು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ರಾಜಕೀಯದಲ್ಲಿ ಸಿಕ್ಕ ಸಿಕ್ಕವರಿಗೆ ಸಲಾಂ ಹೊಡೆಯಬೇಕು. ಸಲಾಂ ಹೊಡೆಯುವ ಸಂಸ್ಕೃತಿ ನನ್ನದಲ್ಲ. ಹೀಗಾಗಿ, ಸಲಾಂ ಸಂಸ್ಕೃತಿ ಇರುವ ನನಗೆ ಸರಿ ಹೊಂದುವುದಿಲ್ಲ. ಈ ಬಗ್ಗೆ ಹರಡಿರುವ ಸುದ್ದಿಗಳೆಲ್ಲ ಸುಳ್ಳು ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ. ಗುಪ್ತವಾಗಿ ರಾಜಕೀಯಕ್ಕೆ ಸೇರಬೇಕಾದ ಅನಿವಾರ್ಯತೆಯೂ ನನಗೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ವಿಶಿಷ್ಟವಾಗಿ ತಮ್ಮದೇ ಶೈಲಿ ಪ್ರಜಾಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರಜಾಕಾರಣದ ಸಭೆಗಳನ್ನ ಸಹ ಉಪೇಂದ್ರ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್ ಹೆಸರು ಕೂಡ ರಾಜಕೀಯದ ವಿಷಯವಾಗಿ ಬಂದು ಹೋಗಿತ್ತು. ಅದೇ ರೀತಿ ದರ್ಶನ್ ಕೂಡ ರಾಜಕೀಯಕ್ಕೆ ಬರುತ್ತಾರೆ. ರಾಷ್ಟ್ರೀಯ ಪಕ್ಷವೊಂದರ ಮೂಲಕ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎಂಬ ವದಂತೆ ಹಬ್ಬಿತ್ತು. ಈ ಹಿಂದೆ ಅಂಬರೀಷ್ ಅವರ ಪರ ಪ್ರಚಾರ ಬಂದಿದ್ದ ಸಂದರ್ಭದಲ್ಲೂ ದರ್ಶನ್ ರಾಜಕೀಯ ಪ್ರವೇಶದ ಊಹಾಪೋಹಗಳು ಹಬ್ಬಿದ್ದವು. ಇದೀಗ, ಸ್ವತಃ ದರ್ಶನ್ ಅವರೇ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನನ್ನ ಹುಟ್ಟುಹಬ್ಬ ಸೆಲಬ್ರೇಟ್ ಮಾಡಬೇಡಿ: ಉಪೇಂದ್ರ

ಪ್ರಜಾಕಾರಣಿ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಬರ್ತ ಡೇಯನ್ನ ಸೆಲಬ್ರೇಟ್ ಮಾಡದಂತೆ ಅಭಿಮಾನಿಗಳಿಗೆ ...

news

ಬಾಹುಬಲಿ ಪ್ರಭಾಸ್ ಹೊಡೆದಾಟಕ್ಕೇ ಇಷ್ಟೊಂದು ಖರ್ಚು?!

ಹೈದರಾಬಾದ್: ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಯಾವ ಮಟ್ಟಕ್ಕೆ ಏರಿದೆ ಎನ್ನುವುದಕ್ಕೆ ಈ ಸುದ್ದಿಯೇ ...

news

ಸಾವಿನಲ್ಲೂ ಆದರ್ಶ ಮೆರೆದ ನಟಿ ಬಿವಿ ರಾಧಾ

ಬೆಂಗಳೂರು: ಇಂದು ಬೆಳಿಗ್ಗೆ ನಿಧನರಾದ ಹಿರಿಯ ನಟಿ ಬಿವಿ ರಾಧಾ ಸಾವಿನಲ್ಲೂ ಆದರ್ಶ ಮೆರೆದಿದ್ದಾರೆ. ತಮ್ಮ ...

news

ದನ ಕಾಯೋನ್ ಚಿತ್ರ ನಿರ್ಮಾಪಕರ ವಿರುದ್ಧ ಯೋಗರಾಜ್ ಭಟ್ ದೂರು

ಬೆಂಗಳೂರು: ದುನಿಯಾ ವಿಜಿ ಮತ್ತು ಪ್ರಿಯಾಮಣಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ದನ ಕಾಯೋನು ಚಿತ್ರ ...

Widgets Magazine Widgets Magazine Widgets Magazine